Перейти к содержимому

ನೋವುಂಡ ಮನಸ್ಸುಗಳಿಗೆ 'ದಿವ್ಯೌಷಧ'ವಾಗಿದ್ದ ಮನೋವೈದ್ಯ ಡಾ. ಆನಂದ ಪಾಂಡುರಂಗಿ

PublicNext

0:00 / 0:00

ನೋವುಂಡ ಮನಸ್ಸುಗಳಿಗೆ 'ದಿವ್ಯೌಷಧ'ವಾಗಿದ್ದ ಮನೋವೈದ್ಯ ಡಾ. ಆನಂದ ಪಾಂಡುರಂಗಿ

4 027 просмотров · 5 дней назад
PublicNext
86,1 тыс. подписчиков
4 027 просмотров · 5 дней назад
ಧಾರವಾಡ: ದೈಹಿಕ ಗಾಯಗಳಿಗೆ ಔಷಧಿಯ ಲೇಪನ ಮಾಡಬಹುದು, ರಕ್ತ ಸುರಿಯುವ ನೋವನ್ನು ಕಣ್ಣಾರೆ ಕಂಡು ಮದ್ದು ನೀಡಬಹುದು. ಅಂತಹ ಮನಸ್ಸಿನ ಸಂಕಟವನ್ನು ಆಪ್ತವಾಗಿ ಆಲಿಸಿ, ಕೇವಲ ಮಾತ್ರೆ-ಔಷಧಗಳಷ್ಟೇ ಅಲ್ಲದೆ ಪ್ರೀತಿ, ಸಾಂತ್ವನ ಹಾಗೂ ಭರವಸೆಯ ಮದ್ದು ನೀಡುತ್ತಿದ್ದ ಕರ್ನಾಟಕದ ಹಿರಿಯ ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಇನ್ನಿಲ್ಲ ಎನ್ನುವ ಸುದ್ದಿ ಬರಸಿಡಿಲು ಬಡಿದಂತಾಗಿದೆ. ವೈದ್ಯೋ ನಾರಾಯಣ ಹರಿ ಎಂದು ವೈದ್ಯರಲ್ಲಿ ದೇವರನ್ನು ಕಂಡ ಸಮಾಜ, ಇಂದು ತನ್ನದೇ ಒಬ್ಬ ದೇವರನ್ನು ಕಳೆದುಕೊಂಡು ಕಣ್ಣೀರಾಗಿದೆ. ರೋಗಿಯ ನೋವನ್ನು ಕೇವಲ ಕಾಯಿಲೆಯಾಗಿ ನೋಡದೆ, ಅದನ್ನು ತನ್ನದೇ ನೋವಿನಂತೆ ಕಂಡು ಉಪಚರಿಸುತ್ತಿದ್ದ ಖ್ಯಾತ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಅವರ ಅಗಲಿಕೆ ಮನೋವಿಜ್ಞಾನ ಕ್ಷೇತ್ರದಲ್ಲಿಯೇ ತುಂಬಲಾರದ ನಷ್ಟ. ಸ್ಥಿಮಿತತೆ ಕಳೆದುಕೊಂಡ ಮನಸ್ಸಿಗೆ ಇವರ ಮಾತೇ ಔಷಧಿ. ದೇಶ-ವಿದೇಶಗಳಿಂದ ಬರುವ ನೊಂದ ಮನಸ್ಸಿನ ಮಾತಾಗಿ ಆ ಮನಸ್ಸಿಗೆ ಮರುಜೀವ ತುಂಬುವ ಈ ಮನಸ್ಸು ಇಂದು ಮರೆಯಾಗಿದೆ ಎನ್ನುವುದು ನೋವಿನ ನುಡಿ. ಬಡವರು, ನಿಸ್ಸಹಾಯಕರು, ಗ್ರಾಮೀಣ ಭಾಗದ ಜನರೆಂದರೆ ವಿಶೇಷ ಕಾಳಜಿ ತೋರುತ್ತಿದ್ದ ಆನಂದ ಅವರ ಮಧುರ ಮನಸ್ಸು ಆಕಾಶದಷ್ಟೇ ವಿಶಾಲ. ಮನೆಯನ್ನೇ ಆಸ್ಪತ್ರೆಯನ್ನಾಗಿಸಿಕೊಂಡು ಹಗಲಿರುಳು ಜನ ಸೇವೆಗೆ ದಣಿದ ಜೀವದ ಆತ್ಮಕ್ಕೆ ಶಾಂತಿ ದೊರೆಯಲಿ. ಚಿಕಿತ್ಸೆಗೆ ಬಂದವರ ಬಳಿ ಹಣವಿಲ್ಲದಿದ್ದರೂ ಮದ್ದು ನೀಡುತ್ತಿದ್ದ ಈ ಮನೋವೈದ್ಯರು ಗೆಲ್ಲಲಾರದ ಮನಸ್ಸಿಲ್ಲ. ನೊಂದು ಬರುವ ಮನಸ್ಸಿಗೆ ಇವರ ಬಳಿ ಭರವಸೆ, ಧೈರ್ಯ, ಬದುಕುವ ವಿಶ್ವಾಸ ಸಿಗುತ್ತಿತ್ತು. “ಜನರ ಸೇವೆ ಮಾಡಲು ದೇವರು ನನಗೆ ಇನ್ನಷ್ಟು ಆಯುಷ್ಯ ನೀಡಲಿ” ಎಂದು ಬಯಸಿದ್ದ ಆ ಮಹಾನ್ ಜೀವ ಇಂದು ಶಾಶ್ವತವಾಗಿ ಕಣ್ಮರೆಯಾಗಿದೆ. ಆನಂದ ಪಾಂಡುರಂಗಿ ಅವರ ಅಗಲಿಕೆಯಿಂದ ಅವರ ಕುಟುಂಬ ಮಾತ್ರವಲ್ಲ. ಅವರನ್ನು ನಂಬಿದ್ದ ಸಾವಿರಾರು ಹೃದಯವೂ ಖಾಲಿಯಾಗಿದೆ. ವಿದ್ಯಾಕಾಶಿ ಧಾರವಾಡ ಕೇವಲ ಒಬ್ಬ ವೈದ್ಯರನ್ನು ಕಳೆದುಕೊಂಡಿಲ್ಲ, ಬದಲಿಗೆ ವೈದ್ಯರ ರೂಪದಲ್ಲಿದ್ದ ಮಾನವೀಯತೆಯನ್ನೇ ಕಳೆದು ಕೊಂಡಿದೆ. ನಿಮ್ಮ ಸೇವೆ, ಸರಳತೆ, ಮಾನವೀಯತೆ ನಿಮ್ಮನ್ನು ಕಂಡವರ ಹೃದಯದಲ್ಲಿ ಸದಾ ಜೀವಂತ. ಹೋಗಿ ಬನ್ನಿ ಮನೋವೈದ್ಯರೇ... ನಿಮಗಿದೋ ಕಣ್ಣೀರಿನ ವಿದಾಯ... -ನಿರ್ಮಲಾ ಅರಳಿಕಟ್ಟಿ, ನ್ಯೂಸ್‌ ಡೆಸ್ಕ್‌ ಪಬ್ಲಿಕ್‌ ನೆಕ್ಸ್ಟ್‌, ಹುಬ್ಬಳ್ಳಿ PublicNext Kannada News – Breaking News, Karnataka Politics, Cinema, Sports & Local Updates. Get trusted Kannada news from Bengaluru, Hubli-Dharwad, Mangaluru, Belagavi & more. PublicNext is Karnataka’s trusted Kannada digital news channel. We bring you credible, hyper-local updates – politics, cinema, sports, and top headlines from across Karnataka, India, and the world. Be the first to get: Breaking Kannada news from local, national, and international sources In-depth reporting on Karnataka politics Latest sports scores & match highlights Cinema stories & entertainment updates Fascinating regional and world stories 🌐 Visit us: https://publicnext.com/ 📲 Download our app: https://play.google.com/store/apps/de... 👍 Like on Facebook:   / publicnext   👍 Like on Instagram:   / publicnext_official   🔔 Subscribe for the fastest Kannada breaking news alerts! #KannadaNews #PublicNext #BreakingNews #Karnataka