Перейти к содержимому

ನಿನ್ನ ಕಣ್ಣೋಟಕೆ ಸೋತು ಹೋದೆ ನಾನು | Ninna Kannōtake Sōtu Hōde Nānu | High Energy Kannada Folk Mass Song

Album song

0:00 / 0:00

ನಿನ್ನ ಕಣ್ಣೋಟಕೆ ಸೋತು ಹೋದೆ ನಾನು | Ninna Kannōtake Sōtu Hōde Nānu | High Energy Kannada Folk Mass Song

187 просмотров · 13 дн. назад
Album song
24 подписчика
187 просмотров · 13 дн. назад
🎧 Use Headphones or Earphones for the Best Audio Experience! 🎧 ನಿನ್ನ ಕಣ್ಣೋಟಕೆ ಸೋತು ಹೋದೆ ನಾನು ( Santheyalli Ninna Nodide ) - A High Energy Kannada Folk Mass Song! ಸಂತೆಯ ಹಬ್ಬದ ವಾತಾವರಣದಲ್ಲಿ ಡೊಳ್ಳು ಕುಣಿತ ಮತ್ತು ಮಾಸ್ ರಿದಮ್‌ನೊಂದಿಗೆ ಮೂಡಿಬಂದಿರುವ ಅದ್ಭುತ ಜಾನಪದ ಪ್ರೇಮ ಗೀತೆ. ಕೇಳಿ ಆನಂದಿಸಿ, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ! 🎵 SONG CREDITS: • Song Title: ನಿನ್ನ ಕಣ್ಣೋಟಕೆ ಸೋತು ಹೋದೆ ನಾನು (Ninna Kannōtake Sōtu Hōde Nānu) • Lyrics (ಸಾಹಿತ್ಯ): ಚಿರಂಜೀವಿ (Chiranjeevi) • Music & Vocals (ಸಂಗೀತ ಮತ್ತು ಧ್ವನಿ): Suno AI • Genre: Kannada Folk Mass / Dollu Kunitha Fusion ------------------------------------------------------------------ 📝 SONG LYRICS (ಹಾಡಿನ ಸಾಹಿತ್ಯ): [Chorus] ಸಂತೆಯಲ್ಲಿ ನಿನ್ನ ನೋಡಿದೆ, ನನ್ನ ಜೀವ ನರಳುತ್ತಿದೆ! ಇಷ್ಟು ಚೆಂದ ಇದೀಯಾ ಹುಡುಗಿ, ನಿನ್ನ ಹೆತ್ತವರು ಯಾರೇ ಬೆಡಗಿ! ಕಣ್ಣೆದುರು ಕಂಡ ಅಪ್ಸರೆ, ನನಗೇ ನೀನೇ ಆಸರೆ! ನಮ್ಮ ಅಮ್ಮನ ಸೊಸೆ ಆಗಿ ಬಾರೇ, ನಮ್ಮ ಮನೆಯ ದೀಪ ಬೆಳಗು ಬಾರೇ! ನಿನ್ನ ಬಿಟ್ಟು ನನಗೇ ಯಾರೂ ಬೇಡ, ಮನಸ್ಸು ಕೊಟ್ಟು ಒಂದು ಸಲ ನೋಡ! ಹಾಲಿನಂತ ಬಿಳುಪಾದ ನಿನ್ನ ಮುಖ, ನಾ ಕಂಡು ಮರುಳಾದೆ ನಿನ್ನ ಸುಖ! ಮದುವೆ ಆಗಲು ಬಾರೇ ಮಹಾರಾಣಿ, ನಿನಗೇ ಕಟ್ಟುವೆ ನಾನು ಕರಿಮಣಿ! ನಿನ್ನ ಕಣ್ಣೋಟಕ್ಕೆ ಸೋತು ಹೋದೆ ನಾನು, ನಿನ್ನ ನೋಡುತ್ತಾ ನೋಡುತ್ತಾ ಕುಳಿತಿರುವೆ ನಾನು! [Verse 1] ನೋಡ ನೋಡ ನೋಡ ನನ್ನ ಹುಡುಗಿ ನೋಡ! ಹೇ ಅಮ್ಮ ಇನ್ನುಮುಂದೆ ನಂಗೆ ಹುಡುಗಿ ಹುಡುಕಬೇಡ! ಜಾನೂ ನನ್ನ ಜಾನೂ, ಮುದ್ದಾಗಿ ಮುದ್ದಾಗಿ ಇರುವೆಯಲ್ಲ ಜಾನೂ! ನಿಂತರೂ ಕುಂತರೂ ನಿಂದೇ ನೆನಪು ಜಾನೂ! ದೇವತೆ ಸ್ಥಾನ ನಿಂಗೇ ಕೊಟ್ಟಿರುವೆ, ನಿನ್ನೊಳು ಆ ರೂಪ ಕಂಡಿರುವೆ! ಚಿಟಿ ಚಿಟಿ ಹನಿಯುವ ಮೋಡಗಳು, ಜಲ ಜಲ ಹರಿಯುವ ನದಿಗಳು! ಈ ಕಣ್ಣಲಿ ಏನೋ ಕಾಂತಿ ಇದೆ, ಈ ಹೆಣ್ಣಲ್ಲಿ ಯಾವುದೋ ಅಂದ ಇದೆ! ನಿನ್ನ ಕಣ್ಣೋಟಕ್ಕೆ ಸೋತು ಹೋದೆ ನಾನು, ನಿನ್ನ ನೋಡುತ್ತಾ ನೋಡುತ್ತಾ ಕುಳಿತಿರುವೆ ನಾನು! [Verse 2] ಕೆಂಪು ರೇಷ್ಮೆ ಸೀರೆ ಉಟ್ಟ ಚೆಲುವೇ, ಕೈಯಲ್ಲಿ ಹಸಿರು ಬಳೆ ಹಾಕಿದ ನನ್ನ ಒಲವೇ! ಸಂತೆಗೆ ಬಂದು ನಿನ್ನ ನೋಡಿದೆ, ನನ್ನ ಮನಸ್ಸಲ್ಲಿ ನಿನಗೇ ಮನೆ ಮಾಡಿದೆ! ಹೃದಯ ಗೆದ್ದ ದೇವತೆ, ನೀ ಎಲ್ಲಿಂದ ಬಂದೆ ದೇವತೆ! ನಿನ್ನ ಊರು ಯಾವುದು ಅಂತ ಸ್ವಲ್ಪ ಹೇಳೇ, ನಿನ್ನ ಹೆತ್ತ ತಂದೆ ತಾಯಿ ಯಾರು ಅಂತ ಹೇಳೇ! ನಿನ್ನ ಕಣ್ಣೋಟಕ್ಕೆ ಸೋತು ಹೋದೆ ನಾನು, ನಿನ್ನ ನೋಡುತ್ತಾ ನೋಡುತ್ತಾ ಕುಳಿತಿರುವೆ ನಾನು! [Verse 3] ಬೆಳಗೆದ್ದು ಮುಖ ತೊಳೆದು ಕನ್ನಡಿಯಲ್ಲಿ ನೋಡಿದೆ, ಅಲ್ಲೂ ನಿನ್ನ ಮುಖ ಕಾಣುತ್ತಿದೆ! ಬ್ರಹ್ಮನಿಗೆ ಕೋಟಿ ನಮನ, ಇಂಥ ಅಪ್ಸರೆಯನ್ನು ನಂಗೆ ಕೊಟ್ಟಿದ್ದಕ್ಕೆ ಕೋಟಿ ನಮನ! ನೀ ಅಂದ್ರೆ ನಂಗೆ ತುಂಬಾ ಇಷ್ಟ, ನೀ ಬೇಡ ಅಂದ್ರೆ ನಂಗೆ ಕಷ್ಟ! ದೇಗುಲದಲ್ಲಿ ನಿನ್ನ ಶಿಲೆ ಕೆತ್ತಿ ಪೂಜಿಸುವೆ, ಪ್ರತಿದಿನವೂ ನಿನ್ನ ನಾ ಜಪಿಸುವೆ! ನಿನ್ನ ಕಣ್ಣೋಟಕ್ಕೆ ಸೋತು ಹೋದೆ ನಾನು, ನಿನ್ನ ನೋಡುತ್ತಾ ನೋಡುತ್ತಾ ಕುಳಿತಿರುವೆ ನಾನು! [Outro] ಸಂತೆಯಲ್ಲಿ ನಿನ್ನ ನೋಡಿದೆ, ನನ್ನ ಜೀವ ನರಳುತ್ತಿದೆ! ನಮ್ಮ ಅಮ್ಮನ ಸೊಸೆ ಆಗಿ ಬಾರೇ, ನಮ್ಮ ಮನೆಯ ದೀಪ ಬೆಳಗು ಬಾರೇ! ನಿನ್ನ ಕಣ್ಣೋಟಕ್ಕೆ ಸೋತು ಹೋದೆ ನಾನು, ನಿನ್ನ ನೋಡುತ್ತಾ ನೋಡುತ್ತಾ ಕುಳಿತಿರುವೆ ನಾನು! ------------------------------------------------------------------ 🔔 Don't forget to LIKE, SHARE & SUBSCRIBE for more songs! #KannadaFolkSong #DolluKunitha #KannadaMassSong #NinnaKannotakeSotuHodeNanu #ChiranjeeviLyrics #SunoAI #NewKannadaSong #SantheSong #KannadaLyricalVideo