Перейти к содержимому

ದಶಾವತಾರದ ಹಾಡು (ಅನಂತ ಚತುರ್ದಶಿ ಪ್ರಯುಕ್ತ )

Pratibha Dev

0:00 / 0:00

ದಶಾವತಾರದ ಹಾಡು (ಅನಂತ ಚತುರ್ದಶಿ ಪ್ರಯುಕ್ತ )

44 687 просмотров · 2 дня назад
Pratibha Dev
1,97 тыс. подписчиков
44 687 просмотров · 2 дня назад
ಭಗವಂತ ನ ಹತ್ತು ಅವತಾರವನ್ನು ತಿಳಿಯಲು ಸುಲಭ ಸಾಹಿತ್ಯ ಇರುವ ಹಾಡನ್ನು ಹೇಳಿದ್ದೇವೆ ನಾನು, ನನ್ನ ಮಗಳು. ಕೇಳಿ, ಪ್ರೋತ್ಸಾಹಿಸಿ 🙏 ಭಗವಂತ ನ ಕೃಪೆಗೆ ಪಾತ್ರರಾಗೋಣ. 🙏 Lyrics ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣನ್ಯಾರೆ ಪೇಳೆ ಸಖಿ || Pa || ಕ್ಷೀರಸಾಗರದಲ್ಲಿ ಶಯನವ ಮಾಡಿದ ಆದಿನಾರಾಯಣ ನೋಡೆ ಸಖಿ || a Pa || ಕಾಲಿಲ್ಲದಲೆ ಓಡಿ ಎವೆ ಇಕ್ಕದಲೆ ನೋಡಿ ಮಿಂಚಿನಂತೆ ಹೊಳೆಯುವನ್ಯಾರೆ ಸಖಿ ವೇದವ ತಂದು ಸುರರಿಗೆ ಕೊಟ್ಟಂಥ ಮತ್ಸ್ಯಾವತಾರನ್ನ ನೋಡೆ ಸಖಿ || 1 || ತಲೆಯ ತಗ್ಗಿಸುವನು ಕಡಳೊಳು ಆಡುವ ಕಡೆದರೆ ಕಡಗೋಲನ್ಯಾರೆ ಸಖಿ ಸುರರು ದೈತ್ಯರು ಕೂಡಿ ಶರಧಿಯ ಮಥಿಸಲು ಕೂರ್ಮಾವತಾರನೆ ಇಂದುಮುಖಿ || 2 || ಮಾರಿ ತಗ್ಗಿಸುವನು ಮಣ್ಣು ಚಿಮ್ಮಿ ಆಡುವ ಕೋರೆದಾಡೆಯವ ಇವನ್ಯಾರೆ ಸಖಿ ದುರುಳನ್ನ ಕೊಂದು ಧರಣಿಯ ತಂದಂಥ ವರಾಹಾವತಾರನೆ ವಾರಿಜಾಕ್ಷಿ || 3 || ಕಂಬದಿಂದಲಿ ಬಂದು ಕರುಳನು ಬಗೆದು ಕೊರಳೊಳು ಹಾಕಿದವನ್ಯಾರೆ ಸಖಿ ನರಮೃಗ ರೂಪದಿ ಉದರವ ಸೀಳಿದ ನಾರಸಿಂಹನ ರೂಪ ನೋಡೆ ಸಖಿ || 4 || ಪುಟ್ಟ ಪಾದದಿಂದ ಸೃಷ್ಟಿಯನ್ನಳೆವ ದಿಟ್ಟ ಬ್ರಹ್ಮಚಾರಿ ಯಾರೆ ಸಖಿ ಕೊಟ್ಟಿದ್ದು ಸಾಲದೆ ಮೆಟ್ಟಿದ ಶಿರವನ್ನು ಪುಟ್ಟ ವಾಮನರೂಪ ನೋಡೆ ಸಖಿ || 5 || ಕೋಪದಿಂದಲಿ ಬಂದು ಕೊಡಲಿಯನ್ನೆ ಪಿಡಿದು ಕುಲವನ್ನೇ ಸವರಿದನ್ಯಾರೆ ಸಖಿ ರಕ್ತದೊಳಗೆ ಸ್ನಾನ ತರ್ಪಣ ಮಾಡಿದ ವಿಪ್ರ ಭಾರ್ಗವ ರಾಮ ನೋಡೆ ಸಖಿ|| 6 || ಶೀಘ್ರದಿಂದಲಿ ಬಂದು ಶಬರಿ ಎಂಜಲನುಂಡು ಸೇತುವೆ ಕಟ್ಟಿದವನ್ಯಾರೆ ಸಖಿ ಕೌಸಲ್ಯೆಯ ಉದರದಿ ಶಿಶುವಾಗಿ ಜನಿಸಿದ ದಶರಥ ರಾಮನ್ನ ನೋಡೆ ಸಖಿ || 7 || ಬ್ರಹ್ಮಾಂಡದೊಳಗೆಲ್ಲ ಬಂಡಿಯ ಹೊಡೆದೊನು ಪಾರ್ಥಸಾರಥಿ ಇವನ್ಯಾರೆ ಸಖಿ ಮಥುರೆಯಲ್ಲಿ ಹುಟ್ಟಿ ಗೋಕುಲದಿ ಬೆಳೆದ ಗೋಪಾಲಕೃಷ್ಣನ್ನ ನೋಡೆ ಸಖಿ || 8 || ಮರದೊಳಗೆ ನಿಂತು ಮಾನವ ಕಾಯ್ದಂಥ ಮಾಧವ ಇವನ್ಯಾರೆ ಹೇಳೆ ಸಖಿ ತ್ರಿಪುರರ ಸತಿಯರ ವ್ರತ ಭಂಗ ಮಾಡಿದ ಬೌದ್ಧಾವತಾರನೆ ಚಂದ್ರಮುಖಿ || 9 || ಹಯವನೇರಿ ಬಂದು ಧರಣಿಯೆಲ್ಲ ತಿರುಗಿ ಗಿರಿಯಲ್ಲಿ ನಿಂತವನ್ಯಾರೆ ಸಖಿ ವೇದಾಂತವೇದ್ಯ ಶ್ರೀ ಪುರಂದರ ವಿಠಲನ್ನ ಲಕ್ಷ್ಮೀರಮಣನ್ನ ನೋಡೆ ಸಖಿ || 10 ||