ಕಾವ್ಯ ರಚನೆ ಎಂದರೆ ನಿರಂತರ ಭಾವನೆಗಳ ಅಭಿವ್ಯಕ್ತಿ: ಮೈಸೂರಿನಲ್ಲಿ ದಸರಾ ಕವಿಗೋಷ್ಠಿಗೆ ಅದ್ಧೂರಿ ಚಾಲನೆ
DD Chandana News
0:00 / 0:00
ಕಾವ್ಯ ರಚನೆ ಎಂದರೆ ನಿರಂತರ ಭಾವನೆಗಳ ಅಭಿವ್ಯಕ್ತಿ: ಮೈಸೂರಿನಲ್ಲಿ ದಸರಾ ಕವಿಗೋಷ್ಠಿಗೆ ಅದ್ಧೂರಿ ಚಾಲನೆ
302 просмотра · 23 часа назад
DD Chandana News
111 тыс. подписчиков
302 просмотра · 23 часа назад
ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿಂದು ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಆಯೋಜಿಸಿದ್ದ ಬಹುರೂಪಿ ಕವಿಗೋಷ್ಠಿಯನ್ನು ಸಾಹಿತಿ ವೈದೇಹಿ ಉದ್ಘಾಟಿಸಿದರು.
ಈ ವೇಳೆ ಚಲನಚಿತ್ರ ನಟ ಡಾ. ಮುಖ್ಯಮಂತ್ರಿ ಚಂದ್ರು, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್, ಶಾಸಕ ಕೆ. ಹರೀಶ್ ಗೌಡ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಪ್ರೊ. ನಂಜಪ್ಪ ಹೊಂಗನೂರು, ದಸರಾ ಕವಿಗೋಷ್ಠಿಯ ವಿಶೇಷಾಧಿಕಾರಿ ಎಂ. ದಾಸೇಗೌಡ ಸೇರಿ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮನ ಸೆಳೆಯಿತು.
ಬಳಿಕ ವೈದೇಹಿ, ಕಾವ್ಯ, ಸಮಾಜವನ್ನು ಮಂಥನ ಮಾಡುವ ಶಕ್ತಿ ಹೊಂದಿದೆ. ಜಗತ್ತಿನ ಮೊಟ್ಟಮೊದಲ ಕವಿ ತಾಯಿಯೇ ಆಗಿದ್ದು, ಆಕೆ ಜೋಗುಳ ಹಾಡಿ ಭಕ್ತಿ ಮೂಡಿಸಿದವಳು. ಕಾವ್ಯಕ್ಕೆ ದೊಡ್ಡ ದೊಡ್ಡ ಪದಗಳೇನು ಬೇಕಿಲ್ಲ; ಸರಳವಾದ ಶಬ್ದಗಳಲ್ಲೇ ಗಹನವಾದ ವಿಷಯವನ್ನು ಹೇಳಲು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದೇ ಆತ್ಮವಿಶ್ವಾಸದ ಲಕ್ಷಣ ಎಂದು ತಿಳಿಸಿದರು.
ಮುಖ್ಯಮಂತ್ರಿ ಚಂದ್ರು, ಕಲೆ, ಸಾಹಿತ್ಯ ಹಾಗೂ ವೈವಿಧ್ಯಮಯ ಸಂಸ್ಕೃತಿಗಳಿಂದ ಕೂಡಿದ ಭಾರತವು ಅತ್ಯಂತ ಶ್ರೀಮಂತ ರಾಷ್ಟ್ರ. ಡಿ.ವಿ. ಗುಂಡಪ್ಪ, ದಿನಕರ ದೇಸಾಯಿ ಹಾಗೂ ವಿ.ಕೃ. ಗೋಕಾಕ್ ಮತ್ತು ಜಿ.ಪಿ. ರಾಜರತ್ನಂ ಅವರ ಸಾಹಿತ್ಯಗಳಲ್ಲಿ ಚುಟುಕು ಸಾಹಿತ್ಯದ ಸೊಗಡನ್ನು ಕಾಣಬಹುದು ಎಂದು ಬಣ್ಣಿಸಿದರು.
#LiveDDChandanaNews #DDChandanaNews #DDChandana #DDKannada