Перейти к содержимому

ಶ್ರೀ ವೀರೇಶ್ವರ ಪುಣ್ಯಾಶ್ರಮ, ಗದಗ ಸಾಕ್ಷ್ಯಚಿತ್ರ /Sri Veereshwara Punyashrama, Gadag Doccumentry

Mr. VIJAY SARODE

0:00 / 0:00

ಶ್ರೀ ವೀರೇಶ್ವರ ಪುಣ್ಯಾಶ್ರಮ, ಗದಗ ಸಾಕ್ಷ್ಯಚಿತ್ರ /Sri Veereshwara Punyashrama, Gadag Doccumentry

14 616 просмотров · 7 л. назад
Mr. VIJAY SARODE
3,76 тыс. подписчиков
14 616 просмотров · 7 л. назад
ಇಲ್ಲಿಯವರೆಗೆ ಅನೇಕ ಶ್ರೇಷ್ಠ ಸಂಗೀತಗಾರರು, ಪುರಾಣ-ಕೀರ್ತನಕಾರರು, ಕವಿಗಳು, ನಾಟಕಕಾರರು ಹಾಗೂ ಚಲನ ಚಿತ್ರ ನಟರನ್ನು ದೇಶಕ್ಕೆ ನೀಡಿದ ಹಿರಿಮೆ ಗದಗದ ಈ ವೀರೇಶ್ವರ ಪುಣ್ಯಾಶ್ರಮದ್ದು. ಇಂತಹ ಶ್ರೀ ವೀರೇಶ್ವರ ಪುಣ್ಯಾಶ್ರಮವನ್ನು ಲಿಂಗೈಕ್ಯ ಶ್ರೀ ಪಂಡಿತ ಪಂಚಾಕ್ಷರಿ ಗವಾಯಿಗಳು 1942ರಲ್ಲಿ ಸ್ಥಾಪಿಸಿದರು. ಇದಕ್ಕಿಂತ ಮುಂಚೆ ಪಂಚಾಕ್ಷರ ಗವಾಯಿಗಳು 1914ರಲ್ಲಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಗೀತ-ಸಾಹಿತ್ಯ ಮಹಾವಿದ್ಯಾಲಯವನ್ನು ಧಾರವಾಡ ಜಿಲ್ಲೆಯ ರೋಣ ತಾಲೂಕಿನಲ್ಲಿ ಬರುವ ನಿಡಗುಂದಿ ಕೊಪ್ಪದಲ್ಲಿ ಪ್ರಾರಂಭಿಸಿದ್ದರು. ಇದರ ಆಶ್ರಯದಲ್ಲಿ 25 ಬರ್ಷಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಗೀತ ಸೇವೆಯನ್ನು ನೀಡಿದ ಸಂಚಾರಿ ಸಂಗೀತ ಮಹಾವಿದ್ಯಾಲಯ, ಕೊನೆಗೆ ಗದಗ ನಗರಕ್ಕೆ ಬಂದು, ಅಲ್ಲಿಯೇ ನೆಲೆಯೂರಿತು. ಈ ಸಂದರ್ಭದಲ್ಲಿ ಬಸರಿಗಿಡದ ವೀರಣ್ಣ ಎನ್ನುವ ಭಕ್ತರು ಆಶ್ರಮಕ್ಕಾಗಿ ಜಾಗವನ್ನು ದಾನನೀಡಿದರು. ಇದೇ ಕಾಲಕ್ಕೆ ಶ್ರೀ ವೀರೇಶ್ವರ ಮಹಾಶರಣರು ಆಶ್ರಮದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮವನ್ನು ನೀಡಿದ್ದರು, ಇದರ ಸವಿ ನೆನಪು ಹಾಗೂ ದಾನಿ ವೀರಣ್ಣನವರ ಸ್ಮರಣೆಗಾಗಿ ಪಂಡಿತ ಪಂಚಾಕ್ಷರ ಗವಾಯಿಗಳು ಈ ಆಶ್ರಮಕ್ಕೆ ಶ್ರೀ ವೀರೇಶ್ವರ ಪುಣ್ಯಾಶ್ರಮ ಎಂದು ನಾಮಕರಣ ಮಾಡಿದರು. ನಂತರದ ದಿನಗಳಲ್ಲಿ ಹೆಸರಿಗೆ ತಕ್ಕಂತೆ ಪುಣ್ಯದ ಕೆಲಸಗಳನ್ನು ಮಾಡುತ್ತಾ ಸಾಗಿದ ಶ್ರೀ ವೀರೇಶ್ವರ ಪುಣ್ಯಾಶ್ರಮವು ಅಸಂಖ್ಯಾತ ಮಕ್ಕಳಿಗೆ ಪಾಠ ಕಲಿಸುವ ಮಹಾವಿದ್ಯಾಲಯವಾಗಿ ಬೆಳೆದು ರಾಷ್ಟ್ರವ್ಯಾಪಿ ಪ್ರಚಾರವನ್ನು ಪಡೆಯಿತು. ಇಲ್ಲಿ ಅಕ್ಷರ ದಾಸೋಹ, ಅನ್ನದಾಸೋಹ, ಸಂಗೀತ ದಾಸೋಹ ಹೀಗೆ ತ್ರಿವಿಧ ದಾಸೋಹಗಳು ನಿರಂತರವಾಗಿ ಸಾಗುತ್ತಾ ಬಂದಿದೆ. ಈ ಆಶ್ರಮದಲ್ಲಿ ಶಿಕ್ಷಣ ಕಲಿಯಲು ಅಂಧರಿಗೆ, ಅನಾಥರಿಗೆ ಹಾಗೂ ಅಂಗವಿಕಲರಿಗೆ ಎಂದಿಗೂ ಸ್ವಾಗತವಿದೆ. ಹಾಗೆಯೇ ಇಲ್ಲಿಗೆ ಯಾವುದೇ ಸಮಯದಲ್ಲಿ ಹಸಿದವರು ಬಂದರೂ ಪ್ರಸಾದವನ್ನು ನೀಡಲಾಗುತ್ತದೆ.