Перейти к содержимому

ಗಣೇಶ ಚತುರ್ಥಿಗೆಗಾಗಿ ಮಾಡುವ ಆರೋಗ್ಯಕರ ಗರಿ ಗರಿಯಾದ ಅಕ್ಕಿ ವಡೆ | ತುಂಬಾ ದಿನ ಇಡಬಹುದಾದ ಅಕ್ಕಿ ವಡೆ | Rice Vada

Pratham Healthy life

0:00 / 0:00

ಗಣೇಶ ಚತುರ್ಥಿಗೆಗಾಗಿ ಮಾಡುವ ಆರೋಗ್ಯಕರ ಗರಿ ಗರಿಯಾದ ಅಕ್ಕಿ ವಡೆ | ತುಂಬಾ ದಿನ ಇಡಬಹುದಾದ ಅಕ್ಕಿ ವಡೆ | Rice Vada

408 просмотров · 1 месяц назад
Pratham Healthy life
139 подписчиков
408 просмотров · 1 месяц назад
ಗಣೇಶ ಚತುರ್ಥಿ ಹಬ್ಬಕ್ಕೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಗರಿ ಗರಿಯಾದ, ರುಚಿಕರವಾದ ಅಕ್ಕಿ ವಡೆ. 😋 ಈ ಅಕ್ಕಿ ವಡೆಯ ವಿಶೇಷತೆ ಎಂದರೆ ಸರಿಯಾದ ವಿಧಾನದಲ್ಲಿ ತಯಾರಿಸಿದರೆ ತುಂಬಾ ದಿನ ಸಂಗ್ರಹಿಸಿಟ್ಟುಕೊಳ್ಳಬಹುದು. ಹಬ್ಬದ ಸಮಯದಲ್ಲಿ ಕುಟುಂಬದವರೊಂದಿಗೆ ಸವಿಯಲು ಹಾಗೂ ಅತಿಥಿಗಳಿಗೆ ನೀಡಲು ಉತ್ತಮವಾದ ತಿಂಡಿ. ಬೇಕಾಗುವ ಸಾಮಾಗ್ರಿಗಳು: • ಕಾಳುಮೆಣಸು – 1 ಟೀ ಸ್ಪೂನ್ • ಜೀರಿಗೆ – 2 ಟೀ ಸ್ಪೂನ್ • ಸಾಸಿವೆ – 3 ಟೀ ಸ್ಪೂನ್ • ಓಮ ಕಾಳು – 1 ಟೀ ಸ್ಪೂನ್ • ಕರಿಬೇವು – 8–10 ಎಲೆ • ಅಕ್ಕಿ – 6 ಕಪ್ • ಉದ್ದಿನ ಬೇಳೆ – ½ ಕಪ್ ಉಪ್ಪು 2 ಟಿ ಸ್ಪೂನ್. ಹಸಿ ಮೆಣಸಿನಕಾಯಿ 3,. ತಯಾರಿಸುವ ವಿಧಾನ: ಅಕ್ಕಿಯನ್ನು ಸುಮಾರು 1 ಗಂಟೆ ನೆನೆಸಿ, ನಂತರ ನೆರಳಿನಲ್ಲಿ ಅರ್ಧ ಗಂಟೆ ಒಣಗಿಸಿ ಪುಡಿ ಮಾಡಿಕೊಳ್ಳಿ. ಉದ್ದಿನ ಬೇಳೆಯನ್ನು 2 ಗಂಟೆ ನೆನೆಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ನಂತರ ಕಾಳುಮೆಣಸು, ಜೀರಿಗೆ, ಸಾಸಿವೆ, ಓಮ ಕಾಳು ,ಉಪ್ಪು ,ಮತ್ತು ಹಸಿ ಮೆಣಸಿನಕಾಯಿ,ಕರಿಬೇವನ್ನು ಸೇರಿಸಿ ರುಬ್ಬಿಕೊಳ್ಳಿ. ಅಕ್ಕಿ ಹಿಟ್ಟಿಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಗಟ್ಟಿಯಾಗಿ ಕಲಸಿಕೊಳ್ಳಿ. ಸಣ್ಣ ಉಂಡೆಗಳನ್ನು ಮಾಡಿಕೊಂಡು ಒತ್ತು ಮಣಿಯಲ್ಲಿ ಒತ್ತಿ, ಮಧ್ಯದಲ್ಲಿ ಸಣ್ಣ ರಂಧ್ರ ಮಾಡಿ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿಯಿರಿ. ವಿಡಿಯೋ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು Pratham Healthy Life YouTube Channel ಅನ್ನು Subscribe ಮಾಡಿ. ❤️ #ಅಕ್ಕಿವಡೆ #RiceVada #ಅಕ್ಕಿವಡೆರೆಸಿಪಿ #ಗಣೇಶಚತುರ್ಥಿ #ಗಣೇಶಚತುರ್ಥಿತಿಂಡಿ #ಹಬ್ಬದತಿಂಡಿ #ಗರಿಗರಿಯಾದಅಕ್ಕಿವಡೆ #KannadaRecipe #KannadaCooking #PrathamHealty life, . ❤️