Перейти к содержимому

CM DK Shivakumar Slams BJP Over Alleged Voter Deletion | ಜಯನಗರದಲ್ಲಿ ಫಾರಂ-೭ ದುರ್ಬಳಕೆ.. ಸಿಎಂ ಗರಂ

TV5 Kannada

0:00 / 0:00

CM DK Shivakumar Slams BJP Over Alleged Voter Deletion | ಜಯನಗರದಲ್ಲಿ ಫಾರಂ-೭ ದುರ್ಬಳಕೆ.. ಸಿಎಂ ಗರಂ

8 174 просмотра · Трансляция закончилась 16 ч назад
TV5 Kannada
2,73 млн подписчиков
8 174 просмотра · Трансляция закончилась 16 ч назад
CM DK Shivakumar Slams BJP Over Alleged Voter Deletion | ಜಯನಗರದಲ್ಲಿ ಫಾರಂ-೭ ದುರ್ಬಳಕೆ.. ಸಿಎಂ ಗರಂ | Tv5Kannada ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಫಾರ್ಮ್ 7 (Form 7) ಅರ್ಜಿಗಳ ದುರ್ಬಳಕೆ ವಿವಾದವು ದಿನಕ್ಕೊಂದು ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದೆ. ಇದರ ನಡುವೆ ಜಯನಗರ ಕ್ಷೇತ್ರದ ಮುಖಂಡ ಹಬೀಬ್ ಖಾನ್ ಅವರ ಮೊಮ್ಮಗ ಹಾಗೂ ಜಯನಗರದ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ತುಣುಕು ರಾಜ್ಯಾದ್ಯಂತ ಭಾರೀ ಬಿರುಗಾಳಿ ಎಬ್ಬಿಸಿದೆ. ತಮ್ಮ ಕುಟುಂಬದ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ವ್ಯವಸ್ಥಿತವಾಗಿ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲು ಫಾರ್ಮ್ 7 ಅರ್ಜಿ ಹಾಕಿರುವ ಬಗ್ಗೆ ಹಬೀಬ್ ಖಾನ್ ಮೊಮ್ಮಗ ನೇರವಾಗಿ ಶಾಸಕರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕರೆ ಸ್ವೀಕರಿಸಿ ಪೇಚಿಗೆ ಸಿಲುಕಿದ ಶಾಸಕ ರಾಮಮೂರ್ತಿ ಅವರು ಆರಂಭದಲ್ಲಿ ಸಮಜಾಯಿಷಿ ನೀಡಲು ಹರಸಾಹಸ ಪಟ್ಟಿದ್ದು, "ಆಯ್ತು ಬಿಡಪ್ಪ, ನಾನೇ ಅಪ್ಲಿಕೇಶನ್ ವಾಪಸ್ (Withdraw) ಪಡೆದುಕೊಳ್ಳುತ್ತೇನೆ" ಎಂದು ವಾದಿಸುವ ಧ್ವನಿ ಆಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಯಾಕೆ ಈ ರೀತಿ ಅರ್ಜಿ ಹಾಕಲಾಗಿದೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲಾಗದೆ, ಬೇಕಿದ್ದರೆ ನೀವೂ ಕೂಡ ಅರ್ಜಿ ಹಾಕಿ ಎಂದು ವಿಚಿತ್ರವಾಗಿ ವಾದಿಸಿರುವ ಶಾಸಕರು, ಕೊನೆಗೆ ಕಚೇರಿಗೆ ಬಂದು ನೇರವಾಗಿ ಮಾತನಾಡೋಣ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಚುನಾವಣಾ ಆಯೋಗದ SIR ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡು ನಿರ್ದಿಷ್ಟ ಮತದಾರರ ಹೆಸರುಗಳನ್ನು ಕಡಿತಗೊಳಿಸುವ ಈ ಹುನ್ನಾರದ ಆಡಿಯೋ ಸಾಕ್ಷ್ಯವನ್ನು ಇಟ್ಟುಕೊಂಡು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಸೌಮ್ಯ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಜಯನಗರ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. The Special Intensive Revision (SIR) and Form-7 application controversy in Karnataka has intensified dramatically following the leakage of an explosive audio conversation allegedly between BJP MLA C.K. Ramamurthy and the grandson of local leader Habib Khan. Confronted over the systematic filing of Form-7 applications aimed at deleting specific voter names from electoral rolls, the MLA was caught on tape struggling to offer explanations, eventually promising to withdraw the applications. Backed by this clinching audio evidence exposing the alleged conspiracy behind the voter deletion racket in Jayanagar, Congress leader and former MLA Sowmya Reddy formally lodged a police complaint seeking strict legal action. #cmdkshivakumar #HabibKhanGrandson #CKRamamurthy #SowmyaReddy #Form7AudioLeak #SIRVoterScam #JayanagarPolitics #BreakingNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬