Перейти к содержимому

|KALIYUGADA BRUNDAVANA|ಕಲಿಯುಗದ ಬೃಂದಾವನ|PRASAD SALYAN Kattathila|POOJA Sinthaje|puraln urithd brundav

PS Creation

0:00 / 0:00

|KALIYUGADA BRUNDAVANA|ಕಲಿಯುಗದ ಬೃಂದಾವನ|PRASAD SALYAN Kattathila|POOJA Sinthaje|puraln urithd brundav

5 979 просмотров · 2 года назад
PS Creation
3,77 тыс. подписчиков
5 979 просмотров · 2 года назад
ಕಟ್ಟತ್ತಿಲ ಶ್ರೀ ಗೋಪಾಲಕೃಷ್ಣ ದೇವರ ಹೊಸ ಹಾಡು song title: KALIYUGADA BRUNDAVANA ಕಲಿಯುಗದ ಬೃಂದಾವನ ಸಾಹಿತ್ಯ: ಅಮರ್ ನಾಥ್ ಪೂಪಾಡಿ ಕಲ್ ಗಾಯನ: ಪ್ರಸಾದ್ ಸಾಲ್ಯಾನ್ ಕಟ್ಟತ್ತಿಲ & ಪೂಜಾ ಕುಲಾಲ್ ಸಿಂತಾಜೆ ವಿನಿತ್ ಸಿಂತಾಜೆ. ನಿರ್ದೇಶನ, ಛಾಯಾಗ್ರಹಣ,ಸಂಕಲನ ಮತ್ತು ಪ್ರಚಾರಕಲೆ: special thanks ----------------------- ಕೃಷ್ಣ ಪ್ರಸಾದ್ ಕುಲಕರ್ಣಿ ಪ್ರಧಾನ ಅರ್ಚಕರು ಕಡ್ತಿಲ ಮಠ. ಹರೀಶ್ ಜೋಗಿ ಕಟ್ಟತ್ತಿಲ ಅಧ್ಯಕ್ಷರು, ಶ್ರೀ ಗೋಪಾಲಕೃಷ್ಣ ಕೃಷ್ಣ ಸೇವಾ ಸಂಘ(ರಿ) ಕಡ್ತಿಲ ಮಠ ಶ್ರೀ ಅಮರೇಶ್ ಶೆಟ್ಟಿ ತಿರುವಾಜೆ ರಂಜಿತ್ ರೈ ಬದಿಯಾರು BEST WISHES ---------------------- PRAKASH madangallu MAHESH Padumoole(Bangalore) HARISH Padumoole(Dubai) PRADEEP PRATHIBHA Kulal bekoor,uppala VIVEK PAVITHRA Kulal Madavu,putture. #tulu_devotional_song #trending #namma_kudla #namma_karavali #ಕಟ್ಟತ್ತಿಲ_ಶ್ರೀ_ಗೋಪಾಲಕೃಷ್ಣ_ದೇವರ_ಹೊಸ_ಹಾಡು ಸಾಹಿತ್ಯ --------- ಪುರಲ್ ನ್ ಉರಿತ್ ದ್ ಬೃಂದಾವನ ಮಲ್ತೆನ... ಕೃಷ್ಣೆ...ಕಟ್ಟತ್ತಿಲನ್...ಕಲಿಗಾಲಡೇ ಉಂಡಾ0ಡ್ ದ್ವಾಪರ....../ಪುರಲ್ / ಮದ್ವೆರೆನ ಗೇನದ ಬೊಲ್ಪು... ಪುಸ್ತಕ ತೀರ್ಥಡೆ ಊರಾ0ಡ್ ಪೊಲ್ಸು....ಪೇರ್ ಪಾಯಿಸ (ಪೈಸಾ) ಇಷ್ಟನೇ ನಿಕ್ಕ್ ...ಚೀಪೆ ಬಜಿಲ್ ನೈವೇದ್ಯ ಉಂಡು... ಭಕ್ತೆರೆನ ಸಾಲ್ ನಿನ್ನಾ ಪೂಜೆನ್ ತೂಯೆರೆ ಕಾತೊಂದು ಉಂಡು .... .... ಪುರಲ್..... ಕಾಳಿಂಗ ಮರ್ದನ ಮಲ್ತೆ... ಗೋವರ್ಧನ್ ನ್ ದೇರ್ತ್ ದ್ ಉಂತ್ಯೆ ಸುದರ್ಶನ ಬಿರೆಲ್ ಡು0ಡು ವೈಜಯಂತಿ ಕಂಟೆಲ್ ಡು0ಡು...ಸ್ವರ್ಗಡಿತ್ತಿ ಪಾರಿಜಾತೋನೇ ರುಕ್ಮಿಣಿಗಾದ್ ಕನತಿನಾಯೆ .. .......... ಕಂಸನ ಕತೆ ಮುಗಿತ್...ಧರ್ಮೋ ನು ಗೆಂದಾದ್...ಅಪ್ಪೆ ಆ ದೇವಕಿಗ್ ಬ್ರಹ್ಮಾಂಡ ನೇ ತೋಜಾಯೇ ಬಾಯಿಡೆ..../ಪುರಲ್ / ಭಕ್ತಿನೇ ಕಾಣಿಕೆ ದೀತೆ.. ಕಷ್ಟದ ಕಾಲ ಕಳೆಲ ಸ್ವಾಮಿ....ತುಳಸಿದ ಮಾಲೆ ಕನತೆ ಬಾಡಂದಿಲೆಕ ತೂಲ ಬದ್ ಕ್....ಗೋಪಾಲಕೃಷ್ಣ ಸ್ವಾಮಿ ನಿನ್ನಾ ಸ್ಮರಣೆ ಉಡಲ್ ಡು0ಡು....ಒಡಿಪುದ ಉಲ್ಲಾಯೇನೆ ಶ್ರೀ ಕೃಷ್ಣ ಸ್ವಾಮಿ ಆನಿ ಸಿರಿ ಮೋನೆನ್ ತೋಜಾಯೆ ಕನಕ ನ ಭಕ್ತಿಗೆ ....ಪುರಲ್... ದೇವಾಲಯದ ಹಿನ್ನೆಲೆ -------------------------- ಕಾಣಲು ಬನ್ನಿ.. ಕಟ್ಟತ್ತಿಲದ ಕೃಷ್ಣನಾಲಯ -ದುರ್ಗಾ ಭಟ್ ಬೊಳ್ಳುರೋಡಿ ಹದಿಮೂರನೆಯ ಶತಮಾನದಲ್ಲಿದ್ದ ಮಧ್ವಚಾರ್ಯರು ಉಡುಪಿಯಲ್ಲಿ ಅಷ್ಠ ಮಠಗಳ ಸ್ಥಾಪನೆಯೊಂದಿಗೆ ದೇಶದೆಲ್ಲೆಡೆ ಸಂಚಾರ ಮಾಡಿ ಕೊನೆಗೆ ಉಡುಪಿಯಲ್ಲೇ ಅದೃಶರಾದರು. ಮಧ್ವಚಾರ್ಯರು ಅದೃಶರಾಗುವ ಮುನ್ನ ತಮ್ಮೆಲ್ಲಾ ಜ್ಞಾನವನ್ನು ತಾಮ್ರದ ಹಾಳೆಗಳಲ್ಲಿ ಬರೆದಿಟ್ಟು ಮಣ್ಣಿನಡಿಯಲ್ಲಿ ಹುದುಗಿಸಿಟ್ಟ ಮತ್ತು ಅವರು ಕಡೆಯದಾಗಿ ಭೇಟಿ ನೀಡಿದಂತಹ ಸ್ಥಳವೇ "ಕಟ್ಟತ್ತಿಲ". ಕಟ್ಟತ್ತಿಲ ಎಂಬುವುದು ಮಂಗಳೂರಿನ ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿನ ಗ್ರಾಮದ ಹೆಸರು. ಮಧ್ವಚಾರ್ಯರು ತಾಮ್ರದ ಹಾಳೆಗಳನ್ನು ಮಣ್ಣಿನಡಿಯಲ್ಲಿಟ್ಟ ಜಾಗವನ್ನು "ಪುಸ್ತಕ ತೀರ್ಥ" ಎಂದು ಕರೆಯುತ್ತಾರೆ. ಈ ಪುಸ್ತಕ ತೀರ್ಥದಲ್ಲಿ ಈಗಲೂ ಸ್ವಲ್ಪ ನೀರು ತೀರ್ಥದ ರೂಪದಲ್ಲಿ ಕಾಣಬಹುದು. ಪುಸ್ತಕ ತೀರ್ಥದ ಸಮೀಪದಲ್ಲಿ ಮಠವಿದ್ದು ಇಲ್ಲಿ ಪಂಚಲೋಹದ ವೇಣುಗೋಪಾಲ ವಿಗ್ರಹವನ್ನು ಸ್ಥಾಪಿಸಿ ಬ್ರಹ್ಮಚಾರಿಯೋರ್ವನನ್ನು ಪೂಜೆಗೆ ನೇಮಿಸಿ ಅಲ್ಲಿಂದ ತೆರಳಿದರು ಹಾಗೂ ಮಧ್ವ ಮತವು ನಾಶವಾದಲ್ಲಿ ಅದರ ಪುನರ್ ಪ್ರಚಾರಕ್ಕೆ ಅಲ್ಲಿನ ತಾಮ್ರದ ಹಾಳೆಗಳಲ್ಲಿ ಬರೆದಿಟ್ಟ ಸಿದ್ದಾಂತಗಳನ್ನು ಹೊರತೆಗೆಯಲು ಮಧ್ವಚಾರ್ಯರ ಪೂರ್ವಾಶ್ರಮದ ಸಹೋದರ ಬರುತ್ತಾರೆಂಬ ಪ್ರತೀತಿಯೂ ಇದೆ. ಕಟ್ಟತ್ತಿಲ ಗೋಪಾಲಕೃಷ್ಣ ಮಠವು ಸುಮಾರು 700 ವರ್ಷಗಳ ಇತಿಹಾಸ ಹೊಂದಿದ್ದು ಇಲ್ಲಿಗೆ ಬಹಳ ಹಿಂದೆ ವಾದಿರಾಜರು ಭೇಟಿ ನೀಡಿದ್ದರೆಂಬ ಕುರುಹಾಗಿ ವಾದಿರಾಜರ ಬ್ರಾಹ್ಮಣ ಶಿಷ್ಯರೋರ್ವರನ್ನು ಭೂತರಾಜ ಎಂದು ಆರಾಧಿಸುತ್ತಿದ್ದಾರೆ. ಪುಸ್ತಕ ತೀರ್ಥದ ಕಾವಲಿಗೆ ಅದರ ಹತ್ತಿರದಲ್ಲಿಯೇ ನಾಗಸಾನಿಧ್ಯವಿದೆ ಎಂಬುವುದು ಇಲ್ಲಿನ ನಂಬಿಕೆ. ಈ ಊರಿಗೆ ಮಧ್ವಚಾರ್ಯರು ಕೊನೆಯದಾಗಿ ಭೇಟಿ ನೀಡಿದ ಕಾರಣ ಇಲ್ಲಿಗೆ ಕಡೇಸ್ಥಳ ಅಥವಾ ಕಡ್ತಿಲ ಎಂಬ ಹೆಸರು ಬಂದಿತ್ತು. ನಂತರ ಕಟ್ಟತ್ತಿಲ ಎಂದಾಯಿತು. ಕಟ್ಟತ್ತಿಲ ಮಠವು ಉಡುಪಿಯ ಅದಮಾರು ಮಠದ ಆಡಳಿತಕ್ಕೊಳಪಟ್ಟಿದೆ. ಇಲ್ಲಿನ ಮೂಲ ವೇಣುಗೋಪಾಲ ವಿಗ್ರಹವು ಅದಮಾರು ಮಠದಲ್ಲಿದೆ. ಮಧ್ವಾಚಾರ್ಯರು ಸ್ಥಾಪಿಸಿದ ಮೂಲ ಕೃಷ್ಣನಿಗೆ ಒಂದು ಸೇರು ಅಕ್ಕಿಯ ನೈವೇದ್ಯ ಹಾಗೂ ಬ್ರಹ್ಮಚಾರಿಗಳಿಂದ ಪೂಜೆ ನಡೆಯಬೇಕು. ಈ ಮಠದ ಕೃಷ್ಣ ದೇವರಿಗೆ ಪ್ರತಿದಿನವು ಎರಡು ಹೊತ್ತಿನ ಪೂಜೆ ನಡೆಯುತ್ತದೆ. ಮಧ್ಯಾಹ್ನದ ಪೂಜೆಗೆ ನೈವೇದ್ಯ ಸಮರ್ಪಿಸಲಾಗುತ್ತದೆ. ಇಲ್ಲಿನ ಕೃಷ್ಣನಿಗೆ ಹಾಲು ಪಾಯಸ ಹಾಗೂ ಸಿಹಿ ಅವಲಕ್ಕಿ ಸಮರ್ಪಣೆ ಬಹಳ ಪ್ರಿಯವಾದದ್ದು. ವಾರದ ಪ್ರತಿ ಶನಿವಾರದಂದು ಭಜನಾ ಸೇವೆ ಇರುತ್ತದೆ. ವಿಶೇಷ ದಿನಗಳಂದು ಸೂರ್ಯಸ್ತಮದಿಂದ ಸೂರ್ಯೊದಯದವರೆಗೆ ಭಜನೆ ಮಾಡಲಾಗುತ್ತದೆ. ಬೇರೆ ಬೇರೆ ಊರಿನ ಹಲವು ಭಜನಾ ಮಂಡಳಿಗಳು ಇದರಲ್ಲಿ ಭಾಗವಹಿಸುವುದು ವಿಶೇಷವಾಗಿದೆ. ಊರಿನ ಹಿರಿಯರು ಹೇಳುವಂತೆ ಸುಮಾರು 70 ವರ್ಷಗಳ ಹಿಂದೆ ಈ ಮಠವು ಕೇವಲ ಒಂದು ಗೋಪುರದಲ್ಲಿತ್ತು ನಂತರ ಬೆಂಕಿ ಅನಹುತಕ್ಕೆ ಸುಟ್ಟು ಹೋದ ಮಠವನ್ನು ಊರಿನವರ ಸಹಕಾರದೊಂದಿಗೆ ಪುನರ್ ನಿರ್ಮಿಸಲಾಯಿತು. ಈ ಮಠದಲ್ಲಿ ಹಿಂದೆ ಜಾತ್ರೆ ನಡೆಯುತಿತ್ತು ಎಂದು ಹೇಳಲಾದರು ಅದಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಿಲ್ಲ. ಆದರೆ ಈಗ ಅದಮಾರು ಮಠದ ಸಹಯೋಗದೊಂದಿಗೆ ವರ್ಷಾವಧಿ ಉತ್ಸವ, ವಿಷು ಸಂಕ್ರಮಣ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿಯು ವಿಜೃಂಭಣೆಯಿಂದ ಜಾತಿ-ಮತಗಳ ಬೇಧವಿಲ್ಲದೆ ಊರಿನ ಎಲ್ಲಾ ಜನರ ಸಹಕಾರದೊಂದಿಗೆ ನಡೆಯುತ್ತದೆ. ಬಹಳಷ್ಟು ಇತಿಹಾಸ ಹೊಂದಿರುವ ಈ ಮಠವು ಅಷ್ಟಾಗಿ ಎಲ್ಲಿಯೂ ಗುರುತಿಸಲ್ಪಟ್ಟಿಲ್ಲ. ಕಟ್ಟತ್ತಿಲ ಮಠದ ನಿರ್ವಹಣೆಯನ್ನು ಗೋಪಾಲಕೃಷ್ಣ ಸೇವಾ ಸಂಘದವರು ನಡೆಸಿಕೊಂಡು ಹೋಗುತ್ತಿದ್ದಾರೆ. ಇತ್ತೀಚೆಗೆ ಕೆಲವು ಜೀರ್ಣೋದ್ಧಾರ ಕಾರ್ಯಗಳು ನಡೆದರೂ ಊರಿನವರನ್ನು ಹೊರತಾಗಿ ದೂರದ ಊರಿನಲ್ಲಿ ಹೆಸರು ಕಂಡಿಲ್ಲ. ಕೆಲವೊಂದು ದೂರದ ಪ್ರವಾಸಿಗರು ಇಲ್ಲಿ ಪುಸ್ತಕ ತೀರ್ಥದ ದರ್ಶನಕ್ಕೆ ಬರುತ್ತಾರೆ. ಮಠದ ಎದುರೆ ಹರಿಯುವ ಹೊಳೆ, ಸುತ್ತಲೂ ಹಸುರಿನಿಂದ ಕಂಗೊಳಿಸುವ ಪರಿಸರ ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಪೇಟೆ ಗದ್ದಲಗಳು ಇಲ್ಲದ ಶಾಂತ ವಾತವರಣದಲ್ಲಿ ಮಠವಿರುವುದು ನಗರ ವಾಸಿಗಳಿಗೆ ಭಕ್ತಿಯೊಂದಿಗೆ ಮನಸಿಗೆ ಮುದ ನೀಡುವ ಸ್ಥಳವಾಗಿದೆ