Перейти к содержимому

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ; ತೀವ್ರ ಸ್ವರೂಪ ಪಡೆದ ಅರ್ನಾಬ್ ಚಂಡಮಾರುತ

DD Chandana News

0:00 / 0:00

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ; ತೀವ್ರ ಸ್ವರೂಪ ಪಡೆದ ಅರ್ನಾಬ್ ಚಂಡಮಾರುತ

7 887 просмотров · 14 ч назад
DD Chandana News
113 тыс. подписчиков
7 887 просмотров · 14 ч назад
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ರೂಪುಗೊಂಡಿರುವ, ಅರ್ನಾಬ್ ಚಂಡಮಾರುತ, ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಚಂಡಮಾರುತವನ್ನು, ಮುರಾಸು ಎಂದು ಕರೆಯಲಾಗಿದ್ದು, ತೀವ್ರ ಸ್ವರೂಪದ ಚಂಡಮಾರುತ, ಇದೇ ತಿಂಗಳ 3ರಂದು, ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತ, ಪಶ್ಚಿಮ ವಾಯವ್ಯ ದಿಕ್ಕಿಗೆ ಚಲಿಸಿದೆ. ಇಂದು ಮಧ್ಯಾಹ್ನದ ವೇಳೆಗೆ, ವಾಯುಭಾರ ಮತ್ತಷ್ಟು ಹೆಚ್ಚಾಗಿ, ಇಂದು ಮಧ್ಯರಾತ್ರಿಯ ವೇಳೆಗೆ, ತೀವ್ರ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ. ಈ ಚಂಡಮಾರುತ, ಪಶ್ಚಿಮ ಮಧ್ಯ ಬಂಗಾಳಕೊಲ್ಲಿಯತ್ತ ಚಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುರಾಸು ಚಂಡಮಾರುತ, ಮಂಗಳವಾರ ಮುಂಜಾನೆ ದಕ್ಷಿಣ ಆಂಧ್ರಪ್ರದೇಶ , ಕರಾವಳಿಯಲ್ಲಿ ನೆಲಕ್ಕಪ್ಪಳಿಸಲಿದ್ದು, ನೆಲ್ಲೂರು, ನರಸಾಪುರದ ನಡುವೆ, ಕರಾವಳಿ ದಾಟುವ ಸಾಧ್ಯತೆ ಇದೆ. ಇದರಿಂದಾಗಿ ಮುಂದಿನ 3 ದಿನಗಳಲ್ಲಿ, ಆಂಧ್ರಪ್ರದೇಶದ ದಕ್ಷಿಣ ಕರಾವಳಿ , ರಾಯಲ್ ಸೀಮಾ ಭಾಗದಲ್ಲಿ, ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಪರಿಣಾಮಗಳನ್ನು ಎದುರಿಸಲು, ರಾಜ್ಯ ಸರ್ಕಾರ ಸನ್ನದ್ಧವಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸುವಂತೆ ಸೂಚಿಸಲಾಗಿದೆ. ಕರಾವಳಿಯಲ್ಲಿ, ತಗ್ಗು ಪ್ರದೇಶಗಳಲ್ಲಿರುವ ಜನರ ಸ್ಥಳಾಂತರಕ್ಕೂ ಸರ್ಕಾರ ಕ್ರಮ ಕೈಗೊಂಡಿದೆ. #LiveDDChandanaNews #DDChandanaNews #DDChandana #DDKannada