Перейти к содержимому

ರಾವ್ ಬಹದ್ದೂರ್ ಡಾಕ್ಟರ್ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಭಾಗ- 4

Shankar Bidari Foundation

0:00 / 0:00

ರಾವ್ ಬಹದ್ದೂರ್ ಡಾಕ್ಟರ್ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಭಾಗ- 4

212 просмотров · 5 дней назад
Shankar Bidari Foundation
50 подписчиков
212 просмотров · 5 дней назад
1910 ರಲ್ಲಿ ಹಳಕಟ್ಟಿಯವರು ಸ್ಥಾಪಿಸಿದ ಬಿಜಾಪುರ ಲಿಂಗಾಯತ್ ವಿದ್ಯಾ ಅಭಿವೃದ್ಧಿ ಸಂಸ್ಥೆ ಸ್ಥಾಪಿಸಿದರು. 1912ರಲ್ಲಿ ಶ್ರೀ ಸಿದ್ದೇಶ್ವರ ಬ್ಯಾಂಕ್ ಆರಂಭಿಸಿದರು. ಈ ಎರಡು ಸಂಸ್ಥೆ ಹಳಕಟ್ಟಿಯವರ ಕಣ್ಣುಗಳಾಗಿದ್ದವು. ಅಲ್ಲದೆ ಧಾರ್ಮಿಕ ಜಾಗೃತಿ ಮೂಡಿಸಲು ಕಲ್ಯಾಣದ ಶಿವ ಶರಣರ ಸಿದ್ದರಾಮೇಶ್ವರರ ನೆನಪಿನಲ್ಲಿ ಸಿದ್ದೇಶ್ವರ ಸಂಸ್ಥೆ ಒಟ್ಟು ಹಾಕಿದರು. ನಂತರ ಒಂದೆರಡು ವರ್ಷಗಳಲ್ಲೇ ಸಿದ್ದೇಶ್ವರ ಪ್ರೌಢಶಾಲೆಯನ್ನು ಪ್ರಾರಂಭಿಸಿದರು . ಕೇವಲ ವಚನ ಸಾಹಿತ್ಯವನ್ನು ಸಂಗ್ರಹಿಸಿದ್ದಷ್ಟೇ ಅಲ್ಲದೆ ಅವರು ಹರಿಹರನ 46 ರಗಳೆಗಳನ್ನು ಏಳು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಬಸವಾದಿ ಶರಣರ ವಚನ ಸಾಹಿತ್ಯವನ್ನು ಮನಮುಟ್ಟಿ ಅಧ್ಯಯನ ಮಾಡಿ ಅಲ್ಲಿಯ ತತ್ವಗಳ ಮಹೋನ್ನತಿಗೆ ಬೆರಗಾಗಿ ಅವುಗಳನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಂಡು ಬಂದ ಪರಮ ಚೇತನ ಹಳಕಟ್ಟಿ. ಇವರನ್ನು ನಾಡು ಅತ್ಯಂತ ಅಭಿಮಾನದಿಂದ ಗೌರವದರಗಳನ್ನು ಸಲ್ಲಿಸುತ್ತಾ ಬಂದಿದೆ. ಅವರ ಕರ್ತವ್ಯ ಶಕ್ತಿ, ಕ್ರಿಯಾಶೀಲತೆ ಹಾಗೂ ಸಾಮಾಜಿಕ ಕಳಕಳಿ ಕಂಡ ಆಂಗ್ಲ ಸರ್ಕಾರ ರಾವ್ ಸಾಹೇಬ ರಾವ್ ಬಹದ್ದೂರ್ ಎಂಬ ಎರಡು ಬಿರುದುಗಳನ್ನು ನೀಡಿ ಗೌರವಿಸಿತು. ಆಂಗ್ಲ ಸರ್ಕಾರದ ಒಬ್ಬ ವ್ಯಕ್ತಿಗೆ ಎರಡು ಬಿರುದುಗಳನ್ನು ನೀಡಿದ ನಿದರ್ಶನಗಳು ಇಲ್ಲವೇ ಇಲ್ಲ ಎಂಬ ಮಾತಿದೆ. ವಚನ ಪಿತಾಮಹ ಡಾಕ್ಟರ್ ಫ. ಗು. ಹಳಕಟ್ಟಿಯವರ ಆದರ್ಶ ಜೀವನವನ್ನು ಸಮಾಜ ಸೇವೆಯನ್ನು ಸಾಹಿತ್ಯ ಸೇವೆಯನ್ನು ಸ್ಮರಿಸಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ ಅಲ್ಲದೆ ಅಗತ್ಯವೂ ಎನಿಸಿದೆ ಅವರ ಬದುಕಿನ ಆದರ್ಶವನ್ನು ಅನುಸರಿಸುವುದೇ ನಾವು ಹಳಕಟ್ಟಿಯವರಿಗೆ ಸಲ್ಲಿಸುವ ನಿಜವಾದ ಗೌರವ.