Перейти к содержимому

ಉಡಿ ತುಂಬಿಸಿಕೊಳ್ಳುವುದು ಗೌರವದ ಸಂಕೇತ: ಉಜ್ಜಯಿನಿ ಶ್ರೀ

Nataraja Ujjaini

0:00 / 0:00

ಉಡಿ ತುಂಬಿಸಿಕೊಳ್ಳುವುದು ಗೌರವದ ಸಂಕೇತ: ಉಜ್ಜಯಿನಿ ಶ್ರೀ

24 233 просмотра · 1 месяц назад
Nataraja Ujjaini
3,89 тыс. подписчиков
24 233 просмотра · 1 месяц назад
ಉಡಿ ತುಂಬಿಸಿಕೊಳ್ಳುವುದು ಗೌರವದ ಸಂಕೇತ: ಉಜ್ಜಯಿನಿ ಶ್ರೀ ಕೊಟ್ಟೂರು: ಉಜ್ಜಯಿನಿಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ತುಂಗಾ ಕಿರಣ ಸುದ್ದಿ :- ಕೊಟ್ಟೂರು: ವರಮಹಾಲಕ್ಷ್ಮೀ ಹಬ್ಬದಲ್ಲಿ ಮಹಿಳೆಯರಿಗೆ ಉಡಿ ತುಂಬುವುದು ಮಂಗಳಕರವಷ್ಟೇ ಅಲ್ಲದೆ, ಅದೊಂದು ಗೌರ ವದ ಸಂಕೇತವಾಗಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ರಾಜದೇಶಿಕೇಂದ್ರ ಭಗವತ್ಪಾದರು ಹೇಳಿದರು. ತಾಲೂಕಿನ ಉಜ್ಜಯಿನಿಯ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಶ್ರಾವಣ ಪ್ರಯುಕ್ತ ನಡೆದಿರುವ ಪುರಾಣ ಪ್ರವಚನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಶುಕ್ರವಾರ ಮಾತನಾಡಿದರು. ಮಹಿಳೆಯನ್ನು ನಮ್ಮ ದೇಶದಲ್ಲಿ ಶಕ್ತಿ ಸ್ವರೂಪಿಣಿ ಎಂದು ಕರೆಯಲಾಗಿದೆ. ಒಬ್ಬ ಮಹಿಳೆಗೆ ಉಡಿ ತುಂಬಿದಾಗ ಅದು ಸಾಕ್ಷಾತ್ ಲಕ್ಷ್ಮೀ ದೇವಿಗೆ ಸಲ್ಲಿಸಿದಂತಾಗುತ್ತದೆ. ಉಡಿ ತುಂಬಿ ಆರ್ಶೀವದಿಸುವುದರಿಂದ ಮಹಿಳೆಯರಿಗೆ ಆರೋಗ್ಯ, ಆಯುಷ್ಯ, ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು. ಪ್ರಶಾಂತಸಾಗರ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗುಂಡಮಣಗು ತಿಪ್ಪೇಸ್ವಾಮಿ ಮಾತನಾಡಿ, ಜಗದ್ಗುರುಗಳು ಸದಾ ಭಕ್ತರೊಂದಿಗೆ ಇದ್ದು, ಅವರು ನಡೆಸುವ ಎಲ್ಲ ಕಾರ್ಯಗಳಿಗೆ ನಾವುಗಳ ಸದಾ ಬೆಂಬಲವಾಗಿರುತ್ತೇವೆ ಎಂದರು. ಎನ್.ಟಿ. ತಮ್ಮಣ್ಣ ಟಿ.ಮಲ್ಲಿಕಾರ್ಜುನಗೌಡ ಮಾತ ನಾಡಿದರು. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಾಚಾರ್ಯ ಸ್ವಾಮೀಜಿ, ಶ್ರೀ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ, ಮುಖಂಡರು ಗಳಾದ ಚನ್ನವೀರಸ್ವಾಮಿ, ಕೆ.ವಿವೇಕಾನಂದ, ಬಿ.ಪಂಪಾಪತಿ, ಜಿ.ಸೋಮಶೇಖರ, ರ್ಎಸ್ವಾಮಿ, ರೂಪಶ್ರೀ ನಟರಾಜ ಇತರರು ಇದ್ದರು. ಇದೇ ಸಂದರ್ಭದಲ್ಲಿ ಸಾಹಿತಿ ಭೀಮಣ್ಣ ಗಜಾಪುರ ರಚನೆಯ ಸದ್ದರ್ಮ ಸೂರ್ಯ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಯಿತು. ನೆರೆದಿದ್ದ ಸಹಸ್ರಾರು ಮಹಿಳೆಯರಿಗೆ ಉಡಿ ತುಂಬಲಾಯಿತು. ಉಪನ್ಯಾಸಕ ಬಿ.ಎಂ. ಸಿಂಧು ಗಿರೀಶ