Moong Dal Halwa | ಮೂಂಗ್ ದಾಲ್ ಹಲ್ವಾ | Easy & Delicious Halwa Recipe 😋
Varshitha Life Style 2013
0:00 / 0:00
Moong Dal Halwa | ಮೂಂಗ್ ದಾಲ್ ಹಲ್ವಾ | Easy & Delicious Halwa Recipe 😋
24 просмотра · 21 час назад
Varshitha Life Style 2013
113 подписчиков
24 просмотра · 21 час назад
ಇಂದು ನಮ್ಮ ಮನೆಯಲ್ಲಿ ತುಂಬಾ ರುಚಿಯಾದ ಮೂಂಗ್ ದಾಲ್ ಹಲ್ವಾ ಮಾಡುವ ವಿಧಾನವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ 😋❤️
ಮೊದಲು ಒಂದು ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಫ್ರೈ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ. ನಂತರ ತೊಳೆದ ಮೂಂಗ್ ದಾಲ್ ಅನ್ನು ಅದೇ ತುಪ್ಪದಲ್ಲಿ ಚೆನ್ನಾಗಿ ಹುರಿಯಬೇಕು. ದಾಲ್ ಸ್ವಲ್ಪ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿದುಕೊಂಡು, ನಂತರ ಮಿಕ್ಸಿಯಲ್ಲಿ ಹಾಕಿ ಗ್ರೈಂಡ್ ಮಾಡಿಕೊಳ್ಳಿ.
ಮತ್ತೆ ಅದೇ ಪಾತ್ರೆಗೆ ಸುಮಾರು ಒಂದು ಲೋಟ ತುಪ್ಪ ಹಾಕಿ, ಗ್ರೈಂಡ್ ಮಾಡಿಕೊಂಡ ಮೂಂಗ್ ದಾಲ್ ಅನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಬಣ್ಣ ಬದಲಾಗುವವರೆಗೆ ಮತ್ತು ಚೆನ್ನಾಗಿ ಹುರಿಯುವವರೆಗೆ ನಿರಂತರವಾಗಿ ಕಲಸುತ್ತಿರಬೇಕು.
ನಂತರ ಬಿಸಿ ಮಾಡಿಕೊಂಡಿರುವ ನೀರನ್ನು ನಿಧಾನವಾಗಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ದಾಲ್ ಚೆನ್ನಾಗಿ ಬೇಯಿ ಮಿಕ್ಸ್ ಆದ ಮೇಲೆ ಎರಡು ಲೋಟ ಸಕ್ಕರೆ ಹಾಕಿ ಚೆನ್ನಾಗಿ ಕಲಸುತ್ತಿರಬೇಕು.
ಹಲ್ವಾ ಚೆನ್ನಾಗಿ ಬೇಯುತ್ತಾ ಬಂದಾಗ ತುಪ್ಪ ಬಿಟ್ಟುಕೊಳ್ಳಲು ಶುರುವಾಗುತ್ತದೆ. ತುಪ್ಪ ಬಿಟ್ಟ ನಂತರ ಹಲ್ವಾ ರೆಡಿಯಾಗಿದೆ ಎಂದು ಅರ್ಥ. ಕೊನೆಯಲ್ಲಿ ಫ್ರೈ ಮಾಡಿಕೊಂಡ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಬಿಸಿ ಬಿಸಿ ಮೂಂಗ್ ದಾಲ್ ಹಲ್ವಾ ಸಿದ್ಧ! 😋❤️ವಿಡಿಯೋ ಇಷ್ಟವಾದರೆ Like 👍 Share ❤️ Subscribe 🔔 ಮಾಡಿ.
Varshitha Life style 2013 🌸
#MoongDalHalwa #MoongDalHalwaRecipe #HalwaRecipe #SweetRecipe #IndianSweets #HomemadeSweet #KannadaRecipe #VarshithaLifestyle2013 #EasySweet #CookingRecipe