ಕಲ್ಯಾಣ ಕ್ರಾಂತಿಯ ಮುನ್ನುಡಿ ರೂಪಕ (ಬಸವ ಕಲ್ಯಾಣ) ಕಲ್ಯಾಣ ಪರ್ವ 24/10/2026
ಚಿನ್ಮಯ ಕ್ರಾಂತಿ
0:00 / 0:00
ಕಲ್ಯಾಣ ಕ್ರಾಂತಿಯ ಮುನ್ನುಡಿ ರೂಪಕ (ಬಸವ ಕಲ್ಯಾಣ) ಕಲ್ಯಾಣ ಪರ್ವ 24/10/2026
767 просмотров · 12 дн. назад
ಚಿನ್ಮಯ ಕ್ರಾಂತಿ
189 подписчиков
767 просмотров · 12 дн. назад
ಕಲ್ಯಾಣ ಕ್ರಾಂತಿಯ ಮುನ್ನುಡಿ ರೂಪಕ ವನ್ನು ಬೆಟ್ಟಪ್ಪ ಅತ್ನೂರು ಅವರ ಸಂಗಡಿಗರೊಂದಿಗೆ ಬಸವಕಲ್ಯಾಣ ಕ್ಷೇತ್ರದಲ್ಲಿ ಕಲ್ಯಾಣ ಪರ್ವ 25ನೆಯ ವಾರ್ಷಿಕೋತ್ಸವದಲ್ಲಿ ಈ ರೂಪಕವನ್ನು ಮಾಡಿದೆವು. ಶರಣ ಹರಳಯ್ಯ ಮತ್ತು ಕಲ್ಯಾಣಮ್ಮ ನವರು ಅವರ ತೊಡೆಯ ಚರ್ಮಸುಲಿದು ಪಾದರಕ್ಷೆ ಯನ್ನು ಮಾಡಿಕೊಟ್ಟರು ಬಸವಣ್ಣನವರಿಗೆ, ಮಹಾ ಮಾನವತಾವಾದಿ ಅಪ್ಪ ಬಸವಣ್ಣನವರು ಆ ಪಾದರಕ್ಷೆಯನ್ನು ಸಂಗಮನಾಥನಿಗೆ ಅರ್ಪಿಸುವುದಕ್ಕೆ ಹೇಳಿದರು. ಆ ಪಾದರಕ್ಷೆಗಳನ್ನು ಸೊಕ್ಕಿನಿಂದ ಕಸೆದು ತೊಡಲು ಹೋದ ಮಧುವರಸರಿಗೆ ಮೈಯೆಲ್ಲಾ ಉರಿ ಮತ್ತು ಸಂಕಟವಾಗಿ ಹರಳಯ್ಯನ ಮನೆಯ ಚಪ್ಪಲಿ ಹದಮಾಡಲು ಇಟ್ಟ ನೀರನ್ನು ಸುರಿದ ನಂತರ ಅವರ ರೋಗ ಶಮನವಾಗುತ್ತದೆ. ತದನಂತರ ಅವರ ಮಕ್ಕಳ ಮದುವೆಯನ್ನು ಬಸವಣ್ಣನವರ ಅಧ್ಯಕ್ಷತೆಯಲ್ಲಿ ನಡೆಸಿದರು, ಇದನ್ನೇ ಬಲವಾದ ಆಯುದತಂತೆ ಬಳಸಿದರು ಅನಾಚಾರಿಗಳು ಇಲ್ಲದ ಸಲ್ಲದ ವಿಷಯಗಳನ್ನು ಬಿಜ್ಜಳ ರಾಜನಿಗೆ ತಿಳಿಸಿ ಬಸವಣ್ಣನವರ ಗಡಿಪಾರು ಆದೇಶನನ್ನು ಅವರೇ ರಾಜಾಗ್ಞೆ ಎಂದು ಹೊರಡಿಸಿದರು. ಬಿಜ್ಜಳನ ಕೊಲೆಮಾಡಿ ಶರಣರ ಮೇಲೆ ಎತ್ತಿಕಟ್ಟಿದರು. ಹರಳಯ್ಯ ಮಾಡುವರಸ ಮತ್ತು ಶೀಲವಂತಯ್ಯರಿಗೆ ಎಳೆಯೂಟೆ ಶಿಕ್ಷೆಗಳನ್ನು ವಿಧಿಸಿದರು. ಶರಣರ ಮೇಲೆ ಬಿಜ್ಜಳನ ಸೇನೆ ದಾಳಿಮಾಡಿ ಕಲ್ಯಾಣವೆಲ್ಲ ಬೀದಿ ಬೀದಿಯಲ್ಲಿ ರಕ್ತದೋಕುಳಿ ಹರಿಸಿದರು. ಬಹಳಷ್ಟು ವಚನಕಟ್ಟುಗಳನ್ನು ಸುಟ್ಟು ಹಾಕಿದರು, ಇನ್ನುಳಿದ ವಚನಗಳನ್ನು ಉಳಿಸಲು ಅದೆಷ್ಟೋ ಶರಣರು ಪ್ರಾಣಕಳೆದುಕೊಂಡರು. ಇನ್ನುಳಿದ ಶರಣರು ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದರು. ಚನ್ನಬಸವಣ್ಣನವರ ನೇತೃತ್ವದಲ್ಲಿ ಉಳವಿಯತ್ತ ಸಾಗಿದರು. ನಾವು ಈ ನಾಟಕವನ್ನು ಕೇವಲ 1ಗಂಟೆಯಲ್ಲಿ ಇದರ ಮುನ್ನುಡಿಯಷ್ಟೇ ರೂಪಕವನ್ನು ಇಂದು ಇದೇ ಬಸವಕಲ್ಯಾಣದಲ್ಲಿ ಮಾಡಿದೆವು. ವೀಕ್ಷಿಸಿ ಹಾರೈಸಿದ ತಮಗೆಲ್ಲ ಭಕ್ತಿಯ ಶರಣು ಶರಣಾರ್ಥಿ.
ಈ ರೂಪಕದ ರಚನೆ : ಜಯಶ್ರೀ ಮಹಾಜನ ಶೆಟ್ಟಿ ರಾಯಚೂರು ಬಸವಕೇಂದ್ರ.
ವೀಕ್ಷಿಸಿದ ನಿಮಗೆಲ್ಲ ಮತ್ತೊಮ್ಮೆ ತುಂಬು ಹೃದಯದ ಶರಣು ಶರಣಾರ್ಥಿಗಳು 🙏🙏