Перейти к содержимому

Hubli-Dharwad Agriculture News: ಕಡಲೆ, ಜೋಳದ ಬಿತ್ತನೆ ಬೀಜಗಳ ಬೆಲೆ ಹೆಚ್ಚಳದಿಂದ ರೈತರ ಕಣ್ಣೀರು | tv5 kannada

TV5 Kannada

0:00 / 0:00

Hubli-Dharwad Agriculture News: ಕಡಲೆ, ಜೋಳದ ಬಿತ್ತನೆ ಬೀಜಗಳ ಬೆಲೆ ಹೆಚ್ಚಳದಿಂದ ರೈತರ ಕಣ್ಣೀರು | tv5 kannada

3 012 просмотров · 5 ч назад
TV5 Kannada
2,73 млн подписчиков
3 012 просмотров · 5 ч назад
Hubli-Dharwad Agriculture News: ಕಡಲೆ, ಜೋಳದ ಬಿತ್ತನೆ ಬೀಜಗಳ ಬೆಲೆ ಹೆಚ್ಚಳದಿಂದ ರೈತರ ಕಣ್ಣೀರು | tv5 kannada ರಾಜ್ಯದಲ್ಲಿ ಮುಂಗಾರು ಮಳೆಯ ವೈಫಲ್ಯ ಹಾಗೂ ಬರಗಾಲದ ಹೊಡೆತದಿಂದಾಗಿ ಈಗಾಗಲೇ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರಿಗೆ, ಈಗ ಹಿಂಗಾರಿ (Hingari) ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾವಿರಾರು ರೂಪಾಯಿ ಸಾಲ ಮಾಡಿ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಮಳೆಯಿಲ್ಲದೆ ನೆಲಕಚ್ಚಿದರೂ, ಧೃತಿಗೆಡದ ರೈತರು ಈ ಬಾರಿ ಹಿಂಗಾರಿ ಬೆಳೆಯನ್ನಾದರೂ ಕಾಪಾಡಿಕೊಳ್ಳಲು ಮತ್ತೆ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಆದರೆ ಧಾರವಾಡ ಹಾಗೂ ಹುಬ್ಬಳ್ಳಿ ಭಾಗದ ರೈತ ಸಂಪರ್ಕ ಕೇಂದ್ರಗಳು ಮತ್ತು ಸೊಸೈಟಿಗಳಲ್ಲಿ ಲಭ್ಯವಿರುವ ಬಿತ್ತನೆ ಬೀಜಗಳ ಬೆಲೆ ಕಳೆದ ವರ್ಷಕ್ಕಿಂತ ಈ ಬಾರಿ ಗಣನೀಯವಾಗಿ ಹೆಚ್ಚಳವಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಕಳೆದ ವರ್ಷ 20 ಕೆ.ಜಿ.ಯ ಜೆಜೆ-11 ಬ್ರ್ಯಾಂಡ್ ಕಡಲೆ ಬೀಜ 1,160 ರೂ. ಇದ್ದದ್ದು ಈಗ 1,300 ರೂ.ಗೆ ಏರಿಕೆಯಾಗಿದೆ. ಹಾಗೆಯೇ 3 ಕೆ.ಜಿ. ಜೋಳದ ಬಿತ್ತನೆ ಬೀಜದ ಬೆಲೆ 120 ರೂ. ಇದ್ದು, ಈಗ 156 ರೂ. ತಲುಪಿದೆ. ಇನ್ನುಳಿದ ವಿವಿಧ ಬಿತ್ತನೆ ಬೀಜಗಳು ಹಾಗೂ ಕಾಂಪೋಸ್ಟ್ ಗೊಬ್ಬರಗಳ ಬೆಲೆಯಲ್ಲಿಯೂ 50 ರಿಂದ 200 ರೂಪಾಯವರೆಗೆ ಏರಿಕೆಯಾಗಿದೆ. ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಸರ್ಕಾರಗಳು ರೈತರ ನೆರವಿಗೆ ಧಾವಿಸಿ, ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಬೀಜ ಹಾಗೂ ಗೊಬ್ಬರಗಳನ್ನು ವಿತರಿಸಬೇಕಿತ್ತು. ಆದರೆ ಬೆಲೆ ಏರಿಕೆ ಮಾಡುವ ಮೂಲಕ ರೈತರ ಬೆನ್ನುಮೂಳೆ ಮುರಿಯಲಾಗುತ್ತಿದೆ ಎಂದು ರೈತ ಮುಖಂಡರು ಹಾಗೂ ಅನ್ನದಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. The farming community in North Karnataka, already battered by severe drought and crop failures during the Kharif season, is facing a fresh crisis with the steep price hike of seeds and fertilizers for the upcoming Hingari (Rabi) sowing season. Despite incurring heavy losses earlier, resilient farmers are preparing for fresh cultivation in hopes of a better yield. However, the soaring prices of essential inputs like certified seeds and compost fertilizers at Raitha Samparka Kendras and cooperative societies have sparked widespread outrage. For instance, the price of 20 kg of JJ-11 gram (kadale) seeds has surged from ₹1,160 to ₹1,300, while maize/jowar seed packs have seen considerable jumps. Farmers have strongly condemned the government's failure to subsidize agricultural inputs during these testing financial times. #HubliNews #HingariSowing #FarmersProtest #SeedPriceHike #NorthKarnataka #AgricultureNews #DharwadNews #TV5SpecialReport #kannadanews #tv5kannadalive #tv5karnataka #tv5kannada ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬