Перейти к содержимому

ಪ್ರಪಂಚಸಾರ ತಂತ್ರ | ಶಾಸ್ತ್ರೋಕ್ತ ಸಮಾಧಾನ WHY TARGET SRI ADI SHANKARA ಕುತ್ಸಿತ ವಾದಗಳಿಗೆ ಶಾಸ್ತ್ರೀಯ ಉತ್ತರ 02

Viveka Darpana ವಿವೇಕ ದರ್ಪಣ

0:00 / 0:00

ಪ್ರಪಂಚಸಾರ ತಂತ್ರ | ಶಾಸ್ತ್ರೋಕ್ತ ಸಮಾಧಾನ WHY TARGET SRI ADI SHANKARA ಕುತ್ಸಿತ ವಾದಗಳಿಗೆ ಶಾಸ್ತ್ರೀಯ ಉತ್ತರ 02

17 450 просмотров · 2 дня назад
Viveka Darpana ವಿವೇಕ ದರ್ಪಣ
774 подписчика
17 450 просмотров · 2 дня назад
ಪ್ರಪಂಚಸಾರ ತಂತ್ರ ಮತ್ತು ಆಕ್ಷೇಪಗಳಿಗೆ ಶಾಸ್ತ್ರೋಕ್ತ ಸಮಾಧಾನ | ಶ್ರೀ ಶಂಕರ ಭಗವತ್ಪಾದರ ದೃಷ್ಟಿಕೋನ ಆದಿ ಶಂಕರರ ಗ್ರಂಥಗಳ ಮೇಲೇಕೆ ಈ ಅಪಪ್ರಚಾರ? | ಕುತ್ಸಿತ ವಾದಗಳಿಗೆ ಶಾಸ್ತ್ರೀಯ ಉತ್ತರ! (ಭಾಗ - 2) ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ರಚಿಸಿರುವ ‘ಪ್ರಪಂಚಸಾರ ತಂತ್ರ’ ಗ್ರಂಥದಲ್ಲಿ ಸ್ತ್ರೀ ವಶೀಕರಣ ಮುಂತಾದ ಅಭಿಚಾರಿಕ ಪ್ರಯೋಗಗಳು ಕಂಡುಬರುತ್ತವೆ. ಇಂತಹ ತಾಮಸಿಕ ಹಾಗೂ ನಿಷಿದ್ಧ ಪ್ರಯೋಗಗಳನ್ನು ಜಗದ್ಗುರುಗಳು ಉಪದೇಶಿಸಿದ್ದು ಸರಿಯೇ? ಇದು ಅವರ ಬೋಧನೆಗೆ ಕಳಂಕವೇ? ಎಂಬಂತಹ ಅಪಸ್ವರಗಳಿಗೂ ಹಾಗೂ ಆಕ್ಷೇಪಗಳಿಗೂ ಈ ವೀಡಿಯೊದಲ್ಲಿ ಶಾಸ್ತ್ರ, ಮೀಮಾಂಸಾ ನ್ಯಾಯ, ಪುರಾಣ ಹಾಗೂ ಆಗಮಗಳ ಬೆಳಕಿನಲ್ಲಿ ಸವಿವರವಾದ ಮತ್ತು ಪಾಂಡಿತ್ಯಪೂರ್ಣ ಸಮಾಧಾನವನ್ನು ನೀಡಲಾಗಿದೆ. ವೀಡಿಯೊವನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಹಂಚಿಕೊಳ್ಳಿ. Links   / 1417578507104272   https://adbhutam.wordpress.com/ ದ್ವೇಷ-ಅಸೂಯೆಯಿಂದ ಮಾಡುವ ಅಶಾಸ್ತ್ರೀಯ ಟೀಕೆಗಳಿಗೆ, ಶಾಸ್ತ್ರದ ಮರ್ಯಾದೆ ಮತ್ತು ಪ್ರಮಾಣಗಳ ಮೂಲಕವೇ ಪೂರ್ಣವಿರಾಮ ಇಡುವ ವೈಚಾರಿಕ ಧ್ವನಿ. A series aimed at addressing misrepresentations of Sri Shankara’s works and systematically countering unfounded criticisms through authoritative scriptural references and reasoned analysis. ಇತ್ತೀಚಿನ ದಿನಗಳಲ್ಲಿ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ಭಗವತ್ಪಾದರ ದಿವ್ಯ ಗ್ರಂಥಗಳ ಮೇಲೆ ನಿರಂತರ ಅಪಪ್ರಚಾರ ನಡೆಸಲಾಗುತ್ತಿದ್ದು, ಧರ್ಮಶ್ರದ್ಧೆಯುಳ್ಳ ಸಜ್ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಶಾಸ್ತ್ರಗ್ರಂಥಗಳನ್ನು ಅರ್ಥಮಾಡಿಕೊಳ್ಳಲು ಪದ (ವ್ಯಾಕರಣ), ವಾಕ್ಯ (ಮೀಮಾಂಸಾ) ಮತ್ತು ಪ್ರಮಾಣ (ತರ್ಕ) ಶಾಸ್ತ್ರಗಳ ಜ್ಞಾನ ಅನಿವಾರ್ಯ; ಕೇವಲ ಲೌಕಿಕ ಕುದೃಷ್ಟಿಯಿಂದ ವಿಶ್ಲೇಷಿಸಿದರೆ ಅಪಾರ್ಥಗಳೇ ಸೃಷ್ಟಿಯಾಗುತ್ತವೆ. ಕೇವಲ ಪ್ರಚಾರಕ್ಕಾಗಿ ಶಬ್ದಗಳಿಗೆ ವಿಕೃತ ರೂಪ ಕೊಟ್ಟು ಜನರನ್ನು ದಾರಿತಪ್ಪಿಸುತ್ತಿರುವ ಕುತ್ಸಿತ ವಾದಗಳಿಗೆ, ಭಾವನಾತ್ಮಕವಾಗಿ ಅಲ್ಲದೆ ಶಾಸ್ತ್ರೀಯ ಪ್ರಮಾಣಗಳೊಂದಿಗೆ ತಾರ್ಕಿಕವಾಗಿ ಪೂರ್ಣವಿರಾಮ ಇಡಲು ಆರಂಭವಾಗಿರುವ ವಿಶೇಷ ಸರಣಿಯ ಮೊದಲ ಭಾಗವಿದು. ತಪ್ಪದೇ ವೀಕ್ಷಿಸಿ ಮತ್ತು ಧರ್ಮಬಾಂಧವರೊಂದಿಗೆ ಹಂಚಿಕೊಳ್ಳಿ. Email: mailvivekadarpana@gmail.com *-*-* #ಆದಿಶಂಕರಾಚಾರ್ಯರು #AdiShankaracharya #ಶಂಕರಸಿದ್ಧಾಂತ #ShankaraSiddhanta #ಅದ್ವೈತವೇದಾಂತ #AdvaitaVedanta #ಸನಾತನಧರ್ಮ #SanatanaDharma #ಶಾಸ್ತ್ರಪ್ರಮಾಣ #ShastraPramana #ತರ್ಕಶಾಸ್ತ್ರ #TarkaShastra #ಮೀಮಾಂಸಾಶಾಸ್ತ್ರ #Meemamsa #ವ್ಯಾಕರಣ #Vyakarana #ಪ್ರಪಂಚಸಾರ #Prapanchasara #ಭಜಗೋವಿಂದಂ #BhajaGovindam #ವೇದಶಾಸ್ತ್ರ #VedicTradition #ಸತ್ಯಶೋಧನೆ #DebunkingMyths #ಶಾಸ್ತ್ರೀಯಉತ್ತರ #ShastricRebuttal #ಕುತ್ಸಿತವಾದ #ExposingPropaganda #ಧರ್ಮಸಂರಕ್ಷಣೆ #DharmaRakshane #ಜ್ಞಾನಮಾರ್ಗ #JnanaMarga #ಸನಾತನಸಂಸ್ಕೃತಿ #HinduPhilosophy #ಭ್ರಮಾನಿವಾರಣೆ #DispellingDoubts #ವಿದ್ವತ್ವಿಚಾರ #VidwanSeries #ಶ್ರುತಿಪ್ರಮಾಣ #PramanaVada