ಭಜನೆ ಪಾಠ | Bhajan Lesson | Harinarayana Namo Namo | Group Songs Kannada
Vocalist Dr. Harish Hegde
0:00 / 0:00
ಭಜನೆ ಪಾಠ | Bhajan Lesson | Harinarayana Namo Namo | Group Songs Kannada
70 177 просмотров · 2 месяца назад
Vocalist Dr. Harish Hegde
8,72 тыс. подписчиков
70 177 просмотров · 2 месяца назад
ಭಜನೆಯ ಪಾಠದ ವಿಡಿಯೋ ಇದಾಗಿದೆ. ಭಜನಾ ತಂಡಗಳಿಗೆ ಉಪಯುಕ್ತವಾಗಲೆಂದು ಈ ಹಾಡನ್ನು ಮಾಡಲಾಗಿದೆ. ಎಲ್ಲರಿಗೂ ಅನುಕೂಲವಾಗಲಿ ಎಲ್ಲರೂ ಈ ಚಾನೆಲ್ ನ ಸಬ್ ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ.
#ಭಜನೆಪಾಠ #bhajanlessons #harinarayananamonamo
ಭಜನೆಯ ರಚನಾಕಾರರು
ಶ್ರೀಮತಿ ವಸಂತಿ ಆರ್. ಪ್ರಭು
ರಾಗ ಸಂಯೋಜನೆ ಮತ್ತು ಪಾಠ ಮಾಡಿದವರು.
ಡಾ. ಹರೀಶ ಹೆಗಡೆ
ಪಾಠವನ್ನು ಕಲಿತವರು
ಶ್ರೀಮತಿ ಕವಿತಾ ಹೆಗಡೆ
ಸಾಹಿತ್ಯ
ಹರಿನಾರಾಯಣ ನಮೋ ನಮೋ
ದುರಿತ ನಿವಾರಣ ನಮೋ ನಮೋ
ಭವಭಯ ಹರಣ ರುಕ್ಮಿಣಿ ರಮಣ
ಪಾವನ ಚರಣ ನಮೋ ನಮೋ | ಪ |
ಗಿರಿಧರ ಮುರಹರ ಕರುಣಾ ಸಾಗರ
ಶ್ರೀ ಗೋವಿಂದ ಜಗದಾನಂದ
ಪಂಕಜ ನೇತ್ರ ಪರಮ ಪವಿತ್ರ
ಶಂಖ ಚಕ್ರಧರ ನಮೋ ನಮೋ | 1 |
ತ್ರಿಭುವನ ಸುಂದರ ನಂದಕುಮಾರ
ಕಾಶಿ ಪಿತಾಂಬರ ಕೌಸ್ತುಭ ಹಾರ
ಕಸ್ತೂರಿ ತಿಲಕ ಮೋರ ಮುಕುಟ ಧರ
ಮುರಲಿ ಮನೋಹರ ನಮೋ ನಮೋ | 2 |
ಸುರನರಸೇವಿಪ ಅಸುರ ಸಂಹಾರಿ
ಭಕ್ತೋದ್ಧಾರಿ ಕೃಷ್ಣ ಮುರಾರಿ
ಅಗಣಿತ ಮಹಿಮ ಗುಣಗಣ ಧಾಮ
ಶ್ರೀ ರಘುರಾಮ ನಮೋ ನಮೋ | 3 |
+++++