ಇಂದು 4 ಅಕ್ಟೋಬರ್ : ಗೃಹಲಕ್ಷ್ಮಿ 2000 ಬಿಗ್ ನ್ಯೂಸ್! ಚಿನ್ನ ಬೆಲೆ 5000 ದಿಢೀರ್ ಕುಸಿತ! ರೇಷನ್ ಕಾರ್ಡ್ BPL Card
Suddi Samaya
0:00 / 0:00
ಇಂದು 4 ಅಕ್ಟೋಬರ್ : ಗೃಹಲಕ್ಷ್ಮಿ 2000 ಬಿಗ್ ನ್ಯೂಸ್! ಚಿನ್ನ ಬೆಲೆ 5000 ದಿಢೀರ್ ಕುಸಿತ! ರೇಷನ್ ಕಾರ್ಡ್ BPL Card
255 просмотров · 2 часа назад
Suddi Samaya
28,3 тыс. подписчиков
255 просмотров · 2 часа назад
ಗೃಹಲಕ್ಷ್ಮಿ 2000 ಬಿಗ್ ನ್ಯೂಸ್! ಚಿನ್ನ ಬೆಲೆ 5000 ದಿಢೀರ್ ಕುಸಿತ! ರೇಷನ್ ಕಾರ್ಡ್ BPL Card
ರೇಷನ್ ಕಾರ್ಡ್ e-KYC ಮಾಡಿಸಲು ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡಬೇಕಿಲ್ಲ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 'ಅನ್ನ ಸೇವೆ' ಎಂಬ ಮೊಬೈಲ್ ಆಯಪ್ ಬಿಡುಗಡೆ ಮಾಡಿದ್ದು, ಇದರ ಮೂಲಕ ಮನೆಯಲ್ಲೇ ಕುಳಿತು e-KYC ಪೂರ್ಣಗೊಳಿಸಬಹುದು.
ಸದ್ಯ ಈ ಸೌಲಭ್ಯವನ್ನು 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಅಕ್ಟೋಬರ್ 10ರಿಂದ ರಾಜ್ಯದ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಆಧಾರ್ ಆಧಾರಿತ ಫೇಸ್ ಅಥೆಂಟಿಕೇಷನ್ ಮೂಲಕ e-KYC ಮಾಡುವ ಈ ವ್ಯವಸ್ಥೆಯಲ್ಲಿ ರೇಷನ್ ಕಾರ್ಡ್‌ನಲ್ಲಿರುವ ಅರ್ಹ ಕುಟುಂಬ ಸದಸ್ಯರು ತಮ್ಮ e-KYC ಪೂರ್ಣಗೊಳಿಸಬಹುದು. 'ಅನ್ನ ಸೇವೆ' ಆಯಪ್ ಬಳಸಲು Anna Seve, CeG Face KYC ಮತ್ತು AadhaarFaceRD ಎಂಬ ಮೂರು ಆಯಪ್‌ಗಳು ಅಗತ್ಯವಿದೆ.
ಯಾವ ಜಿಲ್ಲೆಗಳಲ್ಲಿ ಸದ್ಯ ಲಭ್ಯ?
ಮೊದಲ ಹಂತದಲ್ಲಿ 'ಅನ್ನ ಸೇವೆ' ಆಯಪ್ ಸೇವೆ ಈ 8 ಜಿಲ್ಲೆಗಳಲ್ಲಿ ಲಭ್ಯವಿದೆ:
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಉಡುಪಿ
ಹಾವೇರಿ
ಉತ್ತರ ಕನ್ನಡ
ಬಳ್ಳಾರಿ
ಬೀದರ್
ಕೊಪ್ಪಳ
ಅಕ್ಟೋಬರ್ 10ರಿಂದ ಉಳಿದ ಜಿಲ್ಲೆಗಳ ಫಲಾನುಭವಿಗಳಿಗೂ ಆಯಪ್ ಮೂಲಕ e-KYC ಮಾಡುವ ಅವಕಾಶ ಕಲ್ಪಿಸಲಾಗುತ್ತದೆ ಎಂದು ವರದಿಯಾಗಿದೆ.
ಅನ್ನ ಸೇವೆ ಆಯಪ್ ಡೌನ್‌ಲೋಡ್ ಮಾಡುವುದು ಹೇಗೆ?
ಮೊದಲು ಮೊಬೈಲ್‌ನಲ್ಲಿ ಈ ಮೂರು ಆಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು:
CeG Face KYC App - ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ
AadhaarFaceRD - Google Play Store ಮೂಲಕ
Anna Seve - Google Play Store ಮೂಲಕ
'ಅನ್ನ ಸೇವೆ' ಆಯಪ್ ಅಧಿಕೃತವಾಗಿ ಕರ್ನಾಟಕ ಸರ್ಕಾರದ e-Governance ನಿರ್ದೇಶನಾಲಯದ ಆಯಪ್ ಆಗಿದ್ದು, ಆಧಾರ್ ಆಧಾರಿತ ಫೇಸ್ ಅಥೆಂಟಿಕೇಷನ್ ಮೂಲಕ ರೇಷನ್ ಕಾರ್ಡ್ e-KYC ಮಾಡಲು ಬಳಸಲಾಗುತ್ತದೆ.
e-KYC ಮಾಡುವುದು ಹೇಗೆ?
1. 'ಅನ್ನ ಸೇವೆ' ಆಯಪ್ ತೆರೆಯಿರಿ.
2. ಲಾಗಿನ್ ಪ್ರಕಾರದಲ್ಲಿ 'ಸ್ವಯಂ/ನಾಗರಿಕ' ಆಯ್ಕೆ ಮಾಡಿ.
3. ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ.
4. ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
5. ರೇಷನ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ.
6. OTP ಪರಿಶೀಲನೆಯ ನಂತರ ರೇಷನ್ ಕಾರ್ಡ್‌ನಲ್ಲಿರುವ ಕುಟುಂಬ ಸದಸ್ಯರ ವಿವರಗಳು ಕಾಣಿಸುತ್ತವೆ.
7. e-KYC ಮಾಡಬೇಕಿರುವ ಸದಸ್ಯರನ್ನು ಆಯ್ಕೆ ಮಾಡಿ.
8. ಅಗತ್ಯವಿರುವ ಸಹಾಯಕ ಆಯಪ್‌ಗಳ ಮೂಲಕ Face Authentication ಪೂರ್ಣಗೊಳಿಸಿ.
9. e-KYC ಯಶಸ್ವಿಯಾದ ಬಳಿಕ ದೃಢೀಕರಣ ಸಂದೇಶ ಕಾಣಿಸುತ್ತದೆ.
#ಕರ್ನಾಟಕಸುದ್ದಿ
#ಕರ್ನಾಟಕ
#bpl
#ಗೃಹಲಕ್ಷ್ಮಿಯೋಜನೆ