Перейти к содержимому

ಶ್ರೀ ಕೃಷ್ಣನ ವೇಷದಲ್ಲಿ ಮಿಂಚಿದ ಚಿಣ್ಣರು ಶ್ರೀ ಮೋಕ್ಷಗುಂಡಮ್‌ ವಿಶ್ವೇಶ್ವರಯ್ಯ ವಿದ್ಯಾ ಮಂದಿರ ಹಿರಿಯೂರು

Mokshagundam School Hiriyur

0:00 / 0:00

ಶ್ರೀ ಕೃಷ್ಣನ ವೇಷದಲ್ಲಿ ಮಿಂಚಿದ ಚಿಣ್ಣರು ಶ್ರೀ ಮೋಕ್ಷಗುಂಡಮ್‌ ವಿಶ್ವೇಶ್ವರಯ್ಯ ವಿದ್ಯಾ ಮಂದಿರ ಹಿರಿಯೂರು

572 просмотра · 2 недели назад
Mokshagundam School Hiriyur
444 подписчика
572 просмотра · 2 недели назад
ಶ್ರೀ ಕೃಷ್ಣನ ವೇಷದಲ್ಲಿ ಮಿಂಚಿದ ಚಿಣ್ಣರು ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಶ್ರೀಕೃಷ್ಣನ ಜನ್ಮದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣ ಜನ್ಮದಿನವನ್ನು ಚಾಂದ್ರಮಾನ ಪದ್ಧತಿಯ ಪ್ರಕಾರ ಶ್ರಾವಣ ಕೃಷ್ಣ ಅಷ್ಟಮಿಯಂದು ಹಾಗೂ ಸೌರಮಾನ ಪದ್ಧತಿಯ ಪ್ರಕಾರ ಸಿ೦ಂಹಮಾಸದ ರೋಹಿಣಿ ನಕ್ಷತ್ರದಂದು ಆಚರಿಸಲಾಗುತ್ತದೆ ಎ೦ದು ಮೋಕ್ಷಗುಂಡಮ್‌ ಶಾಲೆಯ ಅಧ್ಯಕ್ಷರಾದ ಶ್ರೀ ಎಂ. ಬಸವರಾಜಪ್ಪ ಅವರು ತಿಳಿಸಿದರು. ಈ ಹಬ್ಬವು ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವುದರ ಜೊತೆಗೆ, ಧರ್ಮ. ಸತ್ಯ, ಪ್ರೀತಿ, ಭಕ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದೇಶವನ್ನು ನೀಡುತ್ತದೆ. ಶ್ರೀಕೃಷ್ಣನ ಜೀವನ ಮತ್ತು ಉಪದೇಶಗಳು ನಮ್ಮೆಲ್ಲರಿಗೂ ಸದಾ ಸ್ಫೂರ್ತಿಯಾಗಿವೆ. ಹಿರಿಯೂರು ನಗರದ ಪ್ರತಿಷ್ಠಿತ ಶಾಲೆ ಶ್ರೀ ಮೋಕ್ಷಗುಂಡಮ್‌ ವಿಶ್ವೇಶ್ವರಯ್ಯ ವಿದ್ಯಾ ಮಂದಿರ ರೋಟರಿ, ಹಿರಿಯೂರು, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಇನ್ನರ್‌ ವೀಲ್‌ ಕ್ಹಬ್‌, ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಎಲ್‌ ಕೆ ಜಿ. ಯು ಕೆ ಜಿ ಮಕ್ಕಳಿಗೆ ಶ್ರೀಕೃಷ್ಣನ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮೋಕ್ಷಗುಂಡಮ್‌ ವಿಶ್ವೇಶ್ವರಯ್ಯ ವಿದ್ಯಾ ಮಂದಿರ ಶಾಲೆಯ ಅಧ್ಯಕ್ಷರಾದ ಎಂ ಬಸವರಾಜಪ್ಪ ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಎಚ್‌ ಎಸ್‌ ಸುಂದರರಾಜ್‌, ಜೇರ್‌ಮ್ಮಾನ್‌ ರೆಡ್‌ಕ್ರಾಸ್‌, ಶ್ರೀ ವಸ೦ತ್‌ ಕುಮಾರ್‌ ಅದ್ಯಕ್ಷರು ರೋಟರಿ ಹಿರಿಯೂರು, ಶ್ರೀಮತಿ ನಿರ್ಮಲ ಮಹಂತೇಶ್‌ ಕಾರ್ಯದರ್ಶಿ ಇನ್ನರ್‌ ವೀಲ್‌, ನಿರ್ದೇಶಕರಾದ ಶ್ರೀ ರವಿಪ್ರಕಾಶ್‌. ಖಜಾಂಚಿ ಸಣ್ಣಭೀಮಣ್ಣ, ಮುಖ್ಯ ಶಿಕ್ಷಕರಾದ ಜಿ ತಿಪ್ಪೇಸ್ವಾಮಿ, ರೋಟರಿ, ಹಿರಿಯೂರು, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಇನ್ನರ್‌ ವೀಲ್‌ ಕ್ಲಬ್‌ ಸದಸ್ಯರುಗಳು ಮತ್ತು ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಮತ್ತು ಪೋಷಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಎಲ್‌ ಕೆ ಜಿ ಮತ್ತು ಯು ಕೆ ಜಿಯ 60 ಪುಟಾಣಿಗಳು ಕೃಷ್ಣನ ವಿವಿಧ ವೇಷಗಳನ್ನು ಧರಿಸಿದ್ದರು. ಈ ಕಾರ್ಯಕ್ರಮದಲ್ಲಿ ಮೂವರು ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಮತ್ತು ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.