Перейти к содержимому

ಎಲ್ಲಿರುವನೋ ರಂಗ | ಕನಕದಾಸರ ದೇವರನಾಮ

LakshmiLahari

0:00 / 0:00

ಎಲ್ಲಿರುವನೋ ರಂಗ | ಕನಕದಾಸರ ದೇವರನಾಮ

902 просмотра · 1 месяц назад
LakshmiLahari
393 подписчика
902 просмотра · 1 месяц назад
"ಎಲ್ಲಿರುವನೋ ರಂಗ" ಕನಕದಾಸರ ರಚನೆ, ಭಗವಂತನು ಎಲ್ಲೆಡೆ ಇದ್ದಾನೆ; ಭಕ್ತರು ಭಕ್ತಿಯಿಂದ ಕರೆದರೆ ಅಲ್ಲಿಯೇ ಬಂದೊದಗುವನು ಎಂಬ ಅಚಲ ಸತ್ಯವನ್ನು ಸಾರುತ್ತದೆ. #ಎಲ್ಲಿರುವನೋರಂಗ #Kanakadasa #KanakadasaraKeerthane #KannadaBhakti #KannadaDevotional #Ranganatha #SriKrishna #BhaktiGeethe #HaridasaSahitya #KannadaSongs #Bhajane #DevotionalMusic #story #storytelling ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ || ಎಲ್ಲಿ ಭಕ್ತರು ಕರೆದರೆ ಅಲ್ಲೇ ಬಂದೊದಗುವನು || ಅ || ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು ಭರದೊದೆಯಲವನ ಪಿತ ಕೋಪದಿಂದ ಸ್ಥಿರವಾದೊಡೀ ಕಂಭದಲಿ ತೋರು ತೋರೆನಲು ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ? || ೧ || ಪಾಪಕರ್ಮವ ಮಾಡಿದ ಅಜಮಿಳನ ಯಮಭಟರು ಕೋಪದಿಂದ ಎಳೆಯುತಿರೆ ಭೀತಿಯಿಂದ ತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ ಶ್ವೇತದ್ವೀಪವೀ ಧರೆಗೆ ಸಮೀಪದಲ್ಲಿಹುದೇ? || ೨ || ಕರಿರಾಜನನು ನೆಗಳು ನುಂಗುತಿರೆ ಭಯದಿಂದ ಮೊರೆಯಿಡಲು ಕೇಳಿ ತ್ವರಿತದಲಿ ಬಂದು ಕರುಣದಲಿ ಬಂದವನ ಪರಿಹರಿಸೆ ಗಜರಾಜನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೆ? || ೩ || ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ ತರುಹಿ ಹಾ ಕೃಷ್ಣ ಎಂದೊರೆ ಕೇಳ್ದು ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾಪುರಿಗೆ ದ್ವಾರಾವತಿಯು ಕೂಗಳತೆಯೇ? || ೪ || ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ ಗಣನೆಯಿಲ್ಲದ ಮಹಾಮಹಿಮನೆನಿಪ ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನು ನೆನೆವರು ಮನದೊಳಿಹನೆಂಬ ಬಿರುದುಂಟಾಗಿ || ೫ ||