ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು | ಗೀತಭಾರತಿ | ಉಮೇಶ ಮುಂಡಳ್ಳಿ | ದೇಶಭಕ್ತಿಗೀತೆ
Rama Heble
0:00 / 0:00
ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು | ಗೀತಭಾರತಿ | ಉಮೇಶ ಮುಂಡಳ್ಳಿ | ದೇಶಭಕ್ತಿಗೀತೆ
93 764 просмотра · 6 л. назад
Rama Heble
2,26 тыс. подписчиков
93 764 просмотра · 6 л. назад
ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು
ನಮ್ಮೀ ತಾಯ್ನೆಲವು
ದೇವೀ ನಿನ್ನಯ ಸೊಬಗಿನ ಮಹಿಮೆಯ ಬಣ್ಣಿಸಲಸದಳವು ||ಪ||
ಧವಳ ಹಿಮಾಲಯ ಮುಕುಟದ ಮೆರುಗು
ಕಾಲ್ತೊಳೆಯುತಲಿದೆ ಜಲಧಿಯ ಬುರುಗು
ಗಂಗಾ ಬಯಲಿದು ಹಸಿರಿನ ಸೆರಗು
ಕಣಕಣ ಮಂಗಲವು ನಮ್ಮೀ ತಾಯ್ನೆಲವು ||೧||
ಕಾಶಮೀರದಲಿ ಸುರಿವುದು ತುಹಿನ
ರಾಜಸ್ಥಾನದಿ ಸುಡುವುದು ಪುಲಿನ
ಮಲಯಾಚಲದಲಿ ಗಂಧದ ಪವನ
ವಿಧವಿಧ ಹೂ ಫಲವು ನಮ್ಮೀ ತಾಯ್ನೆಲವು ||೨||
ಹಲವು ಭಾಷೆ ನುಡಿ ಲಿಪಿಗಳ ತೋಟ
ವಿವಿಧ ಪಂಥ ಮತಗಳ ರಸದೂಟ
ಕಾಣಲು ಕಾಮನಬಿಲ್ಲಿನ ನೋಟ
ಬಗೆಬಗೆ ಸಂಕುಲವು ನಮ್ಮೀ ತಾಯ್ನೆಲವು ||೩||
ಪುಣ್ಯವಂತರಿಗೆ ಇದುವೆ ನಾಕ
ಖಳರಿಗೆ ಆಗಿದೆ ಶಿವನ ಪಿನಾಕ
ಶರಣಾಗತರಿಗೆ ಆಭಯದಾಯಕ
ಯುಗುಯುಗದೀ ನಿಲವು ನಮ್ಮೀ ತಾಯ್ನೆಲವು ||೪||
ಗಂಗೆ ತುಂಗೆಯರ ಅಮೃತ ಸ್ತನ್ಯ
ಕುಡಿಸುತ ಮಾಡಿದೆ ಜೀವನ ಧನ್ಯ
ಮುಡಿಪಿದು ಬದುಕು ನಿನಗೆ ಅನನ್ಯ ||೫||
Background Video Credit: • No Copyright Video, Background, Green Scre...
Email: gnrhsdbrbkl@gmail.com
Facebook Page: / 1afcvrerap
#Dharegavathariside
#geethabharathi #RamaHeble #UmeshMundalli #geethaganga