ಪಾಪ ! ದ್ವಾರಕೀಶ್
Pinaka ಪಿನಾಕ
0:00 / 0:00
ಪಾಪ ! ದ್ವಾರಕೀಶ್
389 просмотров · 2 г. назад
Pinaka ಪಿನಾಕ
181 подписчик
389 просмотров · 2 г. назад
ಲೊಚಗುಟ್ಟಿದ್ರು ಅವರು !
ಆ ಲೊಚಗುಟ್ಟುವಿಕೆ ಕೇವಲ ಶಬ್ಧ ಆಗಿರ್ಲಿಲ್ಲ ! ಅದು ಹೃದಯಾಂತರಾಳದಿಂದ ಬಂದಿದ್ದು !
ಎಂತಹ ಸಾಹಸಿಗರು ! ಮತ್ತೆ ಉದ್ಗರಿಸಿದ್ರು.
ಕನ್ನಡ ಚಿತ್ರರಂಗದಲ್ಲಿ ಹಲವು ಮೊದಲುಗಳ ಮಾಡಿದವರು !
ಅದ್ಬುತ ಕಲಾವಿದ ! ಸಾಹಸಿ ನಿರ್ಮಾಪಕ ! ನಿರ್ದೇಶಕ ಕೂಡಾ !
ಹತ್ತಾರು ಕಲಾವಿದರನ್ನು ಬೆಳಕಿಗೆ ತಂದವರು !
ನೆನೆಸಿಕೊಂಡ್ರು, ಮೇಯರ್ ಮುತ್ತಣ್ಣನ್ನ !
ಸಿದ್ದಲಿಂಗಯ್ಯನವರಂತಹ ಪ್ರತಿಭಾವಂತರಿಗೆ ನಿರ್ದೇಶನಕ್ಕೆ ಅವಕಾಶ ನೀಡಿದೌವ್ರು ದ್ವಾರಕೀಶ್.
ಇವತ್ತೂ ಸಹ ಮೇಯರ್ ಮುತ್ತಣ್ಣ ನೋಡಿದ್ರೆ ಖುಷಿಯಾಗ್ತದೆ ! ಚಪ್ಪರಿಸಿದ್ರು.
ಮೊಟ್ಟ ಮೊದಲು ವಿದೇಶದಲ್ಲಿ
ಶೂಟಿಂಗ್ ಮಾಡಿದ ನಿರ್ಮಾಪಕ.
"ಸಿಂಗಾಪೂರ್ನಲ್ಲಿ ರಾಜಾ ಕುಳ್ಳ" ಬಹು ಚೆಂದದ ಚಿತ್ರ. ಆದ್ರೆ ಆಫ್ರಿಕಾಗೆ ಹೋಗಿ "ಆಫ್ರಿಕಾದಲ್ಲಿ ಶೀಲಾ" ಮಾಡಿ ಕೈಸುಟ್ಟುಕೊಂಡವರು.
ಅಣ್ಣಾವ್ರ ಜೊತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಾಡೌರೆ !
ಸಾಹಸ ಸಿಂಹರೊಂದಿಗೆ ಅನುಪಮ ಜೋಡಿ !
ಭಾಗ್ಯವಂತರು ಎಂತಹ ಚಿತ್ರ !
ಅಣ್ಣಾವ್ರು, ಬಿ. ಸರೋಜಾದೇವಿ ಎಂತಹ ಅ್ಯಕ್ಟಿಂಗ್ !
ಆಪ್ತಮಿತ್ರ !
ರಿಮೇಕ್ ಆದ್ರೂ ಬಹು ಸೊಗಸಾದ ಚಿತ್ರ !
ಅವರ ಮಾತು ಮುಂದುವರಿದೇ ಇತ್ತು !
ನಾವೆಲ್ಲ ಸುಮ್ಮನೇ ಸೈಲೆಂಟಾಗಿ ಕೇಳಿಸ್ಕೊತ್ತಿದ್ದೋ !
ಆ ಹಿಂದಿ ಚಿತ್ರ, ರಾಜೇಶ್ ಖನ್ನಾ ಮಾಡಿದ್ದ "ಪ್ಯಾರ್ ಝುಕ್ತಾ ನಹಿ" ರಿಮೇಕನ್ನ "ನೀ ಬರೆದ ಕಾದಂಬರಿ" ಚೆನ್ನಾಗಿ ಮಾಡಿದ್ರು.
ಲೀಲಾವತಿ ಮಗ ವಿನೋದ್ ರಾಜ್, ಶೃತಿ ಎಲ್ಲರನ್ನ ಬೆಳಕಿಗೆ ತಂದೌರೇ ಅವ್ರು !
ಸೂಪರ್ ಸ್ಟಾರ್ ರಜನಿಕಾಂತನ್ನ ಆಕ್ಕೊಂಡ್ ತಮಿಳು ಸಿನಿಮಾಗಳ್ನೂ ಮಾಡಿದ್ರು. ಶ್ರೀದೇವಿ ಹಿರೋಯಿನ್.
ಆದ್ರೆ, . .
ಮಕ್ಕಳನ್ನ ಹೀರೋ ಮಾಡೋಕ್ಕೋಗಿ ಕಷ್ಟಕ್ಕೆ ಸಿಕ್ಕಾಕ್ ಕೊಂಡ್ರು.
ದುಡಿದಿದ್ದೆಲ್ಲಾ ಮಾರಿದ್ರು,
ಗಲಾಟೆಗಳಾದ್ವು !
ಪೋಲೀಸ್ ಠಾಣೆಗೆ ಹೋಗ್ ಬೇಕಾಯ್ತು !
ಪಾಪ !
ಒಬ್ರೂ! ಒಬ್ರಾದ್ರೂ ಅವರ ಕಷ್ಟಕ್ಕೆ ನಿಂತ್ಕೊಂಡ್ರಾ !
ಕೃತಜ್ಘರು !
ಮಾತು ಅನುಕಂಪದಿಂದ ಕೋಪಕ್ಜೆ ತಿರುಗ್ತಿತ್ತು.
ಬಿಡಿ, ಅಣ್ಣಾ !
ಆಗಿದ್ದು ಆಗೋಯ್ತು !
ಜೀವಾನೇ ಹೋಯ್ತು.
ಯಾರಿಗ್ಯಾರೂ ಇಲ್ಲ,
ಕೆಟ್ಟವಂಗೆ ಕೆಳೆಯಿಲ್ಲ,
ಜಗದ ನೆಂಟ ನೀನೇ ಕೂಡಲಸಂಗಮದೇವಾ !
ಕನ್ನಡದ ದೇವರು ಬಸವಣ್ಣನವರ ವಚನದ ಸಾಲು ಹೇಳಿ ಸಮಾಧಾನಿಸಿದೆ.
ಕಾಫಿ ಸತ್ಸಂಗದವ್ರು ತಲೆ ಅಲ್ಲಾಡಿಸಿದ್ರು !
ಫ್ರೆಂಡ್ಸ್,
ಮೇರು ನಟರ ಕುರಿತಾಗಿ ನಿಮ್ಮ ಪ್ರತಿಕ್ರಿಯೆ ನೀಡಿ.
ಪಿನಾಕ - ನಿಮ್ಮ ಧ್ವನಿಗೆ Subscribe ಮತ್ತು ಗಂಟೆ ಗುರುತನ್ನ ಒತ್ತಿ ಪ್ರೋತ್ಸಾಹಿಸಿ