Перейти к содержимому

ಬೆಳ್ಳಂಬೆಳಗ್ಗೆ ಹಾಸಿಗೆಯ ಮೇಲೆ ನಾಗರಹಾವು – ಎದೆ ಝಲ್ಲೆನಿಸುವ ದೃಶ್ಯ!

DC News kannada Gundlupete

0:00 / 0:00

ಬೆಳ್ಳಂಬೆಳಗ್ಗೆ ಹಾಸಿಗೆಯ ಮೇಲೆ ನಾಗರಹಾವು – ಎದೆ ಝಲ್ಲೆನಿಸುವ ದೃಶ್ಯ!

2 299 просмотров · 2 месяца назад
DC News kannada Gundlupete
761 подписчик
2 299 просмотров · 2 месяца назад
ಹಾಸಿಗೆ ಮೇಲೆ ಮಲಗಿದ್ದ ನಾಗರಹಾವು ಸೆರೆ – ಕಗ್ಗಳದಹುಂಡಿಯಲ್ಲಿ ಎದೆ ಝಲ್ಲೆನಿಸುವ ದೃಶ್ಯ ಗುಂಡ್ಲುಪೇಟೆ: ತಾಲೂಕಿನ ಕಗ್ಗಳದಹುಂಡಿ ಗ್ರಾಮದ ಮನೆಯೊಂದರಲ್ಲಿ ಬೆಳ್ಳಂಬೆಳಗ್ಗೆ ಹಾಸಿಗೆಯ ಮೇಲೆಯೇ ಬೃಹತ್ ನಾಗರಹಾವು ಕಂಡು ಕುಟುಂಬಸ್ಥರು ಆತಂಕಕ್ಕೊಳಗಾದ ಘಟನೆ ನಡೆದಿದೆ. ಮನೆಯವರು ಹಾಸಿಗೆಯ ಮೇಲೆ ನಾಗರಹಾವು ಮಲಗಿರುವುದನ್ನ ಗಮನಿಸಿದ ತಕ್ಷಣ ಗಾಬರಿಗೊಂಡು ಉರಗ ರಕ್ಷಕ ಪಟ್ಟಣದ ಸ್ನೇಕ್ ಸ್ವಾಮಿ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ವಾಮಿ ಅವರು ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ಬಳಿಕ ನಾಗರಹಾವನ್ನ ಯಾವುದೇ ಅಪಾಯವಾಗದಂತೆ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.