Actor Chikkanna Testimony Darshan Case : ದರ್ಶನ್ ಕೇಸ್.. ಕಟಕಟೆಯಲ್ಲಿ ನಟ ಚಿಕ್ಕಣ್ಣ ಗಾಬರಿ..
TV5 Kannada
0:00 / 0:00
Actor Chikkanna Testimony Darshan Case : ದರ್ಶನ್ ಕೇಸ್.. ಕಟಕಟೆಯಲ್ಲಿ ನಟ ಚಿಕ್ಕಣ್ಣ ಗಾಬರಿ..
15 962 просмотра · Трансляция закончилась 17 часов назад
TV5 Kannada
2,73 млн подписчиков
15 962 просмотра · Трансляция закончилась 17 часов назад
Actor Chikkanna Testimony Darshan Case : ದರ್ಶನ್ ಕೇಸ್.. ಕಟಕಟೆಯಲ್ಲಿ ನಟ ಚಿಕ್ಕಣ್ಣ ಗಾಬರಿ.. | @tv5kannada
ಸ್ಯಾಂಡಲ್ವುಡ್ ಹೈಪ್ರೊಫೈಲ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 59ನೇ ಸಿಸಿಎಚ್ (CCH) ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯು ತೀವ್ರ ಕುತೂಹಲ ಹಾಗೂ ರೋಚಕ ತಿರುವುಗಳನ್ನು ಪಡೆದುಕೊಂಡಿದೆ.
ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಅವರು ಇಂದು ನ್ಯಾಯಾಲಯದ ಕಟಕಟೆಗೆ ಆಗಮಿಸಿ ತಮ್ಮ ಸಾಕ್ಷ್ಯ ನುಡಿಯುವ ಪ್ರಕ್ರಿಯೆಯಲ್ಲಿ ಭಾಗಿಯಾದರು.
ನ್ಯಾಯಾಲಯದ ಕೊಠಡಿಗೆ ಬಂದ ಕೂಡಲೇ ನಟ ಚಿಕ್ಕಣ್ಣ ಅವರು ತೀವ್ರ ಟೆನ್ಷನ್ ಹಾಗೂ ಆತಂಕಕ್ಕೆ ಒಳಗಾಗಿದ್ದು ಕಂಡುಬಂದಿತು.
ಮಾತು ಮಾತಿಗೂ ಗಾಬರಿಯಾಗುತ್ತಿದ್ದ ಚಿಕ್ಕಣ್ಣ ಅವರನ್ನು ಕಂಡು ಎಚ್ಚೆತ್ತ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಅವರು, "ನೀವೇನು ಟೆನ್ಷನ್ ಆಗಬೇಡಿ, ನೀವು ಯಾವುದೇ ಕ್ರೈಂ ಮಾಡಿಲ್ಲ" ಎಂದು ಧೈರ್ಯ ತುಂಬಲು ಯತ್ನಿಸಿದರು.
ನಂತರ ಕಷ್ಟಪಟ್ಟು ಕೆಲವು ಮಾತುಗಳನ್ನು ಆಡಿದ ನಟ ಚಿಕ್ಕಣ್ಣ, ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ನಲ್ಲಿ ನಡೆದ ಊಟದ ಕೂಟದ ಬಗ್ಗೆ ಹಾಗೂ ಅಂದು ಅಲ್ಲಿದ್ದವರ ಕುರಿತು ಹೇಳಿಕೆ ನೀಡಲು ಆರಂಭಿಸಿದರು.
ನಟ ದರ್ಶನ್ ತನಗೆ ಕಳೆದ 10-15 ವರ್ಷಗಳಿಂದ ಪರಿಚಿತರು ಎಂದು ತಿಳಿಸಿದ ಅವರು, ಕಪ್ಪು ಶರ್ಟ್ ಧರಿಸಿದ್ದ ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ಗುರುತಿಸಿದರು. ಅಲ್ಲದೆ, ದರ್ಶನ್ ಜೊತೆ ತಾವು 3-4 ಸಿನಿಮಾಗಳಲ್ಲಿ ನಟಿಸಿರುವುದಾಗಿ ಮತ್ತು ವಿನಯ್ ಹಾಗೂ ಪ್ರದೋಷ್ ಅವರನ್ನು ಸಹ ಗುರುತಿಸಿದರು.
ಆದರೆ, ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ನಲ್ಲಿ ನಡೆದ ಘಟನೆಗಳ ವಿಚಾರ ಪ್ರಸ್ತಾಪವಾದಾಗ ಚಿಕ್ಕಣ್ಣ ಮತ್ತಷ್ಟು ಆತಂಕಕ್ಕೊಳಗಾಗಿ, ತಮಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಸುಮಾರು 15 ನಿಮಿಷಗಳ ಕಾಲ ವಿಶ್ರಾಂತಿ ನೀಡಿತ್ತು. ಆದರೂ ವಿಶ್ರಾಂತಿ ಬಳಿಕವೂ ಚಿಕ್ಕಣ್ಣ ಅವರ ಮಾನಸಿಕ ಒತ್ತಡ ಹಾಗೂ ನಡುಕ ಕಡಿಮೆವಾಗದ ಕಾರಣ, ನ್ಯಾಯಾಲಯವು ಇಂದಿನ ಸಾಕ್ಷ್ಯ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ.
In a dramatic turn of events during the ongoing trial of the high-profile Renukaswamy murder case at the 59th CCH Court in Bengaluru, popular Kannada comedian and actor Chikkanna appeared before the judge as a prosecution witness.
Visibly nervous and under immense stress inside the witness box, Chikkanna struggled to depose comfortably, prompting the Special Public Prosecutor to reassure him that he had nothing to fear as he was not an accused.
With considerable effort, Chikkanna recalled visiting the Stony Brooks restaurant, identifying actor Darshan—who was wearing a black shirt—along with Pavithra Gowda and associates Vinay and Pradosh whom he had known for years.
However, as questioning turned to the specifics of the gathering, Chikkanna grew increasingly distressed and stated he was unable to speak further due to extreme anxiety.
Following a 15-minute recess granted by the court, his discomfort persisted, leading the bench to adjourn the witness examination to a later date.
#Chikkanna #DarshanCase #RenukaswamyMurderCase #59thCCHCourt #StonyBrooksParty #SandalwoodNews #ActorChikkannaTestimony #BreakingNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬