ಶ್ರೀ ವಿಠೋಬಾ ರುಕುಮಾಯೀ ದೇವರ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸುಸಂಪನ್ನ .
SHREE SHANKARA HD
0:00 / 0:00
ಶ್ರೀ ವಿಠೋಬಾ ರುಕುಮಾಯೀ ದೇವರ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸುಸಂಪನ್ನ .
228 просмотров · 1 месяц назад
SHREE SHANKARA HD
5,41 тыс. подписчиков
228 просмотров · 1 месяц назад
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಕಪಿಲಾ ನದಿ ತಟದಲ್ಲಿರುವ ನೆಕ್ಕರಡ್ಕ ಅಂಬರ ಕಾಪು ಹಚ್ಚ ಹಸುರಿನ ತೆಂಗು ಕಂಗು ತೋಟಗಳ ಮಧ್ಯೆ ಶ್ರೀ ವಿಠೋಬಾ ರುಕುಮಾಯೀ ದೇವರ ಸಾನಿಧ್ಯ.
ಜೀರ್ಣಗೊಂಡ ಆಲಯ ನೆಕ್ಕರಡ್ಕ ವಾಳ್ಯ ಹೆಬ್ಬಾರರ ನೇತೃತ್ವದಲ್ಲಿ ಭಕ್ತರು ಸೇರಿ ಜೀರ್ಣೋದ್ಧಾರಗೊಂಡು ನೂತನ ಆಲಯ ನಿರ್ಮಾಣಗೊಂಡು ಪುನಃ ಪ್ರತಿಷ್ಠೆ ಕುಂಭಾಭಿಷೇಕದ ಸಂಭ್ರಮ ಮಡುಗಟ್ಟಿದೆ.
ಪರಭವ ನಾಮ ಸಂವತ್ಸರದ ಚೈತ್ರ ಬಹುಳ ಅಷ್ಟಮಿ ನವಮಿ ದಶಮಿ ದಿನಾಂಕ 10 11 12 ಏಪ್ರಿಲ್ 2026 ದಿನಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀದೇವರ ಪುನಃ ಪ್ರತಿಷ್ಠ ಕಾರ್ಯಕ್ರಮ ಸಂಪನ್ನ.
ಈ ಸಂದರ್ಭ ತಂತ್ರಿಗಳಾದ ಶ್ರೀ ಸತ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ ಸ್ವಸ್ತಿ ಪುಣ್ಯಾತ್ಮ ಮಧುವರ್ಕ ಸಹಿತ ಆಚಾರ್ಯಾದಿ ಋತ್ವಿಕ್ ವರಣ, ವಾಸ್ತುಪ್ರಸಾದ್ ಶುದ್ಧಿ ಹೋಮ ಸುದರ್ಶನ ಹೋಮ ಬಲಿ ಉದಕಶಾಂತಿ, ಸಗ್ರಹ ಸಹಿತ ಮೃತ್ಯುಂಜಯ ಶಾಂತಿ, ಕೂಪಶಾಂತಿ, ಬಿಂಬ ಕ್ಶಾಲನ, ಅಭಿಷೇಕ ಪ್ರತಿಷ್ಠೆ ಕುಂಭಾಭಿಷೇಕ ಸುಸಂಪನ್ನ. ಬ್ರಹ್ಮಕಲಶೋತ್ಸವ ಗೌರವಾಧ್ಯಕ್ಷರಾದ ಶ್ರೀ ರಮೇಶ ಹೆಬ್ಬಾರ್ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶ್ರೀ ಅನಂತ ಗೋಖಲೆ, ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಜಿತೇಂದ್ರ ಹೆಬ್ಬಾರ್ ಇವರ ಮಾರ್ಗದರ್ಶನದಲ್ಲಿ,
ಕಾರ್ಯಾಲಯ ಜಮಾ ಉಗ್ರಾಣ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ ಪಾಕ ಶಾಲೆ ವಿವಿಧ ಗಣ್ಯರಿಂದ ಉದ್ಘಾಟನೆ ನೆರವೇರಿತು. ಮಹಿಳೆಯರು ವಿಷ್ಣು ಸಹಸ್ರನಾಮ ಪಾರಾಯಣ ನೆರವೇರಿಸಿ,
ವಿವಿಧ ಭಜನಾ ಮಂಡಳಿಗಳು ಈ ಸಂದರ್ಭ ಭಜನಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಕಲ್ಕುಡ ಕಲ್ಲುರ್ಟಿ ರಾಜನ್ ದೈವಗಳಿಗೆ ಅಗೆಲು ಸೇವೆ ಭಂಡಾರ ಇಳಿಸುವುದು ಎಣ್ಣೆಬೂಳ್ಯ ಗಗ್ಗರಸೇವೆ ನರ್ತನ ಸೇವೆ ಜಿಟಿಗೆ ಸೇವೆ ಅಣಿ ಸೇವೆ, ನಂಬಿಕೆ, ಹಾಲು ಹಣ್ಣು ಸೇವೆಗಳು ನೆರವೇರಿದವು. ಆಗಮಿಸಿದ ಅತಿಥಿ ಗಣ್ಯರಿಗೆ ಭಕ್ತ ವರ್ಗಕ್ಕೆ ಅನ್ನದಾನ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.
ಈ ಸಂದರ್ಭ ಶ್ರೀ ಪ್ರಭಾಕರ ಹೆಬ್ಬಾರ್, ಶ್ರೀ ದಿವಾಕರ ತಾಮಂನ್ಕಾರ್ ಶ್ರೀ ಶಂಕರ ಗೋಖಲೆ ಶ್ರೀ ನರಸಿಂಹ ಪಾಳಂದೆ ಇವರು ಉದ್ಘಾಟಕರಾಗಿ ಭಾಗವಹಿಸಿದ್ದರು.
ಅನ್ನದಾನಕ್ಕೆ ಬೇಕಾದ ದಿನಸಿ ಪದಾರ್ಥಗಳನ್ನು ಮುಖ್ಯವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಸೌತಡ್ಕ ಮತ್ತು ಭಕ್ತರು ಹೊರೆ ಕಾಣಿಕೆಯ ರೂಪದಲ್ಲಿ ಸಮರ್ಪಿಸಿದ್ದರು.