ಶ್ರೀ ರಾಮಲಿಂಗೇಶ್ವರ ಶಿವಲಿಂಗಕ್ಕೆ ಕಂತೆದರಿಸಲಾಯಿತು.
Benalmath Kantiworks
0:00 / 0:00
ಶ್ರೀ ರಾಮಲಿಂಗೇಶ್ವರ ಶಿವಲಿಂಗಕ್ಕೆ ಕಂತೆದರಿಸಲಾಯಿತು.
348 просмотров · 1 год назад
Benalmath Kantiworks
9,18 тыс. подписчиков
348 просмотров · 1 год назад
ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿರುವ ಅಂದಾಜು 17ನೇ ಶತಮಾನದಲ್ಲಿ ಶಿವಯೋಗಿ ಪರಮಪೂಜ್ಯ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯರು ಇವರಿಂದ ಸ್ಥಾಪನೆಗೊಂಡಂತಹ ಮುದೇನೂರು ಗ್ರಾಮದ ಶ್ರೀಮಠವು ಪುಣ್ಯಕ್ಷೇತ್ರವಾಗಿದೆ. ಇದರ ಒಳಗಡೆ ಇರುವ ಶ್ರೀ ರಾಮಲಿಂಗೇಶ್ವರ ದೇವರು ಅಪಾರವಾದ ಭಕ್ತ ಬಳಗವನ್ನ ಹೊಂದಿದೆ ಈ ಅದ್ಭುತವಾದ ಶಿವಲಿಂಗ ಮೂರ್ತಿಗೆ ಅನೇಕ ವರ್ಷಗಳ ಹಿಂದೆ ಧರಿಸಿದ ಕಂತೆ ಭಿನ್ನವಾಗಿದ್ದರಿಂದ ಪುನಹ ಕಂತೆ ಧರಿಸಲಾಯಿತು.
ಪಾವನ ಕ್ಷೇತ್ರವಾದ ಮುದೇನೂರು ಗ್ರಾಮದ ಶ್ರೀಮಠವು ಅಕ್ಷರ, ಅನ್ನ ಹಾಗೂ ಜ್ಞಾನದಾಸೋಹವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದೆ. ಜಾತ್ಯಾತೀತವಾಗಿ ಅಪಾರವಾದ ಭಕ್ತ ಬಳಗವನ್ನು ಹೊಂದಿರುವ ಶ್ರೀ ಮಠವು ಅನೇಕ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಾ ಜನ ಮೆಚ್ಚುಗೆಯನ್ನು ಪಡೆದ ಜನಸಾಮಾನ್ಯರ ಜೀವನಾಡಿಯಾಗಿದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಕಂತೆ ಕಾಯಕ ಮಾಡಲಿಕ್ಕೆ ಆಮಂತ್ರಣ ವಿತ್ತ ಶ್ರೀ ಮಠದ ಪೂಜ್ಯರಿಗೆ ಹಾಗೂ ಆಡಳಿತ ಮಂಡಳಿಯವರಿಗೆ ಮತ್ತು ಕಂತೆ ಕಾರ್ಯ ಪೂರ್ಣಗೊಳ್ಳುವವರೆಗೂ ಆಧಾರಣೀಯ ಆತಿತ್ಯ ಪ್ರಸಾದ ಉಪಚಾರ ಹಾಗೂ ಯೋಗಕ್ಷೇಮವನ್ನ ಮನಪೂರ್ವಕವಾಗಿ ನೋಡಿಕೊಂಡಂತಹ ಪೂಜ್ಯರ ಆಪ್ತ ಸಹಾಯಕರಾದ ಶ್ರೀಯುತ ಅಮರೇಶ ಹಾಗೂ ಪೂಜಾರಿ ಹನುಮಂತ ಹೂಗಾರ ಮತ್ತು ಗ್ರಾಮಸ್ಥರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.