Перейти к содержимому

ಕಾರ್ ಡಿಕ್ಕಿಯಲ್ಲಿ ಸಿಕ್ತು ಉಡುಪಿಯ ಪ್ರಕಾಶ್ ನ 9 ತುಂಡಾದ ಶವ│Daijiworld Television

Daijiworld Television

0:00 / 0:00

ಕಾರ್ ಡಿಕ್ಕಿಯಲ್ಲಿ ಸಿಕ್ತು ಉಡುಪಿಯ ಪ್ರಕಾಶ್ ನ 9 ತುಂಡಾದ ಶವ│Daijiworld Television

29 274 просмотра · 22 часа назад
Daijiworld Television
701 тыс. подписчиков
29 274 просмотра · 22 часа назад
ದುಬೈನ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜುಲೈ ತಿಂಗಳಲ್ಲಿ ನಡೆದಿದೆ ಎನ್ನಲಾದ ಈ ಕೃತ್ಯವು ಈಗ ತನಿಖೆ ವೇಳೆ ಬಯಲಾಗಿದ್ದು, ಮೃತರನ್ನು ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದೆ. ಉಡುಪಿ ಮೂಲದ ಪ್ರಕಾಶ್ ಕುಂದರ್ ಅವರು ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರನೊಂದಿಗೆ ಶಾರ್ಜಾದಲ್ಲಿ ನೆಲೆಸಿದ್ದರು. ಶಾರ್ಜಾ ಏರ್ಪೋರ್ಟ್ನಲ್ಲಿ ಅವರು ಉದ್ಯೋಗದಲ್ಲಿದ್ದರು. ಕಳೆದ 20 ವರ್ಷಗಳ ಹಿಂದೆ ಪ್ರಕಾಶ್ ಹಾಗೂ ಟೀನಾ ಅವರ ವಿವಾಹವಾಗಿದ್ದು, ದಂಪತಿಗೆ ಎಸ್ಸೆಸ್ಸೆಲ್ಸಿ ಕಲಿಯುತ್ತಿರುವ ಒಬ್ಬ ಪುತ್ರನಿದ್ದಾನೆ. ಟೀನಾ ಅವರು ಅಲ್ಲಿಯೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಕುಟುಂಬದಲ್ಲಿ ಯಾವುದೇ ಗಂಭೀರ ಕೌಟುಂಬಿಕ ಕಲಹವಿರುವ ಬಗ್ಗೆ ಸಂಬಂಧಿಕರಿಗೆ ಯಾವುದೇ ಮಾಹಿತಿ ಇರಲಿಲ್ಲ. ಅನುಮಾನಾಸ್ಪದ ಸನ್ನಿವೇಶ ಮತ್ತು ನಾಪತ್ತೆ: •ಜುಲೈ 20 ರಂದು ಪ್ರಕಾಶ್ ಅವರ ಸಹೋದರ ಅವರನ್ನು ಸಂಪರ್ಕಿಸಲು ಯತ್ನಿಸಿದ್ದರು. ಈ ವೇಳೆ ಎಂದಿನಂತೆ ವಾಯ್ಸ್ ಮೆಸೇಜ್ ಕಳುಹಿಸುವ ಬದಲು ಟೆಕ್ಸ್ಟ್ ಮೆಸೇಜ್ ಮೂಲಕ ಉತ್ತರ ಬಂದಿತ್ತು. ಕರೆ ಮಾಡುವಂತೆ ಒತ್ತಾಯಿಸಿದಾಗ ಮೊಬೈಲ್ ಸಂಪರ್ಕ ಕಡಿತಗೊಂಡಿತ್ತು. •ಪ್ರಕಾಶ್ ಭಾರತಕ್ಕೆ ತೆರಳಿದ್ದಾರೆ ಎಂದು ಅವರ ಕೆಲಸ ಮಾಡುತ್ತಿದ್ದ ಕಂಪನಿ ತಿಳಿಸಿತ್ತು. ಆದರೆ ಅವರು ತವರು ದೇಶಕ್ಕೆ ಬಾರದಿರುವುದು ಸಹೋದರನಿಗೆ ಆತಂಕ ತಂದಿತ್ತು. •ಆತಂಕಗೊಂಡ ಸಂಬಂಧಿಕರು ಶಾರ್ಜಾದಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಹುಡುಕಾಟ ನಡೆಸಿದಾಗ, ಪ್ರಕಾಶ್ ಅವರದೇ ಕಾರ್ ಡಿಕ್ಕಿಯಲ್ಲಿ ಅವರ ಶವ ಪತ್ತೆಯಾಗಿದೆ. #daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews