Sri Saptamathruka Chowdeshwari Temple Mysore II ಶ್ರೀ ಸಪ್ತ ಮಾತೃಕಾ ಚೌಡೇಶ್ವರಿ ದೇವಸ್ಥಾನ ಮೈಸೂರು
SRI THAGYAMMA DEVI
0:00 / 0:00
Sri Saptamathruka Chowdeshwari Temple Mysore II ಶ್ರೀ ಸಪ್ತ ಮಾತೃಕಾ ಚೌಡೇಶ್ವರಿ ದೇವಸ್ಥಾನ ಮೈಸೂರು
1 393 просмотра · 7 лет назад
SRI THAGYAMMA DEVI
45,6 тыс. подписчиков
1 393 просмотра · 7 лет назад
ಶ್ರೀ ಸಪ್ತ ಮಾತೃಕಾ ಚೌಡೇಶ್ವರಿ ದೇವಸ್ಥಾನ
ಈ ದೇವಾಲಯದ ವೈಶಿಷ್ಟ್ಯಗಳು
ಪ್ರಪ್ರಥಮವಾಗಿ ಸಪ್ತಮಾತೃಕೆಯರಿಗೇ ಮೈಸೂರಿನಲ್ಲಿ ದೇವಾಲಯವನ್ನು ನಿರ್ಮಿಸಿರುವುದು ಅದ್ವೀತಿಯವಾಗಿದೆ. ಈ ದೇವಾಲಯವು ಮೈಸೂರು ಕೇಂದ್ರಕ್ಕೆ ವಾಯುವ್ಯ ದಿಕ್ಕಿನಲ್ಲಿ ಇದ್ದು ಆಗಮಶಾಸ್ತ್ರಕ್ಕೆ ಅನುಗುಣವಾಗಿದೆ.
ಸ್ಥಳ ಪ್ರಾಶಸ್ತ್ರ್ಯ : ಈಶಾನ್ಯ ದಿಕ್ ಪ್ಲವ ನೈಋತಿ ಔನ್ನತ್ಯವೂ, ಸುರಭಿಗಂಧಯುಕ್ತವೂ ಆದ ಸುಪದ್ಮಾ ಭೂಲಕ್ಷಣ, ದಿಕ್ ಪರಿಚ್ಛೇದ, ವೃಷಭ ಯೋನಿ, ವಾಸ್ತುಮಂಡಲ, ಆಮಾಯಜಪಾಯ, ಕ್ಷೇತ್ರವೃದ್ಧಿ, ದೇವಾಂಶಾದಿಗಳನ್ನು ಸಾಧಿಸಿ ನಿರ್ಮಿಸಲಾಗಿದೆ. ಅಧಿಷ್ಠಾನವು ಖುರಾದಿ ಷಡ್ಬರ್ಗ ಯುಕ್ತವಾಗಿದೆ.
ಮೂರ್ತಿ ವೈಶಿಷ್ಟ್ಯ : ಈ ಗರ್ಭಗುಡಿಯ ಸಪ್ತಮಾತೃಕೆಯರನ್ನು ಆಗಮ ಶಾಸ್ತ್ರಕ್ಕೆ ಅನುಗುಣವಾಗಿ ಮೂರ್ತಿ ಶಿರೋವಿನ್ಯಾಸ, ಆಸನ – ಆಯುಧಾದಿಗಳು ಮತ್ತು ವಾಹನಾದಿಗಳನ್ನು ರೂಪಿಸಲಾಗಿದೆ. ಗರ್ಭಗುಡಿಯಲ್ಲಿಯೇ ದೇವಿಯರ ಮುಂಭಾಗದಲ್ಲಿ ಅಖಂಡ ಶಿಲಾ ಚಕ್ರ ಚಿದಂಬರ ಮೇರು ಪ್ರಸ್ತಾರ ವಿನ್ಯಾಸ ಮತ್ತೊಂದು ವಿಶೇಷ. ಅದರ ಮುಂಭಾಗದ ಬಲಭಾಗದಲ್ಲಿ ಶ್ರೀ ಮಹಾಗಣಪತಿಯನ್ನೂ ಹಾಗೂ ಎಡಭಾಗದಲ್ಲಿ ಭೈರವಮೂರ್ತಿಯನ್ನೂ ಹಾಗೂ ಉತ್ತರ ಭಾಗದಲ್ಲಿ ಸುಖದುಃಖದೇವಿಯರನ್ನೂ ಸ್ಥಾಪಿಸಲಾಗಿದೆ.
ದೇವಿಪಂಚಾಯತನ ವೈಶಿಷ್ಟ್ಯ : ಮುಖ ಮಂಟಪದಲ್ಲಿ ದೇವಿಯರ ಈಶಾನ್ಯದಲ್ಲಿ ದಕ್ಷಿಣಾಭಿಮುಖವಾಗಿ ದಕ್ಷಿಣಾಮೂರ್ತಿ ವಿಗ್ರಹವನ್ನೂ ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣುವೇ ಎಂಬ ಉಕ್ತಿಗೆ ಅನುಗುಣವಾಗಿ ಆಗ್ನೇಯದಲ್ಲಿ ಶ್ರೀ ಸತ್ಯನಾರಾಯಣನನ್ನು ಉತ್ತರಾಭಿಮುಖವಾಗಿಯೂ ನೈಋತ್ಯದಲ್ಲಿ ವಿನಾಯಕನನ್ನೂ ವಾಯವ್ಯದಲ್ಲಿ ಸೂರ್ಯನನ್ನೂ ಸ್ಥಾಪಿಸಲಾಗಿದೆ. ಗರ್ಭಗುಡಿಯ ಲಲಾಟಪಟ್ಟಿಕೆಯಲ್ಲಿ ಶ್ರೀ ಗಜಲಕ್ಷ್ಮೀ ವಿಗ್ರಹ ಮತ್ತು ಘಟಪಲ್ಲವಗಳನ್ನೂ ಮಕರತೋರಣಗಳನ್ನೂ ವಿನ್ಯಾಸಗೊಳಿಸಲಾಗಿದೆ. ಮುಖ ಮಂಟಪದ ಮೇಲ್ಫಾವಣಿಯ ಒಳಭಾಗದಲ್ಲಿ (ವಿತಾನ) ಮೂರು ಕಮಲವಿದ್ದು ಅದನ್ನು ಕ್ಷಿಪ್ತೋಕ್ಷಿಪ್ತ ಕ್ರಮದಲ್ಲಿ ವಿನ್ಯಾಸಗೊಳಿಸಲಾಗಿದೆ. ಕಂಬಗಳ ವೈವಿದ್ಯತ್, ಉತ್ತರ ಪೂರ್ವ ದಕ್ಷಿಣ ದ್ವಾರಗಳೂ, ಪ್ರಧಾನ ದ್ವಾರದ ಎಡಬಲಗಳಲ್ಲಿ ಸಿಂಹಗಳು ಅವುಗಳ ಪಕ್ಕಗಳಲ್ಲಿ ಧಾತೃ ವಿಧಾತೃರೆಂಬ ದ್ವಾರಪಾಲಕರ ವಿನ್ಯಾಸ. ಅವರ ಮುಂಭಾಗದಲ್ಲಿ ಅಖಂಡ ಶಿಲಾ ಧ್ವಜಸ್ಥಂಭ 31 ಅಡಿ ಎತ್ತರದ್ದು ಮತ್ತು ಬಲಿಪೀಠ. ಅದರ ಮುಂದೆ ಮಹಾದ್ವಾರವೂ ವಿನ್ಯಾಸಗೊಂಡು ಇದು ಒಂದು ಧಾರ್ಮಿ, ಸಾಂಸ್ಕೃತಿಕ, ಕಲಾ ಕೇಂದ್ರವಾಗಿದೆ.
Temple Timings 7:00am to 11:00am
5:30pm to 9:00pm
http://www.karnatakatemples.kar.nic.i...
#MYSORE #VIJAYANAGAR #TEMPLE
Hey...Guys Subscribe Sri Thagyamma Devi Youtube Channel And Support Me, & Download Sri Thagyamma Devi Youtube Channel Official App Download App Now👇👇👇
https://drive.google.com/file/d/1GGab...