Перейти к содержимому

ಜಾದು ಪ್ರದರ್ಶನ ಶ್ರೀ ಪ್ರಕಾಶ ಹಾಗೂ ನೇತ್ರಾವತಿ ಹೆಮ್ಮಾಡಿ, ಅಂತರಾಷ್ಟ್ರೀಯ ಕಲಾವಿದರು, ಬಳ್ಳಾರಿ ದಿ:12-01-2020

Gavimath Koppal Official

0:00 / 0:00

ಜಾದು ಪ್ರದರ್ಶನ ಶ್ರೀ ಪ್ರಕಾಶ ಹಾಗೂ ನೇತ್ರಾವತಿ ಹೆಮ್ಮಾಡಿ, ಅಂತರಾಷ್ಟ್ರೀಯ ಕಲಾವಿದರು, ಬಳ್ಳಾರಿ ದಿ:12-01-2020

461 437 просмотров · 6 лет назад
Gavimath Koppal Official
84,5 тыс. подписчиков
461 437 просмотров · 6 лет назад
ಜಾದು ಪ್ರದರ್ಶನ ಶ್ರೀ ಪ್ರಕಾಶ ಹಾಗೂ ನೇತ್ರಾವತಿ ಹೆಮ್ಮಾಡಿ, ಅಂತರಾಷ್ಟ್ರೀಯ ಕಲಾವಿದರು, ಬಳ್ಳಾರಿ ದಿನಾಂಕ:12-01-2020 ಸ್ಥಳ: ಕೈಲಾಸ ಮಂಟಪ, ಗವಿಮಠ ಕೊಪ್ಪಳ ಮೂಲತಃ ಕುಂದಾಪುರದವರು. ಸದ್ಯ ಬಳ್ಳಾರಿ ನಿವಾಸಿಗಳಾದ ಇವರು ಕಳೆದ 30 ವರ್ಷಗಳಿಂದ ಮೂರು ಸಾವಿರಕ್ಕೂ ಹೆಚ್ಚು ಜಾದು ಪ್ರದರ್ಶನಗಳನ್ನು ನೀಡುವುದರ ಮೂಲಕ ದೇಶ ವಿದೇಶಗಳ ಜಾದೂಗಾರಿಕೆಯ ಕ್ಷೇತ್ರದಲ್ಲಿ ಅಗ್ರಗಣ್ಯರಾಗಿದ್ದಾರೆ. ಹೊಸ ಹೊಸ ವಿಧದ ಜಾದೂ ಪ್ರದರ್ಶನಗಳನ್ನು ನಡೆಸುವುದರಲ್ಲಿ ಸಿದ್ದಹಸ್ತರಾಗಿರುವ ಶ್ರೀ ಪ್ರಕಾಶ ಹೆಮ್ಮಾಡಿ ಹಾಗೂ ನೇತ್ರಾವತಿ ಹೆಮ್ಮಾಡಿಯವರು ಗಾಳಿಯಲ್ಲಿ ಕೈಬೀಸುವಾಗ ಆಕಾಶದಲ್ಲಿಯೇ ಸೃಷ್ಟಿಯಾಗುವ ಪಾರಿವಾಳ, ಸಣ್ಣ ಕೈಚೀಲದಲ್ಲಿ ಒಂದು ಬಿಳಿ ಬಣ್ಣದ ಚಕ್ರ ಹಾಕಿ ಹತ್ತಾರು ಬಣ್ಣದ ಚಕ್ರಗಳ ಮರು ಹಟ್ಟು, 10 ರೂ. ಮುಖಬೆಲೆಯ ನೋಟನ್ನು ಸಾವಿರ ರೂಪಾಯಿ ಮೌಲ್ಯದ ನೋಟಾಗಿ ಪರಿವರ್ತಿಸುವಿಕೆ, ಹೀಗೆ ನಾನಾ ಮ್ಯಾಜಿಕ್ ತಂತ್ರಗಳನ್ನು ಬಳಸುವ ಮೂಲಕ ಹಲವಾರು ಜಾದೂಗಾರಿಕೆಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದಾರೆ. ದೇಶ ವಿದೇಶಗಳಲ್ಲಿ ಜಾದೂ ಪ್ರದರ್ಶನಗಳನ್ನು ನೀಡುತ್ತಾ ವಿಶ್ವದ ಹಲವಾರು ಜಾದೂ ಕ್ಷೇತ್ರದ ದಿಗ್ಗಜರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹಾಗೆಯೇ ಈ ಕ್ಷೇತ್ರದ ಹಲವಾರು ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ. ಇವರ ಚಿರಂಜೀವಿ ಶ್ರೀವತ್ಸ ಹೆಮ್ಮಾಡಿ ಕಿರಿಯ ವಯಸ್ಸಿನಲ್ಲಿ ಜಾದೂ ಪ್ರದರ್ಶನಗಳನ್ನು ನೀಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇವರ ಸಹೋದರ ಸತೀಶ ಹೆಮ್ಮಾಡಿ ಬಾರತದ ಪ್ರಸಿದ್ಧ ಜಾದೂಗಾರರಾಗಿದ್ದಾರೆ. ಹಂಪಿ ಉತ್ಸವ, ಮೈಸೂರು ದಸರ ಉತ್ಸವ, ಧರ್ಮಸ್ಥಳದ ಸಮ್ಮೇಳನಗಳಲ್ಲಿ ಹಾಗೂ ಹಲವಾರು ಟಿ.ವಿ ಮಾಧ್ಯಮಗಳಲ್ಲಿ ತಮ್ಮ ಜಾದೂ ಪ್ರದರ್ಶನವನ್ನು ನೀಡಿದ್ದಾರೆ.