Перейти к содержимому

ಸರ್ಕಾರದ ಆದೇಶ ಏಕೆ ಪಾಲನೆಯಾಗುತ್ತಿಲ್ಲ? | ದಸರಾ ರಜೆ ವಿಚಾರದಲ್ಲಿ ಖಾಸಗಿ ಶಾಲೆಗಳ ವಿರುದ್ಧ ಆಕ್ರೋಶ | ಶ್ರೀರಾಮ ಸೇನೆ

Nirbhaya News Kannada 24X7

0:00 / 0:00

ಸರ್ಕಾರದ ಆದೇಶ ಏಕೆ ಪಾಲನೆಯಾಗುತ್ತಿಲ್ಲ? | ದಸರಾ ರಜೆ ವಿಚಾರದಲ್ಲಿ ಖಾಸಗಿ ಶಾಲೆಗಳ ವಿರುದ್ಧ ಆಕ್ರೋಶ | ಶ್ರೀರಾಮ ಸೇನೆ

115 просмотров · 7 дн. назад
Nirbhaya News Kannada 24X7
1,25 тыс. подписчиков
115 просмотров · 7 дн. назад
ಖಾಸಗಿ ಶಾಲೆಗಳಿಂದ ದಸರಾ ರಜೆ ನಿರಾಕರಣೆ: ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸಲು ಶ್ರೀರಾಮ ಸೇನಾ ಆಗ್ರಹ ಬೆಂಗಳೂರು, ಅಕ್ಟೋಬರ್ 03, 2026: ರಾಜ್ಯ ಸರ್ಕಾರವು ಶಾಲಾ ಮಕ್ಕಳಿಗೆ ಅಧಿಕೃತವಾಗಿ ದಸರಾ ರಜೆ ಘೋಷಿಸಿ ಸುತ್ತೋಲೆ ಹೊರಡಿಸಿದ್ದರೂ ಸಹ, ಬೆಂಗಳೂರು ನಗರದ ಕೆಲವು ಖಾಸಗಿ ಕ್ರಿಶ್ಚಿಯನ್ ಮಿಷನರಿ ಶಾಲೆಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿವೆ ಎಂದು ಶ್ರೀರಾಮ ಸೇನಾ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಇಂದು (ಶನಿವಾರ) ಶ್ರೀರಾಮ ಸೇನಾ ಬೆಂಗಳೂರು ನಗರ ಸಂಘಟನೆ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಧಿಕೃತ ಮನವಿ ಪತ್ರವನ್ನು ಸಲ್ಲಿಸಲಾಯಿತು. ಕೆಲವು ಖಾಸಗಿ ಮತ್ತು ಮಿಷನರಿ ಶಾಲೆಗಳು ಪರೀಕ್ಷೆಗಳ ನೆಪವೊಡ್ಡಿ ವಿದ್ಯಾರ್ಥಿಗಳಿಗೆ ದಸರಾ ರಜೆ ನೀಡದೆ ವಂಚಿಸುತ್ತಿವೆ ಎಂದು ಪೋಷಕರಿಂದ ವ್ಯಾಪಕ ದೂರುಗಳು ಕೇಳಿಬಂದಿವೆ. ದಸರಾ ಹಬ್ಬವು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯಾಗಿದ್ದು, ಮಕ್ಕಳಿಗೆ ಈ ಸಂದರ್ಭದಲ್ಲಿ ರಜೆ ನಿರಾಕರಿಸುವುದು ಸರ್ಕಾರದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಂಘಟನೆ ತಿಳಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮ ಸೇನಾ ರಾಜ್ಯ ಕಾರ್ಯಾಧ್ಯಕ್ಷರಾದ (ದ.ಪ್ರ) ಸುಂದ್ರೇಶ್ ಗೌಡ ನರ್ಗಲ್ ಅವರು, "ಸರ್ಕಾರದ ಆದೇಶ ಎಲ್ಲ ಶಾಲೆಗಳಿಗೂ ಅನ್ವಯಿಸುತ್ತದೆ. ನಿಯಮ ಮೀರಿ ರಜೆ ನೀಡದೆ ತರಗತಿ ಅಥವಾ ಪರೀಕ್ಷೆ ನಡೆಸುವ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರದ ಸುತ್ತೋಲೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು," ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಶಿಕ್ಷಣ ಇಲಾಖೆಯು ನಿಯಮ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಶ್ರೀರಾಮ ಸೇನಾ ವತಿಯಿಂದ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ. ಈ ಸಂದರ್ಭದಲ್ಲಿ... ಸಾಮಾಜಿಕ ಜಾಲತಾಣ ಪ್ರಮುಖ ರಾಜ್ಯ (ದ.ಪ್ರ) ಮೋಹನ್ ಕುಮಾರ್ ಬೆಂಗಳೂರು ನಗರದ ಉಪಾಧ್ಯಕ್ಷರಾದ ಸತೀಶ್ ಕುಮಾರ್ ಬೆಂಗಳೂರು ನಗರದ ಕಾರ್ಯದರ್ಶಿ ಗಿರೀಶ್ ಎಂ ಬಿ ಬೆಂಗಳೂರು ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ, ವಿಜಯ್ (ಎಲೆಕ್ಟ್ರಿಕಲ್) ಬೆಂಗಳೂರು ದಕ್ಷಿಣ ವಲಯದ ಉಪಾಧ್ಯಕ್ಷರಾದ ಶಶಿಕುಮಾರ್ ಹಾಗೂ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. #DasaraHoliday #DasaraVacation #schoolholiday #privateschools #bengalurunews #karnatakanews #schoolnews #educationnews #bengaluru #karnataka #sriramasene #dasara #parents #students #kannadanews #NirbhayaNewsKannada #breakingnews #latestnews #newsupdate #educationdepartment