Перейти к содержимому

ಮೂರು ರಾಜ್ಯಗಳ ರೈತರಿಗೆ ತುಂಗಭದ್ರಾ ಜೀವನಾಡಿ, ಈ ಬಾರಿ ಮುಂಗಾರು ಹಂಗಾಮಿನಲ್ಲೂ ನೀರಿನ ಕೊರತೆ|Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

ಮೂರು ರಾಜ್ಯಗಳ ರೈತರಿಗೆ ತುಂಗಭದ್ರಾ ಜೀವನಾಡಿ, ಈ ಬಾರಿ ಮುಂಗಾರು ಹಂಗಾಮಿನಲ್ಲೂ ನೀರಿನ ಕೊರತೆ|Vijay Karnataka

27 299 просмотров · 2 г. назад
Vijay Karnataka | ವಿಜಯ ಕರ್ನಾಟಕ
1,82 млн подписчиков
27 299 просмотров · 2 г. назад
ರೈತರ ಜೀವನಾಡಿ ತುಂಗಭದ್ರಾ ಜಲಾಶಯದಿಂದ ಮುಂಗಾರು ಹಂಗಾಮಿನಲ್ಲಿ ನೀರಾವರಿಗೆ ನೀರಿನ ಕೊರತೆಯಾಗಿರಲಿಲ್ಲ. ಆದರೆ ಇದೇ ಮೊದಲು ಬಾರಿ ಮುಂಗಾರು ಹಂಗಾಮಿನಲ್ಲಿ ನೀರಿನ ಕೊರತೆ ಉಂಟಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಬೆಳೆಯುತ್ತಿರುವ ಭತ್ತದ ಬೆಳೆ ಉಳಿಸಿಕೊಳ್ಳಲು ಆಂಧ್ರ ಪ್ರದೇಶದ ಪಾಲಿನ ನೀರು ಕೇಳುತ್ತಿದೆ. ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ರೈತರ ಸುಮಾರು 11 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ತುಂಗಭದ್ರಾ ಜಲಾಶಯದಲ್ಲಿ ಈ ವರ್ಷ ಅತ್ಯಂತ ಕಡಿಮೆ ನೀರು ಸಂಗ್ರಹವಾಗಿದೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಜಲಾಶಯ ಒಮ್ಮೆಯೂ ಭರ್ತಿಯಾಗಿಲ್ಲ. ಕರ್ನಾಟಕದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಸುಮಾರು 8 ಲಕ್ಷ ಎಕರೆ ಪ್ರದೇಶವು ತುಂಗಭದ್ರಾ ಜಲಾಶಯವನ್ನೇ ಅವಲಂಭಿಸಿವೆ. ಈಗಿನ ಅಂದಾಜಿನ ಪ್ರಕಾರ ಕರ್ನಾಟಕಕ್ಕೆ 5 ಟಿಎಂಸಿ ನೀರು ಕೊರತೆ ಉಂಟಾಗಿದೆ. ಜಲಾಶಯದಿಂದ ಎಡದಂಡೆ ನಾಲೆಗೆ ನವಂಬರ್ 30 ರವರೆಗೂ ನೀರು ಬಿಡಲು ತೀರ್ಮಾನಿಸಿದ್ದು. ಆಂಧ್ರ ಪ್ರದೇಶಕ್ಕೆ ಹೋಗುವ ಬಲದಂಡೆಗೆ ನವಂಬರ್ 10 ರವರೆಗೂ ನೀರು ಬಿಡಲು ತೀರ್ಮಾನಿಸಲಾಗಿದೆ. ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಸುಮಾರು 1.50 ಲಕ್ಷ ಎಕರೆ ಪ್ರದೇಶದ ಬೆಳೆ ಹಾಳಾಗುತ್ತಿದೆ. ನವಂಬರ್ 10 ರಂದು ರಾಜ್ಯ ನೀರಾವರಿ ಹಾಗೂ ಆಂಧ್ರ ಪ್ರದೇಶದ ಅಧಿಕಾರಿಗಳ ಸಭೆ ಕರೆಯಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಆಂಧ್ರ ಪ್ರದೇಶವು ತನ್ನ ಪಾಲಿನ ನೀರನ್ನು ನೀಡಲು ಒಪ್ಪಿಕೊಂಡರೆ ಮಾತ್ರ ಕರ್ನಾಟಕದ ರೈತರ ನೀರಾವರಿ ಬೆಳೆಯನ್ನು ಉಳಿಸಿಕೊಳ್ಳಬಹುದು ಎಂದು ತುಂಗಭದ್ರಾ ನೀರು ನಿರ್ವಹಣಾ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. #farmers #koppal #tungabhadradam Our Website : https://Vijaykarnataka.com Facebook:   / vijaykarnataka   Twitter:   / vijaykarnataka   Our Video Website: https://kannada.timesxp.com/