ವಿಜಯದಶಮಿ ಸಂಭ್ರಮ • #ವಿಜಯದಶಮಿಸಂಭ್ರಮ• #ನಾಡಹಬ್ಬವಿಜಯದಶಮಿ #KatageriNadasiri• #VijayadashamiSambhrama
ನಾಡಸಿರಿ. Naadasiri, Sanskruti Sampada.
0:00 / 0:00
ವಿಜಯದಶಮಿ ಸಂಭ್ರಮ • #ವಿಜಯದಶಮಿಸಂಭ್ರಮ• #ನಾಡಹಬ್ಬವಿಜಯದಶಮಿ #KatageriNadasiri• #VijayadashamiSambhrama
1 048 просмотров · 2 нед. назад
ನಾಡಸಿರಿ. Naadasiri, Sanskruti Sampada.
6,53 тыс. подписчиков
1 048 просмотров · 2 нед. назад
ಕಟಗೇರಿಯಲ್ಲಿ ಬನ್ನಿ ಮುಡಿಯುವ ಸಂಭ್ರಮ; ಬನ್ನಿ ವಿನಿಮಯ ಮಾಡಿ ಶುಭ ಹಾರೈಸಿದ ಗ್ರಾಮಸ್ಥರು
ಅಥಣಿ:
ತಾಲೂಕಿನ ಕಟಗೇರಿ ಗ್ರಾಮದಲ್ಲಿ ವಿಜಯದಶಮಿ ನಿಮಿತ್ತ ಸಂಪ್ರದಾಯದಂತೆ ಬನ್ನಿ ಮುಡಿಯುವ ಕಾರ್ಯಕ್ರಮ ಭಕ್ತಿ, ಸಡಗರದಿಂದ ನಡೆಯಿತು.
ಗ್ರಾಮದ ಆರಾಧ್ಯ ದೈವ ಶ್ರೀ ಲಕ್ಕವ್ವ ದೇವಿಯ ಪಲ್ಲಕ್ಕಿ ಉತ್ಸವವು ಮಂಗಳ ವಾದ್ಯ, ಜಾನಪದ ಕಲಾತಂಡಗಳು ಹಾಗೂ ನೂರಾರು ಭಕ್ತಾದಿಗಳ ಜಯಘೋಷಗಳೊಂದಿಗೆ ವೈಭವದಿಂದೊಂದಿಗೆ ಅರ್ಚಕರಾದ ಲಕ್ಕಪ್ಪ ಪೂಜಾರಿ ಅವರ ತೋಟದಲ್ಲಿದ್ದ ಬನ್ನಿ ಮರಕ್ಕೆ
ವೇದಮೂರ್ತಿ ಈರಯ್ಯ ಮುರಗಯ್ಯ ಮಠಪತಿ
ಪರಂಪರೆಯಂತೆ ಶಾಸ್ತ್ರೋಕ್ತವಾಗಿ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಿದರು.
ನಂತರ ಗ್ರಾಮದ ಪ್ರಮುಖರು ಹಾಗೂ ಭಕ್ತಾದಿಗಳು ಬನ್ನಿ ಮುಡಿಯುವ ಮೂಲಕ ಸಾಂಪ್ರದಾಯಿಕ ಆಚರಣೆಗೆ ಚಾಲನೆ ನೀಡಿದರು. ಪೂಜಾ ಕೈಂಕರ್ಯಗಳ ಬಳಿಕ ಶ್ರೀ ಲಕ್ಕವ್ವ ದೇವಿಯ ಪಲ್ಲಕ್ಕಿ ಉತ್ಸವವು ಅಲ್ಲಿಂದ ದೇವಸ್ಥಾನದತ್ತ ತೆರಳಿತು. ಸಾಲುಸಾಲಾಗಿ ದೇವಸ್ಥಾನಕ್ಕೆ ಆಗಮಿಸಿದ ಟ್ರ್ಯಾಕ್ಟರ್ ವಾಹನಗಳು ಸಂಭ್ರಮಕ್ಕೆ ಮೆರಗು ತಂದವು. ಲಕ್ಕವ್ವದೇವಿ ಪಲ್ಲಕ್ಕಿ ರಾತ್ರಿ 8 ಗಂಟೆಗೆ ಗ್ರಾಮಕ್ಕೆ ಮರಳಿದ ನಂತರ ಹಿರಿಯರು, ಕಿರಿಯರೆನ್ನದೆ ಎಲ್ಲರೂ ಪರಸ್ಪರ ಬನ್ನಿ ನೀಡಿ ಶುಭ ಕೋರಿದರು. ಕಿರಿಯರು ಹಿರಿಯರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ಒಬ್ಬರಿಗೊಬ್ಬರು ಶುಭ ಹಾರೈಸುವ ಮೂಲಕ ಭಾತೃತ್ವ, ಸೌಹಾರ್ದತೆಯ ಸಂದೇಶ ಸಾರಿದರು.
'ಬನ್ನಿ ಬಂಗಾರ ತಗೊಂಡು, ಬಂಗಾರದಂಗ ಇರೋಣ' ಎಂದು ಶ್ರದ್ಧಾಪೂರ್ವಕವಾಗಿ ಶುಭ ಹಾರೈಸಿದರು. ಪರಸ್ಪರ ಬನ್ನಿ ಎಲೆಗಳನ್ನು ವಿನಿಮಯ ಮಾಡಿಕೊಂಡರು
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಗ್ರಾಮಸ್ಥರು, ಭಕ್ತಾದಿಗಳು ಭಾಗವಹಿಸಿ ಉತ್ಸವಕ್ಕೆ ಕಳೆ ತಂದರು• #ದಸರಾಸಂಭ್ರಮ
• #ನಾಡಹಬ್ಬ
• #ಕರ್ನಾಟಕಸಂಸ್ಕೃತಿ
• #ಕನ್ನಡಹಬ್ಬ
• #DasaraUtsav
• #Nadahabba