Перейти к содержимому

ಒಂದು ತಿಂಗಳಿನಿಂದ ಕತ್ತಲಲ್ಲಿ ಬದುಕು ಕಟ್ಟಿಕೊಂಡಿರುವ ತೋಟದ ಮನೆಯ ರೈತರು #nammachannarayapatna

ನಮ್ಮ ಚನ್ನರಾಯಪಟ್ಟಣ / Namma Channarayapatna

0:00 / 0:00

ಒಂದು ತಿಂಗಳಿನಿಂದ ಕತ್ತಲಲ್ಲಿ ಬದುಕು ಕಟ್ಟಿಕೊಂಡಿರುವ ತೋಟದ ಮನೆಯ ರೈತರು #nammachannarayapatna

58 просмотров · 12 часов назад
ನಮ್ಮ ಚನ್ನರಾಯಪಟ್ಟಣ / Namma Channarayapatna
4,35 тыс. подписчиков
58 просмотров · 12 часов назад
ಐಪಿ ಫೀಡರ್‌ಗಳಲ್ಲಿ 6ರಿಂದ 10 ಗಂಟೆ ಸಿಂಗಲ್‌ಫೇಸ್ ವಿದ್ಯುತ್ ಪೂರೈಕೆಗೆ ಸೂಚನೆ. ಐಪಿ ಫೀಡರ್‌ಗಳಲ್ಲಿ ಕನಿಷ್ಠ 6ರಿಂದ 10 ಗಂಟೆಗಳ ಕಾಲ ಸಿಂಗಲ್‌ಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಶಾಸಕ ಸಿ.ಎನ್. ಬಾಲಕೃಷ್ಣ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು. ಚನ್ನರಾಯಪಟ್ಟಣ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ಸೆಸ್ಕ್ ಇಲಾಖೆಯ ವಿವಿಧ ಹಂತಗಳ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ತಾಲೂಕಿನಲ್ಲಿ ಸಾರ್ವಜನಿಕರು ಹಾಗೂ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಿದರು. ಶೇ.80ಕ್ಕೂ ಹೆಚ್ಚು ರೈತರು ತೋಟಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆ, ವಿದ್ಯಾರ್ಥಿಗಳ ವ್ಯಾಸಂಗ ಸೇರಿದಂತೆ ಹಲವು ದೈನಂದಿನ ಚಟುವಟಿಕೆಗಳಿಗೆ ವಿದ್ಯುತ್ ಅತ್ಯಗತ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರ ಸುರಕ್ಷತೆಯ ದೃಷ್ಟಿಯಿಂದಲೂ ರಾತ್ರಿ ವೇಳೆ ವಿದ್ಯುತ್ ಪೂರೈಕೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಸಿಂಗಲ್‌ಫೇಸ್ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. #nammachannarayapatna #channarayapatna #kebenaran #kptcl #cescom #cesko #bescom #mescom #engineer