ಸತ್ಯನಾರಾಯಣ ವ್ರತ ಕಥೆ ಹಾಡು| Satyanarayana Vratha Kathe Haadu (song) | Lakshmi Muralidhar
Lakshmi Muralidhar
0:00 / 0:00
ಸತ್ಯನಾರಾಯಣ ವ್ರತ ಕಥೆ ಹಾಡು| Satyanarayana Vratha Kathe Haadu (song) | Lakshmi Muralidhar
589 просмотров · 1 год назад
Lakshmi Muralidhar
1,97 тыс. подписчиков
589 просмотров · 1 год назад
ಸಂಯೋಜನೆ :- ಬಿ ಚಿದಂಬರ ಜೋಯಿಸ್
ಗಾಯನ :- ಲಕ್ಷ್ಮೀ ಮುರಳೀಧರ
ಜಯ ಸತ್ಯನಾರಾಯಣ ಜಯ ಸತ್ಯಭಾಮೇಶ ಜಯಸತ್ಯ ಗಣಪತಿಯ ಜಯತು ಜಯತು.
ನೈಮಿಷಾರಣ್ಯದಲಿ ಶೌನಕಾದಿಗಳೊಮ್ಮೆ
ಪ್ರೇಮದಿಂ ಸೂತರನು ಕೇಳಲಾಗ
ಭೂಮಿಯಲಿ ಬಳಲುತಿಹ ಕಲಿಯುಗದ ಜನಗಳಿಗೆ ಕಾಮಿತವ ನೀವೊಂದು ವ್ರತವ ಹೇಳಿದರು.
ವ್ರತವಿಹುದು ಸತ್ಯನಾರಾಯಣನ ಪೂಜೆಯದು ಸತತ ಕಷ್ಟವನೆಲ್ಲ ಪರಿಹರಿಸುವುದದು ಕಂತುಪಿತ ನಾರದಗೆ ಪೇಳಿದನು ಮೊದಲಿದನು ಚಿಂತಿಸಿದ ಫಲಗಳನು ಕೊಡುವುದಿದುವೆ.
ಭಕ್ತಿಯಿಂದರ್ಚಿಸುತೆ ಸತ್ಯನಾರಾಯಣನ
ಉಕ್ತ ವಿಧಿಯಮ್ ಬಿಡದೆ ವರುಷ ನಾಲ್ಕರೊಳು ಶಕ್ತಿಯಿಂದಾಚರಿಸೆ ನಿಯಮದುಧ್ಯಾಪನೆಯ
ಮುಕ್ತಿಯನು ಸುಲಭದಲೆ ಪಡೆಯಬಹುದು.
ವಿಪ್ರನೋರ್ವನು ಭಿಕ್ಷೆಯಿಂದ ಜೀವಿಸುತಿರಲು
ವಿಪ್ರವೇಶದಿ ಬಂದು ಕಾರುಣ್ಯಸಿಂಧು ಅಪ್ರಮೇಯನು ಪೇಳಲೀ ವ್ರತವನಾಚರಿಸಿ ಕ್ಷಿಪ್ರದಲಿ ಸಂಪದವ ಪಡೆದನಂದು.
ವಿಪ್ರನೀ ಪರಿಯಲ್ಲಿ ವ್ರತವನಾಚರಿಸುತಿರೆ
ಕಾಷ್ಠ ವಿಕ್ರಯಿಯೋರ್ವ ನೀರಡಿಸಿ ಬಂದು ಹೊತ್ತ ಸೌದೆಯ ಹೊರೆಯ ನಿಳುಹಿ ಪೂಜೆಯ ಕಂಡು ವಿಧಿಯನೆಲ್ಲವ ಕೇಳ ತಾ ಮಾಡಲೆಂದು.
ಸಂಕಲ್ಪವಂ ಮಾಡಿ ಕಟ್ಟಿಗೆಯ ಮಾರುತಲಿ ದ್ವಿಗುಣ ಧನವನು ಪಡೆದು ಭಕ್ತಿಯಿಂದ ಸತ್ಯನಾರಾಯಣನ ಪೂಜಿಸುತಲಿಹಪರದ ಸಕಲ ಸೌಖ್ಯಗಳನ್ನು ಪಡೆದನಾಗ.
ರಾಜನುಲ್ತಾಮುಖನು ಸಂತತಿಯ ಬಯಸುತಲಿ
ವ್ರತವನಾಚರಿಸುತಿರೆ ವರ್ತಕನು ಕಂಡು ಮಕ್ಕಳಾದರೆ ತಾನು ವ್ರತವ ಮಾಡುವೆನೆಂದು ಹರಕೆಯನು ಹೊತ್ತನಾ ಸೆಟ್ಟಿ ಮನದೊಳಗೆ.
ಸತಿಯು ಲೀಲಾವತಿಯು ಗರ್ಭವನು ತಳೆದಳ್ಳೆ ಸತ್ಯನಾರಾಯಣನ ಕರುಣೆಯಿಂದ ಕನೈಯನು ಪಡೆದಳಾ ಶಿಶು ಕಲಾವತಿಯೆಂದು ಶುಕ್ಲ ಶಶಿಯಂದದಲಿ ಬೆಳೆದಳಾಗ.
ವರ್ಷ ತುಂಬಲಿಯೆಂದು ಮದುವೆ ಸಮಯದೊಳೆಂದು
ವ್ರತವ ಮುಂದೂಡುತಲಿ ಮರೆತನಾಗ
ಸತ್ಯದೇವನು ತಾನು ಧನಮದವನಿಳಿಸಲ್ಲೆ
ಶಪಿಸಿದನು ದಾರುಣದ ಕಷ್ಟ ಬರಲೆಂದು
ವಾಣಿಜ್ಯ ವೃತ್ತಿಯಿಂ ರತ್ನಸಾರಾಪುರಕೆ
ಅಳಿಯನೊಂದಿಗೆ ತೆರಳಿ ದುಡಿಯುತಿರಲು ನೃಪಚಂದ್ರ ಕೇತುವಿನ ಧನವ ಜೋರನು ಕದ್ದು ತಂದಿವರ ಬಳಿಯಿರಿಸಿ ಕಾಣದಾದ.
ರಾಜದೂತರು ಬಂದು ಬಂಧಿಸಿದರೀರ್ವರನು ದೇವಮಾಯೆಯೊಳವರ ಮಾತನಾಲಿಸದೆ ಸೆರೆಯೊಳಿಟ್ಟರು ಸಕಲ ಧನಕನಕ ವಸ್ತುಗಳ ಬೊಕ್ಕಸಕೆ ಸುರಿದರೆಲೆ ಲೆಕ್ಕವಿಲ್ಲದಲೆ.
ಇತ್ತ ಲೀಲಾವತಿಯ ಮನೆಗೆ ಕಳ್ಳರು ಹೊಕ್ಕು
ವಿತ್ತವನ್ನಪಹರಿಸೆ ತಿರಿದು ತಿನ್ನುತಲಿ ಬಳಲುತಿರೆ ಮಗಳೊಮ್ಮೆ ತಾ ಕಂಡ ಪೂಜೆಯನು ವಿವರಿಸಲು ನೆನೆದ ವ್ರತವ ಬಿಟ್ಟುದನು.
ತಾಯಿ ಮಗಳಿಬ್ಬರು ಭಕ್ತಿಯಿಂ ಪೂಜಿಸುತೆ
ತಮ್ಮಯಪರಾಧಗಳ ಮನ್ನಿಸುದು ಎಂದು ತಮ್ಮ ಪತಿಗಳು ಬರಲು ವ್ರತವ ಮಾಡುವೆವೆಂದು ಬೇಡೆದಯ ದೋರಿದನು ಕಾರುಣ್ಯ ಸಿಂಧು.
ಅತ್ತ ಸೆರೆಯೊಳಗಿಟ್ಟ ಬಂಧಿಗಳನೀರ್ವರನು
ಬಿಡುತವರ ಧನವ ಕೊಡು ಎಂದು ಕನಸಿನಲಿ ಪ್ರಭು ಪೇಳೆ ನೃಪ ಬೆದರಿ ಲೆಕ್ಕವಿಲ್ಲದಿರಲ್ಕೆ
ಒಂದಕ್ಕೆ ಹತ್ತಾಗಿ ಕೊಟ್ಟು ಕಳುಹಿದನು.
ದಂಡಿ ವೇಷದಿ ಬಂದು ಪರಿಕಿಸಲು ನಾವೆಯೊಳು ಸೊಪ್ಪು ಸದೆ ಇಹುದೆಂದುದದೆ ಸತ್ಯವಾಯ್ತು ಕ್ಷಮೆಯ ಬೇಡಲು ಬಳಿಕ ಕೊಟ್ಟನೆಲ್ಲವ ತಿರುಗಿ ಊರು ಕಾಣಲು ಮನೆಗೆ ಹೇಳಿ ಕಳುಹಿದರು.
ಪತಿಗಳೆ ಬಂದರೆಂದುದ ಕೇಳಿ ಸಂಭ್ರಮದಿ ತಾಯಿ ಹೊರಡಲು ಮಗಳು ಪೂಜೆ ಮುಗಿಸಿ ದೇವಪ್ರಸಾದವನು ಮರೆಯತೋಡುತ ನೋಡೆ ಪತಿಯು ನಾವೆಯ ಸಹಿತ ಕಾಣದಾದನ ಹೋ.
ಗೋಳಿಟ್ಟು ದೇವನನು ಮರೆಹೊಗಲು ಬಾನ್ನುಡಿಯ ಕೇಳಿ ಪ್ರಸಾದವನು ಭುಜಿಸಿ ಬರಲು ತೇಲಿತಾ ನಾವೆಯದು ಪತಿಯೊಡನೆ ಭಕ್ತಿಯಲಿ ಆಚರಿಸಿ ವ್ರತವನು ಸಕಲ ಸುಖವ ಹೊಂದಿದರು.
ರಾಜನಂಗಧ್ವಜನು ಬೇಟೆಯಾಡುತ ಬಂದು ಗೊಲ್ಲರಾಚರಿಸುತಿಹ ವ್ರತವ ಕಂಡು ಗರ್ವದಿಂ ತ್ಯಜಿಸುತ್ತೆ ದೇವಪ್ರಸಾದವನು
ಕಳೆದುಕೊಂಡನು ಸಕಲ ಸಿರಿಯ ಸುತರೊಡನೆ.
ಮದವಳಿಯೆ ಗೊಲ್ಲರೆಡೆ ಗೈತಂದು ಭಕ್ತಿಯಲಿ
ವ್ರತವ ಮಾಡುತೆ ಗೋಪ ಬಾಲರೊಡನೆ ಸುತರೊಡನೆ ಸಿರಿಯ ತಾ ತಿರುಗಿ ಪಡೆದನು ಜಗದಿ ಸತ್ಯದೇವನ ಮಹಿಮೆ ಹೇಳಲಸದಳವು.
ಸತ್ಯನಾರಾಯಣನೇ ಸತ್ಯಭಾಮಾಧವನೆ
ಸತ್ಯಗಣಪತಿರೂಪ ಸತ್ಯನಾಥ ಸತ್ಯ ಮಂಗಳ ನಿತ್ಯ ಬಿ ಚಿದಂಬರ ವಿನುತ
ಸತ್ಯನಿಧಿ ಸತ್ಯೇಶ ಶುಭ ಮಂಗಳಂ
#satyanarayankatha #pooje #devotionalsongs #music #sampradhayabhajan