Перейти к содержимому

ಶ್ರೀ ಜಗನ್ನಾಥದಾಸರು ರಚಿಸಿರುವ ದುರ್ಗಾ ರಂಗೋಲಿ...

Jeevanaa Belakuu | Dr. Anupama

0:00 / 0:00

ಶ್ರೀ ಜಗನ್ನಾಥದಾಸರು ರಚಿಸಿರುವ ದುರ್ಗಾ ರಂಗೋಲಿ...

23 876 просмотров · 3 года назад
Jeevanaa Belakuu | Dr. Anupama
5,71 тыс. подписчиков
23 876 просмотров · 3 года назад
ಶ್ರೀ ವಿಜಯದಾಸರು ರಚಿಸಿರುವ ದುರ್ಗಾ ಸುಳಾದಿ ಇದನ್ನ ಮೂರು ಬಾರಿ ಪುನಃಶ್ಚರಣ ಮಾಡಬೇಕು ದುರ್ಗಾ ದುರ್ಗೆಯೆ ಮಹಾ ದುಷ್ಟ ಜನ ಸಂಹಾರೆ ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮಭರ್ಗಾದಿಗಳಿಗೆಲ್ಲಗುಣಿಸಿದರು ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತದೇವಿ ವರ್ಗಕ್ಕೆ ಮೀರಿದ ಬಲ ಸುಂದರಿ ದುರ್ಗಣದವರ ಭಾದೆ ಬಹಳವಾಗಿದೆ ತಾಯಿ ದುರ್ಗತಿಹಾರೇ ನಾನು ಪೇಳುವುದೇನು ದುರ್ಗಂಧವಾಗಿದೆ ಸಂಸ್ಕೃತಿ ನೋಡಿದರೆ | ನಿರ್ಗಮ ಕಾಣೆನಮ್ಮ ಮಂಗಳಾಂಗೆ |ದುರ್ಗೆ ಹೇ ದುರ್ಗೆ ಮಹಾ ದುರ್ಗೆ ಭೂದುರ್ಗೆ ವಿಷ್ಣು ದುರ್ಗೆ ದುರ್ಜಯೆ ದುರ್ಧಕ್ಷೆ ಶಕ್ತಿ |ದುರ್ಗ ಕಾನನ ಗಹನ ಪರ್ವತ ಘೋರ ಸರ್ಪ ಗರ್ಗರ ಶಬ್ದ ವ್ಯಾಘ್ರ ಕರಡಿ ಮೃತ್ಯು | ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ | ದುರ್ಗಣ ಸಂಕಟ ಪ್ರಾಪ್ತವಾಗೆ | ದುರ್ಗಾ ದುರ್ಗೆ ಎಂದು ಉಚ್ಚ ಸ್ವರದಿಂದ ನಿರ್ಗಳಿತನಾಗಿ ಒಮ್ಮೆ ಕೂಗಿದರೂ ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರೂ | ಸುರ್ಗುಣ ಜಯ ಜಯವೆಂದು ಪೊಗಳುತಿರೆ | ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೂತೆ | ನಿರ್ಗುಡಿದಂತೆ ಲೋಕಲೀಲೆ ನಿನಗೆ | ಸ್ವರ್ಗಂಗಾಜನಕ ನಮ್ಮ ವಿಜಯವಿಠಲನಂಘ್ರಿ | ದುರ್ಗಾಶ್ರಯ ಮಾಡಿ ಬದುಕುವಂತೆ ಮಾಡು ॥ ೧ ॥ ಅರಿದರಾಂಕುಶ ಶಕ್ತಿ ಪರಶು ನೇಗಲಿಖಡ್ಗ | ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ | ವರ ಅಭಯ ಮುಸಲ ಪರಿ ಪರಿ ಆಯುಧವ ಧರಿಸಿ ಮೆರೆವ ಲಕುಮಿ ಸರಸಿಜ ಭವರುದ್ರ – ಸರುವ ದೇವತೆಗಳ ಕರುಣಾಪಾಂಗದಲ್ಲಿ | ನಿರೀಕ್ಷಿಸಿ ಅವರವರ ಸ್ವರೂಪಸುಖ ಕೊಡುವ | ಸಿರಿಭೂಮಿ ದುರ್ಗಾ ಸರ್ವೋತ್ತಮ ನಮ್ಮ ವಿಜಯ-ವಿಠಲನಂಘ್ರಿ | ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ ॥ ೨ ॥ ಸ್ತುತಿ ಮಾಡುವೆ ನಿನ್ನ ಕಾಳಿ ಮಹಾಕಾಳಿ ಉ | ನ್ನತ ಬಾಹು ಕರಾಳವದನೆ ಚಂದಿರೆಮುಖ ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ | ಸ್ಥಿತಿಯೆ ನಿದ್ರಾಭದ್ರೆ ಭಕ್ತವತ್ಸಲೆ ಭವ್ಯ ಚತುರಷ್ಟ ದ್ವಿಹಸ್ತೆ ಹಸ್ತಿಹಸ್ತಿಗಮನೆ ಅದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ ಕ್ಷಿತಿಭಾರಹರಣೆ ಕ್ಷೀರಾಬ್ದಿತನಯೆ ಸ | ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ | ದಿತಿ ಜಾತ ನಿಗ್ರಹ ನಿರ್ಧೂತ ಕಲ್ಮಷೆ | ಪ್ರತಿಕೂಲ ಭೇದೆ ಪೂರ್ಣಬೋಧೆ ರೌದ್ರೇ ಅತಿಶಯ ರಕ್ತಜಿಹ್ವಾಲೋಲೇ ಮಾಣಿಕ್ಯಮಾಲೇ ಜಿತಕಾಮೆ ಜನನ ಮರಣ ರಹಿತೆ ಖ್ಯಾತೆ ಘೃತ ಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸು ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ ಶತಪತ್ರನಯನೆ ನಿರುತಕನ್ಯೆ ಉದಯಾರ್ಕ | ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ ಶೃತಿತತಿನುತೆ ಶುಕ್ಲಶೋಣಿತೆ ರಹಿತೆ ಆ । ಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ ಚತುರಾ ಕಪರ್ದಿಯೆ ಅಂಭ್ರಣಿ ಹ್ರೀ | ಉತ್ಪತ್ತಿ ಸ್ಥಿತಿಲಯ ಕರ್ತೆ ಶುಭ್ರಶೋಭನ ಮೂರ್ತೆ | ಪತಿತಪಾವನೆ ರನ್ನೆ ಸರ್ವೋಷಧಿಯಲ್ಲಿದ್ದು ಹತಮಾಡು ಕಾಡುವ ರೋಗಗಳಿಂದ ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿಯಿತ್ತು | ಸತತ ಕಾಯಲಿಬೇಕು ದುರ್ಗೆ ದುರ್ಗೆ ಚ್ಯುತದೂರ ವಿಜಯವಿಠಲರೇಯನ ಪ್ರೀಯೇ | ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ||೩|| ಶ್ರೀ ಲಕ್ಷ್ಮೀ ಕಮಲಾ ಪದ್ಮಾಪದ್ಮಿನಿ, ಕಮಲಾಲಯೆ ರಮಾ ರುಶಾ ಕಪಿ ಧನ್ಯ ವೃದ್ಧಿ ವಿಶಾಲ ಯಜ್ಞ ಇಂದರೆ ಹಿರಣ್ಯ ಹರಿಣಿ ವಾಲಯ ಸತ್ಯ ನಿತ್ಯಾನಂದ ತ್ರಯಿ ಸುಧಾ ಶೀಲೆ ಸುಗಂಧಿ ಸುಂದರಿ ವಿದ್ಯಾ ಸುಶೀಲೆ ಸುಲಕ್ಷಣಾ ದೇವಿ ನಾನಾ ರೂಪಗಳಿಂದ ಮೆರೆವ ಮೃತ್ಯು ನಾಶೆ ವಾಲಗ ಕೊಡು ಸಂತರ ಸನ್ನಿಧಿಯಲ್ಲಿ ಕಾಲಕಾಲಕ್ಕೆ ಎನ್ನ ಭಾರವಹಿಸುವ ತಾಯಿ ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು ಕೇಳಿ ಕೇಳಿ ಬಂದೆ ಕೇವಲ ಈ ಮನ ಗಾಳಿಯಂತೆ ಪರದ್ರವ್ಯಕ್ಕೆ ಪೊಪುದು ಏಳಲ ಮಾಡದೆ ಉದ್ಧಾರ ಮಾಡುವ ಕೈಲಾಸಪುರದಲ್ಲಿ ಪೂಜೆಗೊಂಬ ಮೂಲ ಪ್ರಕೃತಿ ಸರ್ವ ವರ್ಣಾಭಿಮಾನಿ ಪಾಲಸಾಗರ ಶಾಯಿ ವಿಜಯ ವಿಠಲನೊಳು ಲೀಲೆ ಮಾಡುವ ನಾನಾಭರಣ ಭೂಷಣೆ ಪೂರ್ಣೆ||೪|| ಗೋಪಿ ನಂದನೆ ಮುಕ್ತೆದೈತ್ಯ ಸಂತತಿಗೆ ಸಂತಾಪವ ಕೊಡುತ್ತಿಪ್ಪ ಮಹಾ ಕಠೋರೆ ಉಗ್ರ ರೂಪವೈಲಕ್ಷಣೆ ಅಜ್ಞಾನಕ್ಕಭಿಮಾನಿ ತಾಪತ್ರಯ ವಿನಾಶ ಓಂಕಾರೆ ಹೂಂಕಾರೆ ಪಾಪಿ ಕಂಸಗೆ ಭಯ ತೋರಿದ ಬಾಲಲಿಲೆ ವ್ಯಾಪುತ ಧರ್ಮ ಮಾರ್ಗ ಪ್ರೇರಣೆ ಅಪ್ರಾಕೃತೆ ಸ್ವಪ್ನದಲ್ಲಿ ನಿನ್ನ ನೆನೆಸಿದ ಶರಣನಿಗೆ ಅಪಾರವಾಗಿದ್ದ ವಾರಿಧಿಯಂತೆ ಮಹಾ ಆಪತ್ತು ಬಂದಿರಲು ಹಾರಿಪೋಗುವು ಸಪ್ತ ದ್ವೀಪ ನಾಯಕೆ ನರಕ ನಿರ್ಲೇಪೆ ತಮೋಗುಣದ ವ್ಯಾಪಾರ ಮಾಡಿಸಿ ಭಕ್ತ ಜನಕ್ಕೆ ಪುಣ್ಯ ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ |ಪ್ರಾಪುತವಾಗಿ ಎನ್ನ ಮನದಲ್ಲಿ ನಿಂದು ದುಃಖ ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮಂಗಳ ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ ಆಪಾದ ಮೌಳಿ ತನಕ ಭಜಿಸಿ ಭವ್ಯರಾದರು ನಾ ಪೇಳುವುದೇನು ಪಾಂಡವರ ಮನೋಭಿಷ್ಟೇ ಈ ಪಂಚ ಭೌತಿಕದಲ್ಲಿ ಆವ ಸಾಧನ ಕಾಣಿ ಶ್ರೀಪತಿ ನಾಮ ಒಂದೇ ಜಿಹ್ವಾಗ್ರದಲ್ಲಿ ನೆನೆವ ಔಪಾಸನಾ ಕೊಡು ರುದ್ರಾದಿಗಳ ವರದೇ ತಾನು ಜನಪ್ರಿಯ ವಿಜಯ ವಿಠಲ ಮೂರ್ತಿಯ ಶ್ರೀಪಾದಾರ್ಚನೆ ಮಾಳ್ಪೆ ಶ್ರೀ ಭೂ ದುರ್ಗಾ ವರ್ಣಾಶಯೇ ||೫|| ದುರ್ಗೆ ಹಾ ಹೇ ಹೋ ಹಾ ದುರ್ಗೆ ಮಂಗಳ ದುರ್ಗೆ ದುರ್ಗತಿ ಕೊಡದವರು ವಿಜಯ ವಿಠಲನ ಪ್ರಿಯೇ||೬||