Перейти к содержимому

ಈ ಜಗವ ನಂಬಿ - ಸ್ವಾಮಿ ಪುರುಷೋತ್ತಮಾನಂದ- E Jagava Nambi - Swami Purushottamananda.

Hemavathi Venkataswamy

0:00 / 0:00

ಈ ಜಗವ ನಂಬಿ - ಸ್ವಾಮಿ ಪುರುಷೋತ್ತಮಾನಂದ- E Jagava Nambi - Swami Purushottamananda.

232 327 просмотров · 4 г. назад
Hemavathi Venkataswamy
1,64 тыс. подписчиков
232 327 просмотров · 4 г. назад
ರಾಗ - ಮಿಶ್ರಪಹಾಡಿ- ತ್ರಿತಾಲ್ ಈ ಜಗವ ನಂಬಿ ಸುಖವೇ ಇಲ್ಲ l ಪಾರು ಮಾಡೊ ದೇವಾ ll ಒಂದು ಸುಖಕೆ ನೂರು ದುಗುಡ ಇದುವೆ ಜಗದ ವೈಭವ ll ಜನರ ದೂರಲೇಕೆ ನಾವು ಅವರೆ ಕಷ್ಟದಲ್ಲಿ ಇಹರು l ಅವರ ಚಿಂತೆ ಅವರಿಗೆ ಇಹುದು ನಮ್ಮ ಚಿಂತೆ ಯಾರಿಗೆ ಮುದ್ದು ll ಮನುಜ ತನ್ನ ಮಿತಿಯನು ಅರಿಯ ಕಟ್ಟುತಿಹನು ಗಗನದಿ ಮನೆಯ l ಸುಖದಿ ಬಾಳ್ವೆನೆಂದು ದುಡಿದ ಬಾಳು ಮುಗಿವ ಮೊದಲೇ ಮಡಿದ ll ಎಷ್ಟು ಸಾವು ಏನು ನೋವು ಇದಕೆ ಆದಿ ಅಂತ್ಯವೆ ಇಲ್ಲ l ಆಸೆಪಟ್ಟು ಪಡೆದುದನೆಲ್ಲ ಇಲ್ಲೇ ಬಿಟ್ಟು ನಡೆಯುವರೆಲ್ಲ ll ಹೇ ದೇವ ನೀನೊಬ್ಬನೇ ಆತ್ಮೀಯ ಬಂಧು ಎನಗೆ l ಪ್ರೀತಿ ನೀಡುವವರಲ್ಲಿ ನಿನ್ನನ್ನು ಬಿಟ್ಟರಿಲ್ಲ ll ಸ್ವಾಮಿ ಪುರುಷೋತ್ತಮಾನಂದ