SSLC ಫೇಲ್ ಆದ ಯುವಕ ಪೀಠಾಧಿಪತಿಗಳಾದ ಕಥೆ! | ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ | Vachana TV
Vachana TV
0:00 / 0:00
SSLC ಫೇಲ್ ಆದ ಯುವಕ ಪೀಠಾಧಿಪತಿಗಳಾದ ಕಥೆ! | ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ | Vachana TV
2 989 просмотров · 1 дн. назад
Vachana TV
25,6 тыс. подписчиков
2 989 просмотров · 1 дн. назад
ಸಿರಿಗೆರೆಗೆ ಬಂದದ್ದು ಒಂದು ಜವಾನನ ಕೆಲಸಕ್ಕಾಗಿ. ಗುರುಗಳು ಕೊಟ್ಟ "ಕೆಲಸ" ಪೀಠಾಧಿಪತಿ ಸ್ಥಾನ!
"ಸ್ವಾಮೀಜಿ ನಾಟಕ ಮಾಡಿಸಿದರೆ ದಾರಿ ತಪ್ಪಿದರು" ಎನ್ನುತ್ತಿದ್ದ ಕಾಲದಲ್ಲಿ ರಂಗಭೂಮಿಯನ್ನೇ ಬಸವ ತತ್ವದ ವೇದಿಕೆಯನ್ನಾಗಿಸಿದ ರಂಗಜಂಗಮನ ಕಥೆ!
ಸಾಣೆಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರ 75ನೇ ಜನ್ಮವರ್ಷ ಮತ್ತು ಪೀಠಾರೋಹಣದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ವಚನ ಟಿವಿಯ ವಿಶೇಷ ಸಾಕ್ಷ್ಯಚಿತ್ರ.
ರಾಣೇಬೆನ್ನೂರು ತಾಲೂಕಿನ ಹೆಡಿಯಾಲದ ಬಡ ಕುಟುಂಬದ ಹುಡುಗ ಸಿರಿಗೆರೆಯಲ್ಲಿ ಬಿಎ ಮುಗಿಸಿದರು. ಮುಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ ತತ್ವಶಾಸ್ತ್ರದಲ್ಲಿ ಮೊದಲ ಸ್ಥಾನ ಪಡೆದರು.
1977 ಡಿಸೆಂಬರ್ 25ರಂದು ಸಾಣೆಹಳ್ಳಿ ಪೀಠಾಧಿಪತಿಯಾದರು. ಅಂದು ಸಣ್ಣ ಕುಗ್ರಾಮವಾಗಿದ್ದ ಸಾಣೆಹಳ್ಳಿ ಇಂದು ಶಾಲೆ, ಕಾಲೇಜು, ರಂಗಮಂದಿರ, ಶಿವಸಂಚಾರ ಮತ್ತು ರಾಷ್ಟ್ರೀಯ ನಾಟಕೋತ್ಸವದ ಕೇಂದ್ರ.
ಸ್ವತಃ ಸ್ವಾಮೀಜಿಯ ಮಾತುಗಳು, ಬಾಲ್ಯದ ಸಹಪಾಠಿಗಳು, ರಂಗಕರ್ಮಿಗಳು, ಕಲಾವಿದರು ಮತ್ತು ಚಿಂತಕರ ನೆನಪುಗಳ ಮೂಲಕ ಒಂದು ಸ್ಫೂರ್ತಿದಾಯಕ ಪಯಣ.
0:00 SSLC ಫೇಲ್ ಆದ ಹುಡುಗ ಸ್ವಾಮೀಜಿಯಾದ ಕಥೆ
1:58 ಸ್ವಾಮೀಜಿಯ ಮಾತು: ಬಡತನ, ಜವಾನನ ಕೆಲಸ, ಸಿರಿಗೆರೆಯ ಪಯಣ
3:34 ಗುರುಗಳು, ಶಿಕ್ಷಕರು ಮತ್ತು "ಫೇಲ್ ಆದವನನ್ನು ಶಕ್ತಿಯಾಗಿಸಿದವರು"
5:03 ಹೆಡಿಯಾಲದ ಬಾಲ್ಯದ ಸಹಪಾಠಿಗಳ ನೆನಪು
6:37 ಕುಗ್ರಾಮ ಸಾಣೆಹಳ್ಳಿಯಲ್ಲಿ ಶಾಲೆ, ರಂಗಮಂದಿರ, ನಾಟಕೋತ್ಸವ
9:10 "ರಂಗಜಂಗಮ": ಸಿಜಿಕೆ, ರೆಪರ್ಟರಿ ಮತ್ತು ಹಿಂದಿಯಲ್ಲಿ ಶರಣ ನಾಟಕಗಳು
12:22 75ನೇ ಜನ್ಮವರ್ಷ ಮತ್ತು ಪೀಠಾರೋಹಣದ ಸುವರ್ಣ ಮಹೋತ್ಸವ
15:16 300 ವರ್ಷದ ಸಾಣೆಹಳ್ಳಿ ಮಠ: ಬಾಗೂರು ನಾಯಕರ ಐತಿಹ್ಯ
19:31 "ನ್ಯಾಯನಿಷ್ಠುರಿ": ಟೀಕೆಗೆ ಅಂಜದ ವ್ಯಕ್ತಿತ್ವ ಮತ್ತು ಶಿವಸಂಚಾರ
23:49 "ಸ್ವಾಮಿಗಳಿಗೂ ರಂಗಭೂಮಿಗೂ ಏನು ಸಂಬಂಧ?": ತರಳಬಾಳು ಕಲಾಸಂಘದಿಂದ ಶಿವಕುಮಾರ ಕಲಾಸಂಘದವರೆಗೆ
Social Media
Youtube : / @vachanatvkannada
Instagram : / vachanatvkannada
Facebook : https://www.facebook.com/profile.php?...
ವಚನ TV ಬಗ್ಗೆ | About Vachana TV Kannada
ವಚನ TV ಕನ್ನಡ ನಾಡಿನ ಶರಣ ಸಂಸ್ಕೃತಿ, ಬಸವ ತತ್ವ, ವಚನ ಸಾಹಿತ್ಯ ಮತ್ತು ಲಿಂಗಾಯತ ದರ್ಶನದ ಅಮೂಲ್ಯ ಸಂದೇಶಗಳನ್ನು ಆಧುನಿಕ ಜಗತ್ತಿಗೆ ತಲುಪಿಸುವ ಉದ್ದೇಶದಿಂದ ನಿರ್ಮಿತವಾದ ಜ್ಞಾನ ವೇದಿಕೆ.
12ನೇ ಶತಮಾನದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಹಾಗೂ ಇತರ ಶರಣರ ವಚನಗಳಲ್ಲಿ ಅಡಕವಾಗಿರುವ ಜೀವನ ಮೌಲ್ಯಗಳು, ಸಾಮಾಜಿಕ ಚಿಂತನೆ, ವೈಜ್ಞಾನಿಕ ದೃಷ್ಟಿಕೋನ ಮತ್ತು ಆಧ್ಯಾತ್ಮಿಕ ಅನುಭವಗಳನ್ನು ಸರಳ ಹಾಗೂ ಪ್ರಾಯೋಗಿಕ ರೀತಿಯಲ್ಲಿ ಜನರಿಗೆ ತಲುಪಿಸುವುದು ನಮ್ಮ ಧ್ಯೇಯ. ವಚನ TV ಕೇವಲ ಒಂದು ಮಾಧ್ಯಮವಲ್ಲ; ಇದು ಶರಣರ ಜ್ಞಾನ, ವಿಚಾರ ಮತ್ತು ಅನುಭವಗಳನ್ನು ಮುಂದಿನ ಪೀಳಿಗೆಗೆ ಸಂಪರ್ಕಿಸುವ ಸೇತುವೆಯಾಗಿದೆ.
"ವಚನದಿಂದ ವಿಚಾರ, ವಿಚಾರದಿಂದ ಆಚಾರ, ಆಚಾರದಿಂದ ಸುಂದರ ಸಮಾಜ"
ಶರಣ ಸಾಹಿತ್ಯ, ಬಸವ ತತ್ವ ಮತ್ತು ಲಿಂಗಾಯತ ದರ್ಶನದ ಅಧ್ಯಯನಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿ.
ಶರಣು ಶರಣಾರ್ಥಿ | Sharanu Sharanaarthi
#VachanaTV #ವಚನಟಿವಿ #Sanehalli #ಸಾಣೆಹಳ್ಳಿ #SanehalliSwamiji #PanditaradhyaShivacharya #ಪಂಡಿತಾರಾಧ್ಯಶಿವಾಚಾರ್ಯ #Shivasanchara #ಶಿವಸಂಚಾರ #Sirigere #ಸಿರಿಗೆರೆ #Taralabalu #ತರಳಬಾಳು #ShivakumaraShivacharya #KannadaTheatre #ಕನ್ನಡರಂಗಭೂಮಿ #RangaJangama #NatakaUtsava #Basavanna #ಬಸವಣ್ಣ #BasavaTatva #SharanaNataka #Hediyala #Ranebennur #Chitradurga #Inspiration #SuccessStory #KannadaDocumentary #Lingayat #SharanuSharanarthi