Перейти к содержимому

Sri Maheshwaramma Devi 04 Varshikotsava 24-08-2026

RAKESH PHOTOGRAPHY

0:00 / 0:00

Sri Maheshwaramma Devi 04 Varshikotsava 24-08-2026

13 просмотров · 5 дн. назад
RAKESH PHOTOGRAPHY
2 подписчика
13 просмотров · 5 дн. назад
ಶುಭಮಸ್ತು ಶ್ರೀ ಮಹೇಶ್ವರಮ್ಮ ದೇವಿ ಪ್ರಸನ್ನ ಅವಿಘ್ನು ಮಸ್ತು ಓಂ ದಂಷ್ಟಕರಾಲ ವಧನೇ ಶಿರೋಮಾಲ ವಿಭೂಷಿಣೇ! ಚಾಮುಂಡೇ ಮುಂಡ ಮಥನೇ ನಾರಾಯಣೇ ನಮೋಸ್ತುತೇ!! ಶ್ರೀ ಮಹೇಶ್ವರಮ್ಮ ದೇವಸ್ಥಾನ ರೈಲ್ವೆ ಸ್ಟೇಷನ್ ತೊಂಡೇಭಾವಿ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. ಶ್ರೀ ಆದಿಶಕ್ಷಾತ್ಮಕ ಶ್ರೀ ಮಹೇಶ್ವರಮ್ಮದೇವಿಯ 4ನೇ ವರ್ಷದ ವಾರ್ಷಿಕೋತ್ಸವ ಮಹೋತ್ಸವದ ಆಹ್ವಾನ ಪತ್ರಿಕೆ ಭಕ್ತ ಮಹಾಶಯರೇ, ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1948 ಕ್ಕೆ ಸರಿಯಾದ ಶ್ರೀ ಪರಾಭವ ನಾಮ ಸಂವತ್ಸರೇ ದಕ್ಷಿಣಾಯನೇ ವರ್ಷ ಋತೌ ಶ್ರಾವಣಮಾಸೇ ಶುಕ್ಲ ಪಕ್ಷ ದ್ವಾದಶಿ ದಿನಾಂಕ 24-08-2026 ನೇ ಸೋಮವಾರ ಮತ್ತು ತ್ರಯೋದಶಿ ದಿನಾಂಕ 25-08-2026 ನೇ ಮಂಗಳವಾರ ದವರೆಗೆ ನಡೆಯಲಿರುವ ಶ್ರೀ ಮಹೇಶ್ವರಿ ಅಮ್ಮನವರ 4ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಸದ್ಭಕ್ತ ಮಹಾಶಯರೆಲ್ಲರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು, ಮನ, ಧನ ಸಹಾಯ ಮಾಡಿ ದೇವತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ತಮ್ಮಲ್ಲಿ ಸವಿನಯ ಪ್ರಾರ್ಥನೆ. ದೇ ಶೋಯಂ ಕೋಭ ರಹಿತಂ ಸಜ್ಜನಾಸ್ಸಂತು ನಿರ್ಭಯಾಃ ಸರ್ವೆ ಜನಾಃ ಸುಖೀ ನೋ ಭವಂತು ತೊಂಡೇಭಾವಿ ರೈಲ್ವೆ ನಿಲ್ದಾಣ, ಬೆಳಚಿಕ್ಕನಹಳ್ಳಿ, ಪಿಂಜಾರಹಳ್ಳಿ, ತೊಂಡೇಭಾವಿ ಹಾಗೂ ಸುತ್ತಮುತ್ತಲ ಸಮಸ್ತ ಗ್ರಾಮಸ್ಥರಿಂದ ಸರ್ವರಿಗೂ ಆದರದ ಸುಸ್ವಾಗತ ಕಾರ್ಯಕ್ರಮಗಳು ದಿನಾಂಕ 24-08-2026 ಸೋಮವಾರ ಗೋಧೂಳಿ ಲಗ್ನದಲ್ಲಿ ಅಶೋಧಕ ಹರಣ (ಗಂಗಾಭವಾನಿ) ಪೂಜೆಯನ್ನು ನೆರವೇರಿಸಿಕೊಂಡು ದೇವಾಲಯ ಪ್ರವೇಶ, ಪಂಚಸೂಕ್ತಪಾರಾಯಣ, ಶ್ರೀ ಕ್ಷೇತ್ರ ದೇವತಾ ಪ್ರಾರ್ಥನೆ, ಶ್ರೀ ದೀಪದುರ್ಗಾ ಆರಾಧನೆ, ಮಹಾಸಂಕಲ್ಪ ಶ್ರೀ ಮಹಾಗಣಪತಿ ಪೂಜೆ ಸ್ವಸ್ತಿಪುಣ್ಯ:ವಾಚನ ರಕ್ಷಾಕಂಕಣಧಾರಣೆ, ಶ್ರೀ ದೇವನಾಂದಿ, ಆಚಾರ್ಯ ಋತ್ವಿಕ್ ವರಣ, ಆದಿತ್ಯಾದಿ ನವಗ್ರಹ ದೇವತಾ ಆರಾಧನೆ, ಅಷ್ಟದಿಕ್ಷಾಲಕ ದೇವತಾ ಪೂಜೆ, ಕರ್ಮ ಸಾದ್ಗುಣ್ಯ ದೇವತಾಪೂಜೆ ಆವಾಹಿತ ಕಲಶದಾವತಾ ಪೂಜೆ, ಪ್ರದಾನ ಕಲಶದೇವತಾ ಪೂಜೆ, ಅಗ್ನಿಸ್ಥಾಪನೆ, ಶ್ರೀ ಮಹಾಗಣಪತಿ ಹೋಮ, ವಾಸ್ತುಹೋಮ, ರಾಕೋಷ್ಟು ಹೋಮ, ಲಘು ಪೂರ್ಣಾಹುತಿ ನಂತರ ವಿಷೇಶವಾಗಿ ಸಂಜೆ 7-00 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಸಹಸ್ರ ಕುಂಕುಮಾರ್ಚನೆಯನ್ನು ಏರ್ಪಡಿಸಲಾಗಿದೆ. ಕಲೌದುರ್ಗಾ ವಿನಾಯಕೌ ಕ್ಷಿಪ್ರ ಪಲದಾಯಕೌ ಎಂಬ ಉಕ್ತಿಯಂತೆ ಕಲಿಯುಗದಲ್ಲಿ ದುರ್ಗಾ ವಿನಾಯಕರು ಶ್ರೀ ಫ್ರುವಾಗಿ ಫಲವನ್ನು ಕೊಡುವಂತಹ ದೇವತೆಗಳು ಆಗಿದ್ದಾರೆ ದುರ್ಗಾ ದುರ್ಗಾತಿನಾಶಿನಿ ಎಂಬಂತೆ ಸಕಲ ದುರಿತಗಳನ್ನು ನಾಶಮಾಡುವ ಸಕಲ ಸಂಪತ್ಪದವೂ ಪ್ರತಿಬಂಧಕ ದೋಷಗಳು, ಶತ್ರುಬಾಹಾದೋಷ, ಇನ್ನೂ ಅನೇಕ ದೋಷಗಳ ಪರಿಹಾರಕ್ಕೆ ಮಾರ್ಗವಾಗಿರುವ ಶೀಘ್ರ ಫಲಪ್ರದವೂ ಆದ ಶ್ರೀ ದೇವಿಯ ಮೂಲಮಂತ್ರದಿಂದ ಸಹಸ್ರಕುಂಕುಮಾರ್ಚನೆಯನ್ನು ನೆಡೆಸಲು ಸಂಕಲ್ಪಸಿದ್ದೇವೆ ಆದ್ದರಿಂದ ನಾವೆಲ್ಲರೂ ಈ ಪರಮಪಾವನ ವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುನೀತರಾಗೋಣ. ದಿನಾಂಕ 25-08-2026 ಮಂಗಳವಾರ ಬೆಳಿಗ್ಗೆ ಬ್ರಾಹ್ಮ ಮುಹೂರ್ತದಲ್ಲಿ ಶ್ರೀ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಶ್ರೀ ಮಹಾಗಣಪತತಿ ಹೋಮ, ಆದಿತ್ಯಾದಿ ನವಗ್ರಹ ಹೋಮ, ಅಷ್ಟದಿಕ್ಷಾಲಕ ಹೋಮ, ಕರ್ಮಸಾದ್ಗುಣ್ಯ ಹೋಮ, ಸಪ್ತಮಾತೃಕಾ ಹೋಮ, ನವದುರ್ಗಾಹೋಮ, ಸರ್ವಶಕ್ತಿ ಕಳಾಹೋಮ, ತಂತ್ರಕ್ತ ದೇವಿ ಹೋಮ, ಶ್ರೀ ಅಮ್ಮನವರ ಮೂಲಮಂತ್ರ ಹೋಮ, ದೇವಾಲಯ ಸರ್ವದೇವತಾ, ಬಲಿಹರಣ, ಜಯಾದಿ ಹೋಮ, ಪ್ರಾಯಶ್ಚಿತ್ತ ಹೋಮ, ಮಹಾಪೂರ್ಣಾಹುತಿ, ದೇನುದೃಷ್ಟಿ, ರಂಭಾಛೇಧನ, (ಕದಲೀ ಛೇಧನ) ಕುಂಷ್ಮಾಂಡ ಸೋಟನ, ಅಷ್ಟೋತ್ತರ ಶತನಾಮ ಕುಂಕುಮಾರ್ಚನೆ, ಅಷ್ಠಾವಧಾನ ಸೇವೆ, ಮಹಾಮಂತ್ರಪುಷ್ಪ, ಬೆಳಿಗ್ಗೆ 11-30 ರಿಂದ 12-00 ಗಂಟೆಗೆ ಮಹಾ ಮಂಗಳಾರತಿ ಮಧ್ಯಾಹ್ನ 1-00 ಗಂಟೆಗೆ ತೀರ್ಥಪ್ರಸಾದ ವಿನಿಯೋಗ. : ಅದ್ವಾರ್ಯರು: ವೇ.ಬ್ರ.ಶ್ರೀ ರಾಜೇಶ್ ಆಚಾರ್ಯರು ವೇ.ಬ್ರ.ಶ್ರೀ ನಾಗೇಂದ್ರ ಕುಮಾರ್ ಆಚಾರ್ಯರು ವೇ.ಬ್ರ.ಶ್ರೀ ಅರವಿಂದಾ ಆಚಾರ್ಯರು ಶೈವಾಗಮ ಪ್ರವೀಣಾ ವೇ. ಬ್ರ. ಶ್ರೀ ಹರ್ಷಿತಾ ಆಚಾರ್ಯರು ಎಂ.ಎ. ಶಕ್ತಿ ವಿಶಿಷ್ಠಾದೈತ ವೇದಾಂತ ವಿದ್ವತ್, ಎಂ. ಕಾಳೇನಹಳ್ಳಿ ಇವರ ಪ್ರಧಾನ ಆಚಾರ್ಯತ್ವದಲ್ಲಿ ಕಾರ್ಯಕ್ರಮ ನೆರವೇರುತ್ತದೆ. : ಪ್ರಧಾನ ಅರ್ಚಕರು: ಬ್ರ.ಶ್ರೀ ಪದ್ಮನಾಭಾಚಾರ್ ಜಿ.ಎನ್., ರೈಲ್ವೆ ನಿಲ್ದಾಣ, ತೊಂಡೇಭಾವಿ ದೇ ಶೋಯಂ ಕೋಭ ರಹಿತಂ ಸಜ್ಜನಾಸ್ಸಂತು ನಿರ್ಭಯಾಃ ಸರ್ವೆ ಜನಾಃ ಸುಖೀ ನೋ ಭವಂತು ತೊಂಡೇಭಾವಿ ರೈಲ್ವೆ ನಿಲ್ದಾಣ, ಬೆಳಚಿಕ್ಕನಹಳ್ಳಿ, ಪಿಂಜಾರಹಳ್ಳಿ, ತೊಂಡೇಭಾವಿ ಹಾಗೂ ಸುತ್ತಮುತ್ತಲ ಸಮಸ್ತ ಗ್ರಾಮಸ್ಥರಿಂದ ಸರ್ವರಿಗೂ ಆದರದ ಸುಸ್ವಾಗತ.