. ಉಪ್ಪಿನಂಗಡಿ ಆರಕ್ಷಕ ಠಾಣೆಯನ್ನು ಪುತ್ತೂರಿನ ಡಿವೈಎಸ್ಪಿ ಕಚೇರಿಯ ವ್ಯಾಪ್ತಿಗೆ ಒಳಪಡಿಸುವ ಕುರಿತು
NAMMA PUTTUR
0:00 / 0:00
. ಉಪ್ಪಿನಂಗಡಿ ಆರಕ್ಷಕ ಠಾಣೆಯನ್ನು ಪುತ್ತೂರಿನ ಡಿವೈಎಸ್ಪಿ ಕಚೇರಿಯ ವ್ಯಾಪ್ತಿಗೆ ಒಳಪಡಿಸುವ ಕುರಿತು
25 просмотров · 4 мес. назад
NAMMA PUTTUR
1,46 тыс. подписчиков
25 просмотров · 4 мес. назад
ಉಪ್ಪಿನಂಗಡಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಜ್ವಲಂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ, ಒತ್ತಾಯಿಸಿ ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಈ ಕೆಳಗಿನ ಆಗ್ರಹಗಳು.
ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವ್ಯಾಪಾರೀ ಕೇಂದ್ರ ಹಾಗೂ ಪವಿತ್ರ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯು ಇಂದು ಹತ್ತಾರು ನಾಗರಿಕ ಸಮಸ್ಯೆಗಳಿಂದ ಬಳಲುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಸ್ಥಳೀಯ ಆಡಳಿತವನ್ನು ಮತ್ತು ಸರ್ಕಾರವನ್ನು ಈ ಪತ್ರಿಕಾಗೋಷ್ಠಿಯ ಮೂಲಕ ಆಗ್ರಹಿಸುತ್ತಿದೆ.
1. ಉಪ್ಪಿನಂಗಡಿ ಆರಕ್ಷಕ ಠಾಣೆಯನ್ನು ಪುತ್ತೂರಿನ ಡಿವೈಎಸ್ಪಿ ಕಚೇರಿಯ ವ್ಯಾಪ್ತಿಗೆ ಒಳಪಡಿಸುವ ಕುರಿತು: ಈ ಮೊದಲು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯು ಪುತ್ತೂರು ಡಿವೈಎಸ್ಪಿ ಕಚೇರಿಯ ಅಧೀನದಲ್ಲಿತ್ತು. ಉಪ್ಪಿನಂಗಡಿಯಿಂದ ಪುತ್ತೂರಿಗೆ ಕೇವಲ 12 ಕಿ.ಮೀ.ಅಂತರವಿದ್ದು, ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ತುರ್ತು ಕೆಲಸಗಳಿಗಾಗಿ ಇದು ಬಹಳ ಅನುಕೂಲಕರವಾಗಿತ್ತು. ಆದರೆ ಪ್ರಸ್ತುತ ಇದನ್ನು 24 ಕಿ.ಮೀ. ದೂರವಿರುವ ಬೆಳ್ತಂಗಡಿಗೆ ವರ್ಗಾಯಿಸಲಾಗಿದೆ. ಅಪಘಾತ ಅಥವಾ ಇನ್ಯಾವುದೇ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಬೆಳ್ತಂಗಡಿಗೆ ಅಲೆಯುವಂತಾಗಿದೆ. ಅಲ್ಲದೆ, ನ್ಯಾಯಾಲಯದ ಕೆಲಸಗಳಿಗಾಗಿ ಇಂದಿಗೂ ಪುತ್ತೂರಿಗೇ ಹೋಗಬೇಕಿದೆ. ಈ ಗೊಂದಲದಿಂದ ಸಾರ್ವಜನಿಕರಿಗೆ ತೀವು ತೊಂದರೆಯಾಗುತ್ತಿದ್ದು, ಕೂಡಲೇ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯನ್ನು ಮೊದಲಿನಂತೆ ಪುತ್ತೂರು ಡಿವೈಎಸ್ಪಿ ಕಚೇರಿಗೆ ಒಳವಡಿಸಬೇಕು.
2. ಅವ್ಯವಸ್ಥಿತ ಕಸ ವಿಲೇವಾರಿ ಹಾಗೂ ಬಸ್ ನಿಲ್ದಾಣದ ಸ್ವಚ್ಛತೆಯ ಬಗ್ಗೆ: ಉಪ್ಪಿನಂಗಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಟೆಂಡರ್ ಪ್ರಕ್ರಿಯೆ ನಡೆಯದ ಕಾರಣ ಪಟ್ಟಣದ ಸ್ವಚ್ಛತೆ ಸಂಪೂರ್ಣ ಹದಗೆಟ್ಟಿದೆ. ಬಸ್ ನಿಲ್ದಾಣದ ಪರಿಸರ ಹಾಗೂ ಅಂಗಡಿ ಮುಂಗಟ್ಟುಗಳ ಪಕ್ಕದಲ್ಲೇ ಕಸದ ರಾಶಿ ಬಿದ್ದಿದ್ದು, ದುರ್ವಾಸನೆ ಬೀರುತ್ತಿದೆ. ಇನ್ನು ಮಳೆಗಾಲವು ಬರುವುದರಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ, ಆದ್ದರಿಂದ ಪಂಚಾಯತ್ ಆಡಳಿತವು ಕೂಡಲೇ ಎಚ್ಚೆತ್ತುಕೊಂಡು ಸಮರ್ಪಕ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. 3. ನೇತ್ರಾವತಿ ನದಿ ಮಾಲಿನ್ಯಕ್ಕೆ, ತಡೆ: ಪಟ್ಟಣದ ತ್ಯಾಜ್ಯ ನೀರನ್ನು ನೇರವಾಗಿ ನೇತ್ರಾವತಿ ನದಿಗೆ
ಬಿಡಲಾಗುತ್ತಿದೆ. ಗಯಾಪದ ಕ್ಷೇತ್ರ, ದಕ್ಷಿಣಕಾಶಿ ಎಂದು ಕರೆಯಲ್ಪಡುವ ಪವಿತ್ರ ನದಿಗಳು ಕಲುಷಿತಗೊಳ್ಳುತ್ತಿದ್ದು, ಇದು ಪರಿಸರಕ್ಕೆ ಹಾಗೂ ಕುಡಿಯುವ ನೀರಿನ ಮೂಲಕ್ಕೆ ಮಾರಕವಾಗಿದೆ. ಒಳಚರಂಡಿ ನೀರು ನದಿಗೆ ಸೇರದಂತೆ ತಡೆಗಟ್ಟಲು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು.
4. ಎ.ಪಿ.ಎಂ.ಸಿ ಕಟ್ಟಡದ ದುರುಪಯೋಗ: ರೈತರು ತಾವು ಬೆಳೆದ ಬೆಳೆಗಳನ್ನು ಸುಂಕ ಪಾವತಿಸಿ ಮಾರಾಟ ಮಾಡಲು ಅನುಕೂಲವಾಗುವಂತೆ ಪುತ್ತೂರು ಎ.ಪಿ.ಎಂ.ಸಿ ವತಿಯಿಂದ ಉಪ್ಪಿನಂಗಡಿ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಕಟ್ಟಡವೊಂದನ್ನು ನಿರ್ಮಿಸಿ ಪಂಚಾಯತಿಗೆ ಹಸ್ತಾಂತರಿಸಲಾಗಿತ್ತು. ಆದರೆ, ಪಂಚಾಯತ್ ಆಡಳಿತವು ರೈತರ ಹಿತವನ್ನು ಮರೆತು. ಈ ಕಟ್ಟಡವನ್ನು ಇತರ ವ್ಯಾಪಾರಸ್ಥರಿಗೆ ಬಾಡಿಗೆಗೆ ನೀಡಿ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದ್ದು, ಕೂಡಲೇ ಇದನ್ನು ರೈತರ ಬಳಕೆಗಾಗಿ ಮೀಸಲಿಡಬೇಕು ಮತ್ತು ಅಲ್ಲಿ ರೈತರೇ ಬಂದು ತಾವು ಬೆಳೆದ ತಾಜಾ ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ಮಾರುವ ವ್ಯವಸ್ಥೆಯನ್ನು ಎಪಿಎಂಸಿ ವತಿಯಿಂದ ಮಾಡಬೇಕು.
5. ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿಗಳ ಮೂಲಕ ಮಾಡುವ ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡುವ ಕುರಿತು: ರಸ್ತೆ ಬದಿ ಅಥವಾ ಪಾದಚಾರಿ ಮಾರ್ಗಗಳಲ್ಲಿ ನೆಲದ ಮೇಲೆ ಕುಳಿತು ವ್ಯಾಪಾರ ಮಾಡುವುದು, ಟೆಂಟ್ ಅಥವಾ ಶೆಡ್ಗಳನ್ನು ಹಾಕಿ ವ್ಯವಹಾರ ನಡೆಸುವುದನ್ನು ಉಪ್ಪಿನಂಗಡಿ ಪಂಚಾಯತ್ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಅಂತಹ ವ್ಯಾಪಾರಿಗಳು ತಳ್ಳುಗಾಡಿಗಳ ಮೂಲಕ ಮಾತ್ರ ವ್ಯಾಪಾರ ಮಾಡಬೇಕು ಎಂಬ ಬಗ್ಗೆ, ಪಂಚಾಯತ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
6. ಉಪ್ಪಿನಂಗಡಿ ಪೇಟೆಯಾದ್ಯಂತ ತೀವ್ರು ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಉಪ್ಪಿನಂಗಡಿ ಗ್ರಾಮವನ್ನು ಮುಕ್ತಗೊಳಿಸುವ ಕುರಿತು: ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಮಿತಿ ಮೀರಿದೆ. ಇದರಿಂದಾಗಿ ಸರಕು ಸಾಗಣೆ ವಾಹನಗಳು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ, ಇದು ವ್ಯಾಪಾರ ವಹಿವಾಟಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹೆಚ್ಚಿನ ಸಂಚಾರ ಪೊಲೀಸರ ನಿಯೋಜನೆಯಲ್ಲಿ ಸುಧಾರಣೆಯಾಗಬೇಕಿದೆ.
7. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಡೆಯುತ್ತಿರುವ ನಿಧಾನಗತಿಯ ಸರ್ವಿಸ್ ರಸ್ತೆ, ಕಾಮಗಾರಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಯಲ್ಲಿ ಬರುವ ಸರ್ವಿಸ್ ರಸ್ತೆಗಳ ಕಾಮಗಾರಿ ಕಳೆದ ಹಲವು ತಿಂಗಳುಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದು, ಇದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಸಹ ಕಾಮಗಾರಿಯು ವೇಗವನ್ನು ಪಡೆದುಕೊಳ್ಳದೆ ಇರುವುದರಿಂದ ಉಪ್ಪಿನಂಗಡಿ ಗ್ರಾಮ ವ್ಯಾಪ್ತಿಯಲ್ಲಿ ಅನಗತ್ಯ ಟ್ರಾಫಿಕ್ ಜಾಮ್ ಗಳಾಗುತ್ತಿದ್ದು ಆದಷ್ಟು ಬೇಗ ಈ ಕಾಮಗಾರಿಗಳನ್ನು ಮುಗಿಸಿ ಗ್ರಾಮ ವಾಸಿಗಳಿಗೆ ನೆಮ್ಮದಿಯನ್ನು ನೀಡಬೇಕೆಂದು ಈ ಮೂಲಕ ನಿಮ್ಮನ್ನು ಆಗ್ರಹಿಸುತ್ತಿದ್ದೇವೆ.
ಅಬ್ದುಲ್ ರಹಮಾನ್ ಯುನಿಕ್
ಶಬ್ಬೀರ್ ಕೆಂಪಿ
ಇರ್ಶಾದ್ ಯುಟಿ
ಪ್ರಶಾಂತ್ ಡಿ'ಕೋಸ್ಟಾ