ವರವ ಕೊಡ ತಾಯಿ (lyrics in description box)( ಸುಲಭವಾಗಿ ಕಲಿಯಬಹುದಾದ ದೇವಿ ಭಜನೆ)🙏..varava koda thaayi.#ಭಜನೆ
Anisiya songs
0:00 / 0:00
ವರವ ಕೊಡ ತಾಯಿ (lyrics in description box)( ಸುಲಭವಾಗಿ ಕಲಿಯಬಹುದಾದ ದೇವಿ ಭಜನೆ)🙏..varava koda thaayi.#ಭಜನೆ
8 979 просмотров · 4 года назад
Anisiya songs
3,37 тыс. подписчиков
8 979 просмотров · 4 года назад
ವರವ ಕೊಡ ತಾಯಿ| ವರವ ಕೊಡ|
ಶರಧಿ ಯೋಳಾ ಕನ್ಯೆ| ನೀ ಕೇಳೆ ಸಂಪನ್ನೇ|
ಸೆರಗೊಡ್ಡಿ ಬೇಡುವೆ ||ಅ. ಪ.||
ಅರಿಶಿಣ ಕುಂಕುಮ| ಬಳಿಯೂ ಕರಿಮಣಿ|
ಬೆಳಗಾದರಿಡುವಂತ| ವರವ ಕೊಡ|
ಬೆಳಗಾದ್ರೆ ಬ್ರಾಹ್ಮಣರಿಗೆ| ಕರೆದುಮೃಷ್ಟಾನ್ನವ|
ಕುಡಿನೀರುಕೊಡುವಂತ| ವರವ ಕೊಡ||೧||
ಅಕ್ಕ ಮಹಾಲಕ್ಷುಮಿ ನಿನ್ನ |ಮುತ್ತಿನಮುಡಿಮ್ಯಾಲೆ|
ಅಚ್ಚ ಮಲ್ಲಿಗಿ ಘಮ| ಘಮಿಸುತಾವ|
ಅಚ್ಚ ಮಲ್ಲಿಗಿ |ಅರಳಿದ ಶ್ಯಾವಂತಿಗಿ|
ಪುಷ್ಪದೊಳಗಿನ್ ಐದು| ಹೂವ ಕೊಡ||೨||
ರಂಭೆಮಹಲಕ್ಷುಮಿ ನಿನ್ನ| ತುಂಬಿದ ಮುಡಿಮ್ಯಾಲೇ| ದುಂಡು ಮಲ್ಲಿಗಿ ಘಮ ಘಮಿಸುತಾವ| ದುಂಡು ಮಲ್ಲಿಗಿ ಅರಳಿದ ಶ್ಯಾವಂತಿಗಿ| ದಂಡಿಯೊಳಗಿನ್ ಐದು ಹೂವ ಕೊಡ ತಾಯಿ ||೩||
ಹೆಣ್ಣುಮಕ್ಕಳನ್ ಹಡೆದು | ಹೊನ್ನು ಶರಗೀಲೆ ಕಟ್ಟಿ| ಕನ್ಯಾದಾನ ಮಾಡುವಂತ | ವರವ ಕೊಡ|
ಅನ್ನದಾನ ಕನ್ಯಾದಾನ | ಗೋದಾನ ಗೃಹದಾನ|
ಭೂದಾನ ಮಾಡುವಂತ ವರವ ಕೊಡ||೪||
ಗಂಡಸ್ ಮಕ್ಕಳನ್ನ ಹಡೆದು| ಕುಲವನ್ನು ಉದ್ಧರಿಸುವ| ಬಿಂದುಲಿ ಇಡುವಂತ ಮಗನ ಕೊಡ |ಅಂದಣ ಪಲ್ಲಕ್ಕಿ| ಆನೆ ಕುದುರಿ ಮಂದಿ|
ಎಂದೆಂದೂ ಇರುವಂತ ವರವಕೊಡ||೫||
ಮಾಳಿಗೆ ಮನಿಯೊಳು |ಜೋಡು ತೊಟ್ಟಿಲ ಕಟ್ಟಿ|
ಜೋಗುಳ ಪಾಡುವಂತ| ವರವ ಕೊಡ|
ಬಾಗಿಲಿಗೆ ತೋರಣ| ಮದುವೆ ಮುಂಜಿ ನಾಮಕರಣ| ಯಾವಾಗ್ಲೂಇರುವಂತ ವರವ ಕೊಡ||೬||
ಲೋಕ ನಾಯಕಿ ನಿನ್ನ |ರಾಗುಟಿ ಚೌರಿ ಮ್ಯಾಲೆ|
ಸೂಸು ಕ್ಯಾದಗಿ ಘಮ| ಘಮಿಸುತಾವ|
ರಂಗ ನಾಯಕಿ ನಿನ್ನ |ಸೋಲು ಮುಡಿಮ್ಯಾಲಿನ್
ಪ್ರಸನ್| ವೆಂಕಟನರಸಿ ಐದು ಹೂವ ಕೊಡ||೭||