Перейти к содержимому

ಸಂಕಲ್ಪ ಕೃಷ್ಣಾರ್ಪಣಗಳ ಸಿದ್ಧತೆ. ರಾಯರ ನಾಮ ಲೇಖನ ಮಾಡುವ ಪ್ರತಿಯೊಬ್ಬರು ಈ ನಿಯಮಗಳನ್ನು ಪಾಲನೆ ಮಾಡಲೇಬೇಕು

SRIKARANARAYANA KSHETRA

0:00 / 0:00

ಸಂಕಲ್ಪ ಕೃಷ್ಣಾರ್ಪಣಗಳ ಸಿದ್ಧತೆ. ರಾಯರ ನಾಮ ಲೇಖನ ಮಾಡುವ ಪ್ರತಿಯೊಬ್ಬರು ಈ ನಿಯಮಗಳನ್ನು ಪಾಲನೆ ಮಾಡಲೇಬೇಕು

23 121 просмотр · 1 г. назад
SRIKARANARAYANA KSHETRA
83 тыс. подписчиков
23 121 просмотр · 1 г. назад
ರಾಯರ ನಾಮ ಲೇಖನ ಮಾಡುವ ಪ್ರತಿಯೊಬ್ಬರು ಈ ನಿಯಮಗಳನ್ನು ಪಾಲನೆ ಮಾಡಲೇಬೇಕು ಅದಕ್ಕಾಗಿ ಇದನ್ನು ನೀವು ನೋಡಲೇಬೇಕು ರಾಯರ ನಾಮ ಲೇಖನ . ಇದೊಂದು ಅತ್ಯಂತ ಪುಣ್ಯಕರವಾದ ಮಹತ್ಕಾರ್ಯ. ಇದರಲ್ಲಿ ತಾವು ಪಾಲ್ಗೊಳ್ಳಲು ಸಂಕಲ್ಪ ಮಾಡಿರುವುದು ಗುರುರಾಯರ ಪ್ರೀತಿಗೆ ಕಾರಣವಾಗಿದೆ ‌. ‌ ತಾವು ಮಾಡಲು ಹೊರಟಿರುವ ಈ ಲೇಖನ ಯಜ್ಞವು ತಮ್ಮ ಜೀವನವನ್ನೇ ಬೆಳಗಿಸುತ್ತದೆ . ತಮ್ಮ ಜೀವನದಲ್ಲಿ ಇದು ಅತ್ಯಂತ ಪ್ರಶಂಸಾರ್ಹವಾದ ಪುಣ್ಯ ಕೆಲಸವಾಗಿದೆ. ಮತ್ತು ನಿಮ್ಮ ಇಷ್ಟಾರ್ಥವನ್ನು ಪಡೆದುಕೊಳ್ಳಲು ಇದುವೇ ರಾಜ ಮಾರ್ಗವಾಗಿದೆ. ಶ್ರೀ ರಾಘವೇಂದ್ರ ಎಂಬುದು ರಾಮದೇವರ ಹೆಸರು. ರಾಮದೇವರನ್ನು ಸ್ಮರಣೆ ಮಾಡಿದರೆ ನಿಮಗೆ ರಾಮನಾಮವನ್ನು ಲಕ್ಷ ಬಾರಿ ಬರೆದ ಹಾಗೂ ಜಪಿಸಿದ ಪುಣ್ಯವೂ ಬರುತ್ತದೆ. ರಾಘವ ಎಂದರೆ ರಾಮದೇವರು ಅವರನ್ನೇ ಇಂದ್ರನನ್ನಾಗಿ ಅರ್ಥಾತ್ ಸ್ವಾಮಿಯನ್ನಾಗಿ ಹೊಂದಿದ ಹನುಮಂತ ದೇವರು ಕೂಡ ಶ್ರೀ ರಾಘವೇಂದ್ರ ಎಂದು ಕರೆಸಿಕೊಳ್ಳುತ್ತಾರೆ. ಆದ್ದರಿಂದ ಹನುಮಂತ ದೇವರನ್ನು ಸ್ಮರಣೆ ಮಾಡುತ್ತಾ ಬರೆದರೆ ಹನುಮ ಮಂತ್ರದ ಲಕ್ಷಲೇಖನವೂ ಇದರಿಂದ ಸಂಪನ್ನವಾಗುತ್ತದೆ. ಮಂತ್ರಾಲಯ ಪ್ರಭುಗಳಾದ ಗುರುರಾಯರ ಪ್ರಸಿದ್ಧ ಹೆಸರಾದ ಶ್ರೀ ರಾಘವೇಂದ್ರ ಎಂಬ ನಾಮ ಲೇಖನವನ್ನು ಮಾಡುವುದರಿಂದ ರಾಮದೇವರ ಹನುಮದೇವರ ಹಾಗೂ ಗುರುರಾಯರ ಲಕ್ಷ ಮಂತ್ರದ ಲೇಖನವೂ ಸಂಪನ್ನವಾಗುತ್ತದೆ ಇಂತಹ ಶ್ರೇಷ್ಠವಾದ ಮಂತ್ರವನ್ನು ಬರೆಯುವುದರಿಂದ ನಿಮ್ಮ ಇಷ್ಟಾರ್ಥ ನೆರವೇರುತ್ತದೆ ಎಂಬುದು ಈಗ ನಿಮಗೆ ಮನವರಿಕೆ ಆಗಿರಬಹುದು. ಪೂರ್ಣವಾಗಿ ಮನವರಿಕೆ ಆಗದಿದ್ದರೆ ಒಮ್ಮೆ ಬರೆದು ನೋಡಿ ಇದರ ಫಲ 10 ದಿಕ್ಕುಗಳಲ್ಲಿ ಪ್ರತಿಧ್ವನಿಸುತ್ತದೆ. ಗುರುರಾಯರು ಪೂರ್ಣವಾಗಿ ನಿಮಗೆ ಅನುಗ್ರಹವನ್ನು ಮಾಡುತ್ತಾರೆ. ಆದರೆ ಯಾವ ಕ್ಷಣದಲ್ಲಿಯೂ ರಾಮದೇವರನ್ನು ಹನುಮ ದೇವರನ್ನು ಗುರುರಾಯರನ್ನು ಮರೆಯಬೇಡಿ. ಒಂದು ಪುಸ್ತಕದಲ್ಲಿ 1008 ಬಾರಿ ಶ್ರೀ ರಾಘವೇಂದ್ರ ಎಂದು ಬರೆಯಬಹುದು . ಒಂದು ಪುಸ್ತಕಕ್ಕೆ ಹತ್ತು ರೂಪಾಯಿ ಆಗುತ್ತದೆ. ನೀವು ಕನಿಷ್ಠ 25 ಪುಸ್ತಕಗಳನ್ನು ತೆಗೆದುಕೊಳ್ಳಬೇಕು. ಕೊರಿಯರ್ ಚಾರ್ಜಸ್ ಎಲ್ಲವನ್ನು ಸೇರಿಸಿ 350 ಹಣವನ್ನು ಹಾಕಿದರೆ 25 ಪುಸ್ತಕಗಳನ್ನು ಕಳುಹಿಸುತ್ತೇವೆ. 50 ಪುಸ್ತಕಗಳಿಗೆ 600 ಆಗುತ್ತದೆ, 100 ಪುಸ್ತಕಕ್ಕೆ ಸಾವಿರದ ನೂರು ರೂಗಳು ಆಗುತ್ತವೆ. 25 ಅಥವಾ 50 ಪುಸ್ತಕಗಳನ್ನು ತರಸಿಕೊಂಡರೆ ಪುನಃ ತರಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ನೀವು ಒಟ್ಟಿಗೆ ನೂರು ನಾಮ ಲೇಖನಗಳನ್ನು ಆರ್ಡರ್ ಮಾಡುವುದರಿಂದ ನಿಮಗೂ ಹಾಗೂ ನಮಗೂ ಬಹಳ ಅನುಕೂಲವಾಗುತ್ತದೆ. ಮತ್ತು ನಿಮ್ಮ ಹೆಸರನ್ನು ಬರೆದಿಟ್ಟುಕೊಳ್ಳಲು ನಮಗೂ ಲೆಕ್ಕ ಸಿಗುತ್ತದೆ ‌ . ಆದ್ದರಿಂದ ನೂರು ಪುಸ್ತಕಗಳಿಗೆ ಒಟ್ಟಿಗೆ ಆರ್ಡರ್ ಮಾಡಿರಿ. 8861983526 ಈ ನಂಬರಿಗೆ GPay phone pay ಮೂಲಕ ಹಣವನ್ನು ಹಾಕಿದ ಮೇಲೆ ಅದರ ರಶೀತಿಯನ್ನು ನಮಗೆ ಶೇರ್ ಮಾಡಿ. ಅನಂತರ ನಿಮಗೆ ಅಡ್ರೆಸ್ ಫಿಲ್ ಮಾಡಲು ಗೂಗಲ್ ಫಾರಂ ಕಳುಹಿಸುತ್ತೇವೆ . Professional ಕೊರಿಯರ್ ಮೂಲಕ ಐದು ದಿವಸಗಳಲ್ಲಿ ನಿಮಗೆ ಪುಸ್ತಕಗಳು ತಲುಪುತ್ತವೆ. ಶುಭಮಸ್ತು. ಶ್ರೀ ರಾಘವೇಂದ್ರ ಮಂತ್ರ ಮಂದಿರ ಹೊಸಕೆರೆಹಳ್ಳಿ ಬೆಂಗಳೂರು