Перейти к содержимому

Dharmika Prashnottara - Episode -1

Mantralaya Vahini

0:00 / 0:00

Dharmika Prashnottara - Episode -1

8 183 просмотра · 2 года назад
Mantralaya Vahini
128 тыс. подписчиков
8 183 просмотра · 2 года назад
Dharmika Prashnottara - Episode -1 ಶ್ರೀಮನ್ಮೂಲರಾಮೋ ವಿಜಯತೇ ಶ್ರೀಗುರುರಾಜೋ ವಿಜಯತೇ ಶ್ರೀಹಂಸನಾಮಕ ಪರಮಾತ್ಮನ, ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲಮಹಾಸಂಸ್ಥಾನ ಶ್ರೀರಾಘವೇಂದ್ರಸ್ವಾಮಿಗಳಮಠ ಮಂತ್ರಾಲಯ ಶ್ರೀಮಠದ ಶಿಷ್ಯರು ಹಾಗೂ ಭಕ್ತರ ಅವಗಾಹನೆಗಾಗಿ ಪ್ರಸ್ತುತಪೀಠಾಧಿಪತಿಗಳಾದ ಪರಮಪೂಜ್ಯ 1008 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಅನೇಕ ಶಿಷ್ಯರು ಹಾಗೂ ಭಕ್ತರ ಅಪೇಕ್ಷೆ ಮೇರೆಗೆ ಆನ್ಲೈನ್ ಪ್ರಶ್ನೋತ್ತರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ . ಅದರ ವಿವರಣೆ ಈ ಕೆಳಗಿನಂತೆ ಇದೆ . 1. ಪ್ರಶ್ನೋತ್ತರಗಳು ಶಾಸ್ತ್ರ, ಮಂತ್ರಾಲಯ ಶ್ರೀಮಠದ ಸಂಪ್ರದಾಯ, ಕೃಷ್ಣಾಚಾರ್ಯಕೃತ ಸ್ಮೃತಿಮುಕ್ತಾವಳೀ ಗ್ರಂಥ ಮತ್ತು ಇತರ ಗ್ರಂಥಗಳ ಚೌಕಟ್ಟಿನಲ್ಲಿ ಇರುತ್ತವೆ. ಪ್ರಕೃತ ಪ್ರಾರಂಭದ ಹಂತದಲ್ಲಿ ಕೇವಲ ಕನ್ನಡಭಾಷೆಯಲ್ಲಿ ಮಾತ್ರ ಇರುತ್ತದೆ. 2. ಈ ಕಾರ್ಯಕ್ರಮವು ಪ್ರತಿ ಭಾನುವಾರ ಸಾಯಂಕಾಲ 7 ರಿಂದ 8 ಗಂ. ವರೆಗೆ ಇರುತ್ತದೆ. 3. ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀಗಳವರು ಮತ್ತು ವಿದ್ವಾನ್ಮಣಿಗಳಾದ ಶ್ರೀಗಿರಿಯಾಚಾರ್ಯರು ಉತ್ತರದಾಯಿಗಳಾಗಿರುತ್ತಾರೆ. ಪ್ರಾಶ್ನಿಕರಾಗಿ ಎನ್ ವಾದಿರಾಜಾಚಾರ್ಯ ಎಂಬ ವಿದ್ವಾಂಸರು ಇರುತ್ತಾರೆ 4. ಈ ಪ್ರಶ್ನೋತ್ತರಗಳಲ್ಲಿ ಆಯ್ದ ಪ್ರಶ್ನೋತ್ತರಗಳನ್ನು ಶ್ರೀಮಠದ ಮುಖಪತ್ರಿಕೆಯಾದ ಶ್ರೀಗುರುಸಾರ್ವಭೌಮ ಮಾಸಪತ್ರಿಕೆಯಲ್ಲಿ ಪ್ರಶ್ನೆ ಕೇಳಿದವರ ಹೆಸರಿನೊಂದಿಗೆ ಪ್ರಕಟಿಸಲಾಗವುದು. 5. ಈ ಪ್ರಶ್ನೋತ್ತರ ಕಾರ್ಯಕ್ರಮವು 31/12/2023 ರಂದು ಪ್ರಾರಂಭಿಸಲಾಗುವುದು. 6. ಅಪೇಕ್ಷಿತರು ಮಂತ್ರಾಲಯ ವಾಹಿನಿ (Mantralaya Vahini) ಯುಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು.