#ಕೈಲಾಸದಾಸೆಎಲ್ಲಿಹುದೋ🌹#KailasadaseEllihudo💐#ಶ್ರಿವಾದಿರಾಜರರಚನೆ 🙏#ಹಯವದನ🌹#ದಾಸರಪದಗಳು🌹#ದಾಸಸಾಹಿತ್ಯ🌹#lyrics👇👇👇
Veena Krishnappa
0:00 / 0:00
#ಕೈಲಾಸದಾಸೆಎಲ್ಲಿಹುದೋ🌹#KailasadaseEllihudo💐#ಶ್ರಿವಾದಿರಾಜರರಚನೆ 🙏#ಹಯವದನ🌹#ದಾಸರಪದಗಳು🌹#ದಾಸಸಾಹಿತ್ಯ🌹#lyrics👇👇👇
35 просмотров · 2 дня назад
Veena Krishnappa
513 подписчиков
35 просмотров · 2 дня назад
#ಸಮಾಜಮುಖಿಕೃತಿಗಳು #raresongs #easybhajans #kannadabhaktigeethegalu #kannadabhaktisongs #kannadabhaktigeethalu #ಕೈಲಾಸದಾಸೆಎಲ್ಲಿಹುದೋ🌹#KailasadaseEllihudo💐#ಶ್ರಿವಾದಿರಾಜರರಚನೆ 🙏#ಹಯವದನ🌹#ದಾಸರಪದಗಳು🌹#ದಾಸಸಾಹಿತ್ಯ🌹
#devaranama #dasarapada #dasasahitya #dasarapadagalu #dasarapada #veryrare #kannada
#lyrics👇👇👇
for ore rare songs, easy bhajans, devaranama and dasarapada please do like, share and Subscribe my you tube channel.
@veenakrishnappa6010
ಹಾಡು.. ಕೈಲಾಸದಾಸೆ ಎಲ್ಲಿಹುದೋ.. 🙏
ರಚನೆ.. ಶ್ರೀ ವಾದಿರಾಜರು.
ಅಂಕಿತ... ಹಯವದನ.
ಗಾಯಕರು.. ಶ್ರೀಮತಿ ವೀಣಾ ಕೃಷ್ಣಪ್ಪ. 🙏
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)
ಕೈಲಾಸದಾಸೆ ಎಲ್ಲಿಹುದೋ
ಶೈಲೇಂದ್ರ ಸುತೆಯರಸ ಶಿವನ ಒಲವಿಲ್ಲದವಗೆ ||ಪ||
ಗುರುಹಿರಿಯರರಿಯದಗೆ ಪರಗತಿಯ ತೊರೆದವಗೆ
ವರಧರ್ಮ ಪಥವ ಮರೆದವಗೆ
ದುರುಳರನೆ ಪೊರೆದು ಪರಸತಿಯನೆರೆದವಗೆ ||೧||
ದೀನಜನರೊಡನಾಡಿ ಹೀನಕರ್ಮವಮಾಡಿ
ಆನೆಂಬ ಮಮತೆಯನೆ ಕೂಡಿ
ದಾನವನೆ ಬೇಡಿ ದುರ್ದಾನಕೆ ಮರುಳಹಗೆ ||೨||
ಅನಾಚಾರಂಗಳಬಿಡದೆ ಮನೆಗೆ ಬಂದರು ಕೊಡದೆ
ಧನದ ಗಂಟುಗಳನು ಕಡಿಯದೆ
ಅನುಸರಿಸಿ ನಡೆಯದೆ ಪರರ ಜರಿದು ನುಡಿವವಗೆ ||೩||
ವಾದಿರಾಜನ ನುಡಿಯ ಹಿತವೆಂದು ಲಾಲಿಸದೆ
ಕ್ರೋಧಮಯನಾಗಿ ದೂಷಿಪಗೆ
ಪಾದಕೆರಗದೆ ಜನನಿಯನು ಆದರಿಸದವಗೆ ||೪||
ಹಯವದನನಲ್ಲೆಂದು ತಾನೆಲ್ಲ ಬಲ್ಲೆಯೆಂದು
ದಯವುಳ್ಳವರ ದೈವವೆನದೆ ಈ
ಸ್ವಯಂಭು ಲಿಂಗದ ಕಲ್ಲೇ ದೈವವು ಎಂಬುವಗೆ||೫||
kailAsadAse ellihudO
shailEMdra suteyarasa Sivana olavilladavage ||pa||
guruhiriyarariyadage paragatiya toredavage
varadharma pathava maredavage
duruLarane poredu parasatiyaneredavage ||1||
dInajanaroDanADi hInakarmavamADi
AneMba mamateyane kUDi
dAnavane bEDi durdAnake maruLahage ||2||
anAcAraMgaLabiDade manege baMdaru koDade
dhanada gaMTugaLanu kaDiyade
anusarisi naDeyade parara jaridu nuDivavage ||3||
vAdirAjana nuDiya hitaveMdu lAlisade
krOdhamayanAgi dUShipage
pAdakeragade jananiyanu Adarisadavage ||4||
hayavadananalleMdu tAnella balleyeMdu
dayavuLLavara daivavenade I
svayaMBu liMgada kallE daivavu eMbuvage||5||