ಎಷ್ಟು ಸಾಹಸವಂತ ನೀನೇ ಬಲವಂತ | ಡಾ|| ವಿದ್ಯಾಭೂಷಣ | ಶ್ರೀ ವಾದಿರಾಜರು | @Hanumankannadasongs
Jai Hanuman Kannada Songs
0:00 / 0:00
ಎಷ್ಟು ಸಾಹಸವಂತ ನೀನೇ ಬಲವಂತ | ಡಾ|| ವಿದ್ಯಾಭೂಷಣ | ಶ್ರೀ ವಾದಿರಾಜರು | @Hanumankannadasongs
1 359 003 просмотра · 5 месяцев назад
Jai Hanuman Kannada Songs
8,07 тыс. подписчиков
1 359 003 просмотра · 5 месяцев назад
ರಾಮಾಯಣದಲ್ಲಿ ಹನುಮಂತನ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ ಕೂಡ. ಶ್ರೀ ವಾದಿರಾಜರು ಹಾಡಿನ ಮೂಲಕ ಹನುಮಂತನ ಸ್ತುತಿ ಮಾಡಿ ಹೊಗಳಿದ್ದಾರೆ. ವಾದಿರಾಜರು ಹಾಡುಗಳು ಬಹಳ ವಿಸ್ತಾರವಾಗಿರುತ್ತವೆ. ಅವರ ಹನುಮಂತನ ಈ ಹಾಡು ಕೂಡ ಬಹಳ ವಿಸ್ತಾರವಾಗಿದೆ. ಈ ಹಾಡಿನಲ್ಲಿ ಪದ್ಯದ ಮೂಲಕ ವಾದಿರಾಜರು ಹನುಮಂತನ ಸಾಹಸಗಾಥೆಯನ್ನು ವಿವರಿಸಿದ್ದಾರೆ. ಹನುಮನು ಸಾಗರ ದಾಟಿದ್ದು, ಜಾನಕಿಗೆ ಮುದ್ರಿಕೆ ನೀಡಿ ತದನಂತರ ಲಂಕೆಯ ಸುಟ್ಟು ಮತ್ತೆ ವಾನರ ಸೇನೆಯ ಮೂಲಕ ರಾವಣನನ್ನು ವಧಿಸಿ, ರಾಮನ ಪಟ್ಟಾಭಿಷೇಕದವರೆಗೂ ಈ ಹಾಡಿನಲ್ಲಿ ವಿವರಣೆ ನೀಡಿದ್ದಾರೆ. ಈ ಹಾಡಿನ ಕೇಂದ್ರ ಬಿಂದು ಹನುಮಂತನೇ ಆಗಿದ್ದಾನೆ. ವಾದಿರಾಜರು ಸರಳ ಭಾಷೆಯಲ್ಲಿ ಹನುಮಂತನ ಗುಣಗಾನ ಮಾಡಿದ್ದಾರೆ. ಸಾಹಿತ್ಯದಷ್ಟೇ ಸೊಗಸಾಗಿ ಶ್ರೀ ವಿದ್ಯಾಭೂಷಣರು ಮಧ್ಯಮಾವತಿ ರಾಗದಲ್ಲಿ ಹಾಡಿದ್ದಾರೆ. ಸಾಹಿತ್ಯಕ್ಕೆ ಅನುಗುಣವಾಗಿ ರಾಗದ ಛಾಯೆಗಳನ್ನು ಅಳವಡಿಸಿಕೊಂಡಿದ್ದಾರೆ. ಸುಮಾರು 17 ನಿಮಿಷದ ಈ ಹಾಡನ್ನು ಕೇಳಿ ಆನಂದಿಸಿ. ನಿಮ್ಮ @Hanumankannadasongs ಭಕ್ತಿ ವಾಹಿನಿಯಲ್ಲಿ ಮಾತ್ರ..!!
***************************************
To Listen On Your Favourite Music Streaming Platform
♪ Insta Reels : / 1751672812228832
♪ Youtube Music : • Yeshtu Sahasavanta
♪ Spotify : https://tinyurl.com/nhfxn2w2
♪ Jiosaavn : https://tinyurl.com/4fwk4y68
♪ Gaana : https://gaana.com/song/yeshtu-sahasav...
♪ Amazon Prime Music : https://tinyurl.com/5n8nv4m9
♪ Apple Music : https://tinyurl.com/3ymrrk6x
*****************************
ಎಷ್ಟು ಸಾಹಸವಂತ ನೀನೇ ಬಲವಂತ
ದಿಟ್ಟ ಮೂರುತಿ ಭಳಿರೇ ಭಳಿರೇ ಹನುಮಂತ || 2 ||
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ
-------------------Bgm-------------------
ರಾಮರಪ್ಪಣೆಯಿಂದ ಶರಧಿಯ ದಾಟಿ ಆ ಮಹಾ ಲಂಕೆಯ ಕಂಡೆ ಕಿರೀಟಿ || 2 ||
ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದೆ ಈ ಮಹಿಯೊಳು ನಿನಗಾರೈ ಸಾಟಿ
ದೂರದಿಂದಸುರನ ಪುರವನೆ ನೋಡಿ ಭರದಿ ಶ್ರೀರಾಮರ ಸ್ಮರಣೆಯ ಮಾಡಿ || 2 ||
ಹಾರಿದೆ ಹರುಷದಿ ಹರಿಸಿ ಲಂಕಿಣಿಯನು ವಾರಿಜಮುಖಿಯನು ಕಂಡು ಮಾತಾಡಿ
-------------------Bgm-------------------
ರಾಮರ ಕ್ಷೇಮವ ರಮಣಿಗೆ ಪೇಳಿ ತಾಮಸ ಮಾಡದೆ ಮುದ್ರಿಕೆ ನೀಡಿ || 2 ||
ಪ್ರೇಮದಿ ಜಾನಕಿ ಕುರುಹನು ಕೊಡಲಾಗ ಆ ಮಹಾವನದೊಳು ಫಲವನು ಬೇಡಿ
ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು ಹಣ್ಣಿನ ನೆವದಲಿ ಅಸುರರ ಹೊಯ್ದು || 2 ||
ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ ಬಣ್ಣಿಸಿ ಅಸುರರ ಬಲವನು ಮುರಿದು
-------------------Bgm-------------------
ಶೃಂಗಾರ ವನದೊಳಗೆ ಇದ್ದ ರಕ್ಕಸರ ಅಂಗವನಳಿಸಿದೆ ಅತಿರಣಶೂರ || 2 ||
ನುಂಗಿ ಅಸ್ತ್ರಗಳ ಅಕ್ಷಯ ಕುವರನ ಭಂಗಿಸಿ ಬಿಸುಟೆಯೋ ಬಂದ ರಕ್ಕಸರ
ದೂರು ಪೇಳಿದರೆಲ್ಲಾ ರಾವಣನೊಡನೆ ಚೀರುತ ಕರೆಸಿದ ಇಂದ್ರಜಿತುವನೆ || 2 ||
ಚೋರಕಪಿಯ ನೀ ಹಿಡಿತಹುದೆನ್ನುತ ಶೂರರ ಕಳುಹಿದ ನಿಜಸುತನೊಡನೆ
-------------------Bgm-------------------
ಪಿಡಿದನು ಇಂದ್ರಜಿತು ಕಡು ಕೋಪದಿಂದ ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ || 2 ||
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ ನಡೆದನು ಲಂಕೆಯ ಒಡೆಯನಿದ್ದೆಡೆಗೆ
ಕಂಡನು ರಾವಣನುದ್ದಂಡಕಪಿಯನು ಮಂಡೆಯ ತೂಗುತ ಮಾತಾಡಿಸಿದನು || 2 ||
ಭಂಡು ಮಾಡದೆ ಬಿಡೆನೋಡು ಕಪಿಯನೆ ಗಂಡುಗಲಿಯು ದುರುದುರಿಸಿ ನೋಡಿದನು
-------------------Bgm-------------------
ಛಲವ್ಯಾಕೋ ನಿನಗಿಷ್ಟು ಎಲವೋ ಕೊಡಗನೆ ನೆಲೆಯಾವುದು ಹೇಳೋ ನಿನ್ನೊಡೆಯನೆಸರನ್ನ || 2 ||
ಬಲವಂತ ರಾಮರ ಬಂಟ ಬಂದಿಹೆನೋ ಹಲವು ಮಾತ್ಯಾಕೋ ಹನುಮನು ನಾನೇ
ಬಡ ರಾವಣನೆ ನಿನ್ನ ಬಡಿದು ಹಾಕುವೆನೋ ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ || 2 ||ಹುಡಿಯೇಳಿಸುವೆನೋ ಖೂಲ್ಲ ರಕ್ಕಸರನೆ ತೊಡೆವೆನೋ ನಿನ್ನ ಪಣೆಯ ಅಕ್ಷರವ
-------------------Bgm-------------------
ನಿನ್ನಂತ ದೂತರು ರಾಮನ ಬಳಿಯೊಳು ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ || 2 ||
ನನ್ನಂತ ದೂತರು ನಿನ್ನಂತ ಪ್ರೇತರು ಇನ್ನೂರು ಮುನ್ನೂರು ಕೋಟಿ ಕೇಳರಿಯಾ
ಕಡುಕೋಪದಿಂದಲಿ ಖೂಳ ರಾವಣನು ಸುಡಿರೆಂದ ಬಾಲವ ಸುತ್ತಿ ವಸನವ || 2 ||
ಒಡೆಯನ ಮಾತಿಗೆ ತಡೆಬಡೆ ಇಲ್ಲದೆ ಒಡನೆ ಮುಟ್ಟಿದರು ಗಡಿಮನೆಯವರು
-------------------Bgm-------------------
ತಂದರು ವಸನವ ತಂಡತಂಡದಲಿ ಒಂದೊಂದು ಮೂಟೆ ಎಂಭತ್ತು ಕೋಟಿಯಲ್ಲಿ || 2 ||
ಚಂದದಿ ಹರಳಿನ ತೈಲದೊಳದ್ದಿಸಿ ನಿಂದ ಹನುಮನು ಬಾಲವ ಬೆಳೆಸುತ
ಶಾಲು ಸಕಲಾತಿಯು ಸಾಲದೆಯಿರಲು ಬಾಲೇರ ವಸ್ತ್ರವ ಸೆಳೆದು ತಾರೆನಲು || 2 ||
ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ ಕಾಲಮೃತ್ಯುವ ಕೆಣಕಿದರಲ್ಲಿ
-------------------Bgm-------------------
ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ ಇಣುಕಿನೋಡುತ ಅಸುರರನಣಕಿಸುತ || 2 ||
ಝಣಝಣಝಣರೆನೆ ಬಾಲದ ಗಂಟೆಯು ಮನದಿ ಶ್ರೀ ರಾಮರ ಪಾದವ ನೆನೆಯುತ
ಮಂಗಳಂ ಶ್ರೀ ರಾಮಚಂದ್ರ ಮೂರುತಿಗೆ ಮಂಗಳಂ ಸೀತಾದೇವಿ ಚರಣಂಗಳಿಗೆ || 2 ||
ಮಂಗಳವೆನುತ ಲಂಕೆಯಸುಟ್ಟು ಲಂಘಿಸಿ ಅಸುರನ ಗಡ್ದಕೆ ಹಿಡಿದ
-------------------Bgm-------------------
ಹೊತ್ತಿತು ಅಸುರನ ಗಡ್ಡ ಮೀಸೆಗಳು ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು || 2 ||
ಚಿತ್ತದಿ ರಾಮರು ಕೋಪಿಸುವರು ಎಂದು ಚಿತ್ರದಿ ನಡೆದನು ಅರಸನಿದ್ದೆಡೆಗೆ
ಸೀತೆಯ ಕ್ಷೇಮವ ರಾಮರಿಗ್ಹೇಳಿ ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ || 2 ||
ಸೇತುವೆ ಕಟ್ಟಿ ಚತುರಂಗ ಬಲಸಹ ಮುತ್ತಿತು ಲಂಕೆಯ ಸೂರೆಗೈಯ್ಯುತಲಿ
-------------------Bgm-------------------
ಹೆಗ್ಗಳವಾಯಿತು ರಾಮರ ದಂಡು ಮುತ್ತಿತು ಲಂಕೆಯ ಕೋಟೆಯ ಕಂಡು || 2 ||
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ ಜಗ್ಗನೆ ಪೇಳ್ದರು ರಾವಣಗಂದು
ರಾವಣ ಮೊದಲಾದ ರಾಕ್ಷಸರ ಕೊಂದು ಭಾವಶುದ್ಧದಲಿ ವಿಭೀಷಣ ಬಾಳೆಂದು || 2 ||
ದೇವಿ ಸೀತೆಯನೊಡಗೊಂಡು ಅಯೋಧ್ಯದಿ ದೇವ ಶ್ರೀ ರಾಮರು ರಾಜ್ಯವಾಳಿದರು
-------------------Bgm-------------------
ಶಂಖದೈತ್ಯನ ಕೊಂದೆ ಶರಣು ಶರಣಯ್ಯ ಶಂಖಗಿರಿಯಲಿ ನಿಂದ ಹನುಮಂತರಾಯ || 2 ||
ಪಂಕಜಾಕ್ಷ ಹಯವದನನ ಕಟಾಕ್ಷದಿ ಬಿಂಕದಿ ಪಡೆದೆಯೋ ಅಜನಪದವಿಯ
ಶಂಖದೈತ್ಯನ ಕೊಂದೆ ಶರಣು ಶರಣಯ್ಯ ಶಂಖಗಿರಿಯಲಿ ನಿಂದ ಹನುಮಂತರಾಯ || 2 ||
ಪಂಕಜಾಕ್ಷ ಹಯವದನನ ಕಟಾಕ್ಷದಿ ಬಿಂಕದಿ ಪಡೆದೆಯೋ ಅಜನಪದವಿಯ
-------------------Bgm-------------------
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ
ಎಷ್ಟು ಸಾಹಸವಂತ ನೀನೇ ಬಲವಂತ ದಿಟ್ಟ ಮೂರುತಿ ಭಳಿರೇ ಭಳಿರೇ ಹನುಮಂತ
ಭಳಿರೇ ಭಳಿರೇ ಹನುಮಂತ || 5 ||
*****************************
VISIT OUR OTHER OFFICIAL CHANNELS:-
👉Lord Shiva Kannada Channel: https://tinyurl.com/4dbce2bu
👉Lord Raghavendra Kannada Channel : https://tinyurl.com/2jjaxkub
👉Lord Lakshmi Kannada Channel : https://tinyurl.com/yjyjwu6p
👉Lord Ayyappa Kannada Channel : https://tinyurl.com/4h9a9ccn