Перейти к содержимому

HD Deve Gowda At Mavinakere Ranganatha Temple: ದೇವಸ್ಥಾನದ ನಂಟಿನ ಬಗ್ಗೆ ಬಿಚ್ಚಿಟ್ಟ ದೇವೇಗೌಡರು

TV5 Kannada

0:00 / 0:00

HD Deve Gowda At Mavinakere Ranganatha Temple: ದೇವಸ್ಥಾನದ ನಂಟಿನ ಬಗ್ಗೆ ಬಿಚ್ಚಿಟ್ಟ ದೇವೇಗೌಡರು

748 просмотров · 10 часов назад
TV5 Kannada
2,73 млн подписчиков
748 просмотров · 10 часов назад
HD Deve Gowda At Mavinakere Ranganatha Temple: ದೇವಸ್ಥಾನದ ನಂಟಿನ ಬಗ್ಗೆ ಬಿಚ್ಚಿಟ್ಟ ದೇವೇಗೌಡರು | @tv5kannada ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಪ್ರಸಿದ್ಧ ಐತಿಹಾಸಿಕ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಅಮಾವಾಸ್ಯೆಯ ವಿಶೇಷ ದಿನದಂದು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ತಮ್ಮ ಧರ್ಮಪತ್ನಿ ಲಡ್ದಮ್ಮ (ಚನ್ನಮ್ಮ) ಅವರ ಅಗಲಿಕೆಯ ನಂತರ ಮೊದಲ ಬಾರಿಗೆ ಹಿರಿಯರಿಗೆ ಹಬ್ಬದ ಎಡೆ ಇಡುವ ವಿಧಿವಿಧಾನಗಳನ್ನು ನೆರವೇರಿಸಲು ಅವರು ಇಲ್ಲಿಗೆ ಆಗಮಿಸಿದ್ದರು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಬಾಲ್ಯದ ದಿನಗಳಿಂದಲೂ ರಂಗನಾಥ ಸ್ವಾಮಿಯೊಂದಿಗೆ ಇರುವ ಅವಿನಾಭಾವ ಸಂಬಂಧವನ್ನು ಭಾವುಕರಾಗಿ ಸ್ಮರಿಸಿದರು. ತಮ್ಮ ತಂದೆಯವರು ಒಂಬತ್ತು ವರುಷದ ವಯಸ್ಸಿನಿಂದಲೇ ತಮ್ಮ್ನ್ನು ಈ ದೇವಸ್ಥಾನಕ್ಕೆ ಕರೆತರುತ್ತಿದ್ದರು ಎಂದ ಅವರು, ರಂಗನಾಥನ ಆಶೀರ್ವಾದ ಹಾಗೂ ಅನುಗ್ರಹದಿಂದಲೇ ತಮಗೆ ರಾಜಕೀಯ ಜೀವನ ಒಲಿದುಬಂದಿತು ಹಾಗೂ ದೇಶ ಆಳುವ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದು ತಿಳಿಸಿದರು. ತಮ್ಮ ರಾಜಕೀಯ ಜೀವನದಲ್ಲಿ ತಾವಾಗಲಿ ಅಥವಾ ತಮ್ಮ ಕುಟುಂಬವಾಗಲಿ ಯಾರೊಬ್ಬರ ಬಳಿಯೂ ಅಕ್ರಮವಾಗಿ ಹಣ ಸಂಪಾದನೆ ಮಾಡಿಲ್ಲ, ಆಸ್ತಿ ಮಾಡಿಲ್ಲ ಎಂದು ತಮ್ಮ ಎದುರಾಳಿಗಳೂ ಸಹ ಹೇಳುವುದಿಲ್ಲ; ಇದು ಸಂಪೂರ್ಣವಾಗಿ ದೇವರ ಆಶೀರ್ವಾದ ಎಂದು ಹೇಳಿದರು. ತಾನು ಬದುಕಿರುವವರೆಗೂ ಈ ಸಂಪ್ರದಾಯ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ ಹೆಚ್‌ಡಿಡಿ, ಇದೇ ವೇಳೆ ಇತ್ತೀಚಿನ ಎಸ್‌ಐಆರ್ (SIR) ಕುರಿತಾದ ಮಾಧ್ಯಮಗಳ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದರು. Former Prime Minister and JD(S) supremo H.D. Deve Gowda visited the sacred Mavinakere Ranganatha Swamy Temple in Holenarasipura taluk of Hassan district on the auspicious occasion of Amavasya. He arrived at the hill temple to perform traditional ancestral rituals ('Ede' offering) for the first time following the demise of his wife, Channamma. Offering special prayers to Lord Ranganatha, Deve Gowda shared deep emotional ties with the temple, recalling how his father brought him to the shrine since he was nine years old. Interacting with the media after the darshan, Deve Gowda stated that it was solely by the grace of Lord Ranganatha that he entered politics and eventually governed the nation as Prime Minister. Reflecting on his clean public life, he asserted that none of his political opponents could ever accuse him of corruption or grabbing properties unlawfully, attributing his integrity entirely to divine blessings. While he pledged to continue this ancestral tradition as long as he lives, he consciously refrained from commenting on recent political queries regarding SIR. #HDDeveGowda #MavinakereRanganatha #Holenarasipura #HassanNews #JDS #KarnatakaPolitics #SpiritualVisit #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬