Перейти к содержимому

ದೇಶ ವಿರೋಧಿ ಕೃತ್ಯ ಖಂಡಿಸಿ ಕಾಫಿನಾಡಲ್ಲಿ ಬೃಹತ್ ಪ್ರತಿಭಟನೆ.

Bhumika News

0:00 / 0:00

ದೇಶ ವಿರೋಧಿ ಕೃತ್ಯ ಖಂಡಿಸಿ ಕಾಫಿನಾಡಲ್ಲಿ ಬೃಹತ್ ಪ್ರತಿಭಟನೆ.

110 просмотров · 3 дня назад
Bhumika News
4,93 тыс. подписчиков
110 просмотров · 3 дня назад
ಚಿಕ್ಕಮಗಳೂರು ನಗರದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಹಾಕಿ ಪಾಕಿಸ್ತಾನ ಪರವಾದ ಹಾಡನ್ನು ಸೇರಿಸಿ ರಾಷ್ಟ್ರ ವಿರೋಧಿ ಕೃತ್ಯ ನಡೆಸಿರುವುದನ್ನು ವಿರೋಧಿಸಿ ಆಗಸ್ಟ್ 31ರಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ಹಾಗೂ ತ್ರಿವರ್ಣ ಧ್ವಜದೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದು ರಾಷ್ಟ್ರ ಸುರಕ್ಷತಾ ಸಮಿತಿ ಸಂತೋಷ್ ಕೋಟ್ಯಾನ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಪಾಕಿಸ್ತಾನದ ಮುಜಾಹಿದ್ ಗಳು ಈ ಪಾಕಿಸ್ತಾನದ ಭೂಮಿಯ ರಕ್ಷಕರು ನಮ್ಮ ತಂಟೆಗೆ ಯಾರಾದರೂ ಬಂದರೆ ಕಡಿದು ಹಾಕುತ್ತೇವೆ ಎಂಬ ಹಾಡಿನ ಮೂಲಕ ರಾಷ್ಟ್ರ ವಿರೋಧಿ ಕೃತ್ಯಕ್ಕೆ ಒಂದು ಗುಂಪು ವ್ಯವಸ್ಥಿತ ರೀತಿಯಲ್ಲಿ ಕೈ ಹಾಕಿದೆ ಇದನ್ನ ತೀವ್ರವಾಗಿ ಖಂಡಿಸುತ್ತೇವೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬೆಳಗ್ಗೆ 11:00ಗೆ ತಾಲೂಕು ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದ್ದು, ಸಭೆಯಲ್ಲಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಲಿದ್ದಾರೆ, ಸಭೆಯ ನಂತರ ತಾಲೂಕು ಕಚೇರಿಯಿಂದ ಎಂ ಜಿ ರಸ್ತೆಯ ಮುಖಾಂತರ ಅಜಾದ್ ಪಾರ್ಕ್ ವರೆಗೆ ತ್ರಿವರ್ಣ ಧ್ವಜದೊಂದಿಗೆ ಮೆರವಣಿಗೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರಂಜಿತ್ ಶೆಟ್ಟಿ, ಶ್ಯಾಮ್, ಸಚಿನ್, ಭಗವಾನ್, ಮಂಜುನಾಥ್ ಉಪಸ್ಥಿತರಿದ್ದರು.