Перейти к содержимому

ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿಗೆ ಸಖತ್ ಕೌಂಟರ್ ಕೊಟ್ಟ ಸಚಿವ ಡಾ!ಎಂ ಸಿ ಸುಧಾಕರ್...!

A1tvnews chintamani

0:00 / 0:00

ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿಗೆ ಸಖತ್ ಕೌಂಟರ್ ಕೊಟ್ಟ ಸಚಿವ ಡಾ!ಎಂ ಸಿ ಸುಧಾಕರ್...!

9 267 просмотров · 4 месяца назад
A1tvnews chintamani
11,4 тыс. подписчиков
9 267 просмотров · 4 месяца назад
ಅಂಬೇಡ್ಕರ್ ಭವನದ ಜಾಗದ ಇತಿಹಾಸ ನಿಮಗೇನು ಗೊತ್ತು?ಜೆ.ಕೆ.ಕೃಷ್ಣಾರೆಡ್ಡಿ ವಿರುದ್ಧ ಸಚಿವ ಡಾ. ಎಂ.ಸಿ. ಸುಧಾಕರ್ ಆಕ್ರೋಶದ ನುಡಿಗಳು. "ಬರೀ ನಮ್ಮ ವಿರುದ್ಧ ಆಪಾದನೆ ಮಾಡುವುದೇ ನಿಮ್ಮ ಕೆಲಸವಾಯ್ತು";ಮಾಜಿ ಶಾಸಕರ ವಿರುದ್ಧ ಸಚಿವ ಎಂ.ಸಿ. ಸುಧಾಕರ್ ವಾಗ್ದಾಳಿ. ಚಿಂತಾಮಣಿ:ಅಭಿವೃದ್ಧಿಯ ಹೆಸರಿನಲ್ಲಿ ಬಡವರ ಕಣ್ಣಲ್ಲಿ ನೀರು ತರಿಸುತ್ತಿದ್ದಾರೆ ಎಂದು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ.ಆದರೆ,ನಗರದಲ್ಲಿ ಐಡಿಎಸ್‌ಎಂಟಿ ತಂದಿದ್ದು ಯಾರು?ಮುನ್ಸಿಪಾಲಿಟಿ ಮಳಿಗೆಗಳನ್ನು ಕಟ್ಟಿಸಿದ್ದು ಯಾರು?ಅಧಿಕಾರದಲ್ಲಿದ್ದಾಗ 10 ವರ್ಷಗಳ ಕಾಲ ಕೇವಲ ನನ್ನ ವಿರುದ್ಧ ಅಪಪ್ರಚಾರ ಮಾಡುವುದರಲ್ಲೇ ಕಾಲ ಕಳೆದ ಇವರಿಗೆ,ಬಡವರ ಬಗ್ಗೆ ಈಗ ಕಾಳಜಿ ಬಂದಿರುವುದು ಹಾಸ್ಯಾಸ್ಪದ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ!ಎಂ ಸಿ ಸುಧಾಕರ್ ಅವರು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ರವರ ವಿರುದ್ಧ ಹರಿಹಾಯ್ದಿರು. ಇಂದು ಚಿಂತಾಮಣಿ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ದಿನಾಚರಣೆ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾತನಾಡಿದ ಅವರು ಆಶ್ರಯ ಲೇಔಟ್ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕು ಎಂಬ ಆಲೋಚನೆ ಮಾಡಿದ್ದೇ ನಾವು.ಅದಕ್ಕಾಗಿ ಸರ್ಕಾರದಿಂದ 5 ಲಕ್ಷ ರೂಪಾಯಿ ಹಣವನ್ನೂ ಕಾಯ್ದಿರಿಸಲಾಗಿತ್ತು.ಆದರೆ ನಗರದ ಮಧ್ಯಭಾಗದಲ್ಲೇ ಭವನ ನಿರ್ಮಾಣವಾಗಬೇಕು ಎಂದು ನಮ್ಮ ಸ್ನೇಹಿತರು ಒತ್ತಾಯಿಸಿದಾಗ, ಕಾಸ್ಮೋಪಾಲಿಟನ್ ಕ್ಲಬ್ ಇದ್ದ ಜಾಗವನ್ನು ಗುರುತಿಸಲಾಯಿತು ಎಂದರು. ಮುಂದುವರಿದು ಆ ಕಟ್ಟಡ ಲೈಬ್ರರಿ ಹೆಸರಿನಲ್ಲಿತ್ತು.ಅದನ್ನು ಯಾರು ಬಿಡಿಸಿಕೊಟ್ಟರು ಎಂಬ ದಾಖಲೆಗಳು ನಮ್ಮ ಬಳಿ ಇವೆ.ಪಟೇಲರ ಬಿಲ್ಡಿಂಗ್ ಮತ್ತು ಕಾಸ್ಮೋಪಾಲಿಟನ್ ಕ್ಲಬ್ ಜಾಗಗಳನ್ನು ವಶಕ್ಕೆ ಪಡೆದು ಅಭಿವೃದ್ಧಿಪಡಿಸಲು ನಾವು ಎರಡು ವರ್ಷಗಳ ಕಾಲ ಶ್ರಮಪಟ್ಟಿದ್ದೇವೆ.ಚಿಂತಾಮಣಿಯ ಹಿನ್ನೆಲೆ ಮತ್ತು ಇತಿಹಾಸ ಯಾವುದೂ ತಿಳಿಯದವರು ಇಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಸುರಕ್ಷತೆ ಮತ್ತು ದೂರದೃಷ್ಟಿಯ ಅಭಿವೃದ್ಧಿಗಾಗಿ ಹಳೆಯ ಕಟ್ಟಡಗಳ ತೆರವು ಅನಿವಾರ್ಯವಾಗಿತ್ತು.ಇದರಲ್ಲಿ ಯಾವುದೇ ರಾಜಕೀಯ ದ್ವೇಷವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದು,ಮಾಜಿ ಶಾಸಕರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಚಿಂತಾಮಣಿಯ ಯಾವ ಮೂಲೆಯಲ್ಲಿ ಏನಿದೆ ಎಂಬ ಎಬಿಸಿಡಿಯೂ ಗೊತ್ತಿಲ್ಲದ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ರವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ"ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ ಇನ್ನೊಂದು ತಿಂಗಳ ಒಳಗಾಗಿ ಅಂಬೇಡ್ಕರ್ ಭವನವನ್ನು ನಾನೇ ಉದ್ಘಾಟನೆ ಮಾಡುತ್ತೇನೆ.ಅದು ಯಾವ ರೀತಿ ಇರಲಿದೆ ಎಂಬುದನ್ನು ನೀವೇ ಬಂದು ಕಣ್ಣಾರೆ ನೋಡಿ. ಕೇವಲ ಬಾಯಿ ಮಾತಿನಲ್ಲಿ ದಲಿತರ ಹಾಗೂ ಶೋಷಿತ ವರ್ಗಗಳ ಬಗ್ಗೆ ಮಾತನಾಡುವುದಲ್ಲ ನಮ್ಮ ಕೆಲಸದಲ್ಲಿ ಅದು ಕಾಣಿಸಬೇಕು. ಬಡವರು ಎಲ್ಲಿ ಕೆಲಸ ಮಾಡುತ್ತಾರೆ ಅವರಿಗೆ ಏನು ಮಾಡಬೇಕು ಎಂಬ ಮಾನವೀಯತೆ ನಮಗೂ ಇದೆ. ಈ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನಾವು ಮಾಡುತ್ತಿರುವುದು ನಿಮಗೋಸ್ಕರ(ಜನರಿಗಾಗಿ).ನೀವು ಯಾವ ಉದ್ಯೋಗದಲ್ಲಿದ್ದೀರಿ?ಕೈಗಾರಿಕೆಗಳನ್ನು ಯಾವ ಹಾದಿಗೆ ತಂದಿದ್ದೀರಿ? ರೈತರಿಗೆ ಎಂದಾದರೂ ನೇರವಾಗಿ ಚೆಕ್ ನೀಡಿದ್ದೀರಾ?ಎಂದು ಪ್ರಶ್ನಿಸುವ ಮೂಲಕ ಕೃಷ್ಣಾರೆಡ್ಡಿ ಅವರ ಅವಧಿಯ ಅಭಿವೃದ್ಧಿ ಶೂನ್ಯತೆಯನ್ನು ತರಾಟೆಗೆ ತೆಗೆದುಕೊಂಡರು. ಚಿಂತಾಮಣಿ ಮತ್ತು ಶಿಡ್ಲಘಟ್ಟ ಭಾಗದಲ್ಲಿ ಕೈಗಾರಿಕೆಗಳು ಅಭಿವೃದ್ಧಿಯಾದರೆ ಮಾತ್ರ ನಮ್ಮ ಭಾಗದ ಅಸಂಘಟಿತ ಕಾರ್ಮಿಕರಿಗೆ ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುತ್ತವೆ. ನಮ್ಮ ಜನ ಕೆಲಸ ಹುಡುಕಿಕೊಂಡು ಬೇರೆ ಊರುಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಸ್ವಂತ ಊರಿನಲ್ಲೇ ಉದ್ಯೋಗ ಸಿಗುವಂತೆ ಮಾಡುವುದು ನಮ್ಮ ಗುರಿ.ಇದಕ್ಕಾಗಿ ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ" ಎಂದು ಸಚಿವರು ಪ್ರತಿಪಾದಿಸಿದರು. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆ ಮಂಜೂರು ಮಾಡುವಲ್ಲಿ ಉಂಟಾಗಿದ್ದ ರಾಜಕೀಯ ಎಳೆದಾಟದ ಬಗ್ಗೆ ಮಾತನಾಡಿದ ಸಚಿವರು,"ಮೊದಲು ಈ ವಸತಿ ಶಾಲೆಯನ್ನು ಬಾಗೇಪಲ್ಲಿಗೆ ನೀಡಲಾಗಿತ್ತು. ಆದರೂ ನಾನು ಧೃತಿಗೆಡದೆ, ಚಿಂತಾಮಣಿ ಮತ್ತು ಶಿಡ್ಲಘಟ್ಟ ಭಾಗದ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಹಠ ಹಿಡಿದು ಹೋರಾಡಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಚರ್ಚಿಸಿ, ಈ ಬಾರಿಯ ಬಜೆಟ್‌ನಲ್ಲಿ ಚಿಂತಾಮಣಿಗೆ ಕಾರ್ಮಿಕರ ವಸತಿ ಶಾಲೆಯನ್ನು ಮಂಜೂರು ಮಾಡಿಸಿದ್ದೇನೆ ಎಂದರು. ನಾವು ಮಾಡುತ್ತಿರುವ ಜನಪರ ಕೆಲಸಗಳನ್ನು ಸಹಿಸದೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಬಡವರ ಮಕ್ಕಳ ಶಿಕ್ಷಣಕ್ಕೆ ಜಾಗ ನೀಡಲು ನಮಗೆ ಯಾವುದೇ ಹಿಂಜರಿಕೆಯಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪ ಮಾಡುವವರಿಗೆ ಕ್ಷೇತ್ರದ ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಕ್ಷೇತ್ರ ಮತ್ತು ಇಲಾಖೆಯ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು,ಭ್ರಷ್ಟಾಚಾರದ ಮೂಲಕ ಹಣ ವಸೂಲಿ ಮಾಡುವ ಯಾವುದೇ ಹಪಾಹಪಿ ನನಗಿಲ್ಲ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅವರನ್ನು ಉಲ್ಲೇಖಿಸಿ ಮಾತನಾಡಿದ ಸಚಿವರು ನೀವು ಈ ಹಿಂದೆ ಉಪಸಭಾಪತಿಯಾಗಿದ್ದಾಗ, ಯಾರನ್ನೋ ಮಧ್ಯವರ್ತಿಗಳನ್ನಾಗಿ ಇಟ್ಟುಕೊಂಡು ಮನೆಯ ಸುತ್ತಮುತ್ತಲು ಜನರನ್ನು ಸೇರಿಸಿ ಅವರ ಮೇಲೆ ಒತ್ತಡ ಹೇರಿ ಹಣ ವಸೂಲಿ ಮಾಡಿದ್ದೀರಲ್ಲ?ಅದೇ ರೀತಿ ಎಲ್ಲರೂ ಮಾಡುತ್ತಾರೆ ಎಂದುಕೊಂಡಿದ್ದೀರಾ?ಎಲ್ಲರೂ ನಿಮ್ಮಂತೆಯೇ ಇರಲು ಸಾಧ್ಯವಿಲ್ಲ"ಎಂದು ಕಡಕ್ ಆಗಿ ಪ್ರಶ್ನಿಸಿದರು. ತಮ್ಮ ಮತ್ತು ಕೃಷ್ಣಾರೆಡ್ಡಿ ಅವರ ಹಿನ್ನೆಲೆಯನ್ನು ಹೋಲಿಸಿ ಮಾತನಾಡಿದ ಸಚಿವ ಸುಧಾಕರ್ ನೀವು ಮೂಲತಃ ಒಬ್ಬ ವ್ಯಾಪಾರಸ್ಥರು.ವ್ಯಾಪಾರ ಮತ್ತು ಲಾಭದ ಉದ್ದೇಶಕ್ಕಾಗಿಯೇ ನೀವು ಇಂದು ಚಿಂತಾಮಣಿಗೆ ಬಂದಿದ್ದೀರಿ. ಆದರೆ ನಾವು ವಿದ್ಯಾವಂತರಾಗಿ ಸ್ವಂತ ಕಾಲಿನ ಮೇಲೆ ನಿಂತು ಉದ್ಯೋಗ ಮಾಡಿದವರು.ನಾನು ಕಾಲೇಜುಗಳಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯಿಂದ ಹಿಡಿದು ಪ್ರೊಫೆಸರ್ ಆಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದವನು ನಮಗೆ ಗೌರವಯುತವಾಗಿ ಬದುಕುವ ದಾರಿ ತಿಳಿದಿದೆಎಂದು ಕಿಡಿಕಾರಿದರು. ಪ್ರಸ್ತುತ ಕ್ಷೇತ್ರದಲ್ಲಿ ನಡೆಯುತ್ತಿರುವ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಸ್ತಾಪಿಸಿದ ಸಚಿವರು ನಾವು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಆರಂಭಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ.ಉತ್ತಮ ರೀತಿಯ ವಿನ್ಯಾಸ ರೂಪಿಸಲು ಅಧಿಕಾರಿಗಳು ನನಗೆ ಜವಾಬ್ದಾರಿ ನೀಡಿದ್ದಾರೆ. ಇದೆಲ್ಲವನ್ನೂ ನಾನು ಕ್ಷೇತ್ರದ ಜನರ ಒಳಿತಿಗಾಗಿ ಮಾಡುತ್ತಿದ್ದೇನೆಯೇ ಹೊರತು ವೈಯಕ್ತಿಕ ಲಾಭಕ್ಕಲ್ಲ.ಕ್ಷೇತ್ರದ ಅಭಿವೃದ್ಧಿ ಹಾಗೂ ನನ್ನ ಇಲಾಖೆಯಲ್ಲಿ ಹೇಗೆ ಉತ್ತಮ ಕೆಲಸ ಮಾಡಬೇಕು ಎಂಬುದಷ್ಟೇ ನನ್ನ ಸದಾಕಾಲದ ಚಿಂತನೆಯಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಧ್ಯಕ್ಷರು ದೇವರಾಜ್ ,ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಅಜ್ಮಿ,ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆನಂದ ನಗರ ಸಭೆ ಪೌರಾಯುಕ್ತ ಜಿ ಎನ್ ಚಲಪತಿ,ತಾಲ್ಲೂಕು ಕಾರ್ಮಿಕ ನಿರೀಕ್ಷಕರು ವಿಜಯಲಕ್ಷ್ಮಿ,ಮಾನವ ಹಕ್ಕುಗಳ ಕಮಿಟಿ ರಾಜ್ಯಾಧ್ಯಕ್ಷರಾದ ಸಿ ಎಂ ಬೈರೇಗೌಡ,ವಕೀಲರಾದ ಸಂತೋಷ್,ವೆಂಕಟರಾಜು,ಕೃಷ್ಣ ಮೂರ್ತಿ,ಜ್ಯೋತಿ,ಸವಿತ,ಪ್ರಕಾಶ್ ನಟರಾಜ್ ಸೇರಿದಂತೆ ಕುಲಿ ಕಾರ್ಮಿಕರು ಭಾಗವಹಿಸಿದ್ದರು.