Перейти к содержимому

ಸರ್ವಜ್ಞ ವಚನದ ಓದು | EP - 01 | Sarvajnana Vachanagala Odu | Dr. C P Nagaraj |

C P Nagaraj

0:00 / 0:00

ಸರ್ವಜ್ಞ ವಚನದ ಓದು | EP - 01 | Sarvajnana Vachanagala Odu | Dr. C P Nagaraj |

33 213 просмотров · 6 л. назад
C P Nagaraj
2,47 тыс. подписчиков
33 213 просмотров · 6 л. назад
ಕನ್ನಡ ಸಾಹಿತ್ಯ ಲೋಕದಲ್ಲಿ ಸರ್ವಜ್ಞ ಕವಿಯ ವಚನಗಳು ತುಂಬಾ ಪ್ರಸಿದ್ಧಿಯನ್ನು ಪಡೆದಿವೆ. ಇದಕ್ಕೆ ಕಾರಣವೇನೆಂದರೆ, ಜನರ ನಿತ್ಯದ ಬದುಕಿಗೆ ಅಗತ್ಯವಾದ "ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯ" ವನ್ನು ಕುರಿತು ಸರ್ವಜ್ಞ ಕವಿಯು ಜನಮನದಲ್ಲಿ ಅರಿವು ಮತ್ತು ಎಚ್ಚರವನ್ನು ಮೂಡಿಸಿದ್ದಾನೆ. ಸರ್ವಜ್ಞನ ವಚನಗಳನ್ನು ಓದುವುದರಿಂದ ಒಳ್ಳೆಯ ಸಾಮಾಜಿಕ ವ್ಯಕ್ತಿತ್ವ ಎಂದರೆ ಏನೆಂಬುದನ್ನು ನಾವೆಲ್ಲರೂ ತಿಳಿಯಬಹುದು. ಒಳ್ಳೆಯ ಸಾಮಾಜಿಕ ವ್ಯಕ್ತಿತ್ವ ಎಂದರೆ, ವ್ಯಕ್ತಿಯು ತನ್ನ ಮತ್ತು ತನ್ನ ಕುಟುಂಬದ ಒಳಿತಿಗಾಗಿ ಬಾಳುವಂತೆಯೇ ಸಹಮಾನವರ ಮತ್ತು ಸಮಾಜದ ಒಳಿತಿಗೆ ನೆರವಾಗುವಂತಹ ಒಳ್ಳೆಯ ನಡೆನುಡಿಗಳನ್ನು ಹೊಂದಿರುವುದು. ಸರ್ವಜ್ಞ ಕವಿಯ ವಚನಗಳಲ್ಲಿ ನನಗೆ ಮೆಚ್ಚುಗೆಯಾದ ತೊಂಬತ್ತು ವಚನಗಳನ್ನು ಆಯ್ಕೆ ಮಾಡಿಕೊಂಡು, ಪದಗಳಿಗೆ ಅರ್ಥವನ್ನು ಬರೆದು, ಪ್ರತಿಯೊಂದು ವಚನದ ಇಂಗಿತವನ್ನು ವಿವರಿಸಿ "ಸರ್ವಜ್ಞನ ವಚನಗಳ ಓದು" ಎಂಬ ಪುಸ್ತಕವನ್ನು ಪ್ರಕಟಿಸಿದ್ದೇನೆ. ಅಲ್ಲಿ ವಿವರಿಸಿ ವ್ಯಾಖ್ಯಾನಿಸಿರುವ ತೊಂಬತ್ತು ವಚನಗಳ ಆಶಯಗಳನ್ನು ಕುರಿತು ಈಗ ನಿಮ್ಮೊಡನೆ ಮತ್ತೊಮ್ಮೆ ಮಾತನಾಡಲಿದ್ದೇನೆ. Dr. C P Nagaraj, the author of “Sarvajnana Odu”, discusses vachanas written by Sarvajna. He has selected 90 such vachanas, and compiled them into a book which will soon be available even in the e-book format, at mylang.in website. Audio and Video production by: Get Set Jam. www.getsetjam.xyz Abhishek S Murthy Sanjay R S Chandana S Bhagi Contact for Audio and Video production services. (+91) 8762313061 Thumbnails by SamVin Media Creations Contact: +919343859468 (OR) Mail Us: samvinmedia@gmail.com