Перейти к содержимому

ಪುಟ್ಟಿಸಿದ ಸ್ವಾಮಿ ನೀನು ಗಟ್ಟಿಯಾಗಿ ಹಿಡಿಯೊ ಎನ್ನ ಭಕ್ತಿಗೀತೆ ರಚನೆ ಮತ್ತು ರಾಗ ಸಂಯೋಜನೆ ಸತ್ವಿಜಯ ಭಟ್

Hari Vijaya Vittala

0:00 / 0:00

ಪುಟ್ಟಿಸಿದ ಸ್ವಾಮಿ ನೀನು ಗಟ್ಟಿಯಾಗಿ ಹಿಡಿಯೊ ಎನ್ನ ಭಕ್ತಿಗೀತೆ ರಚನೆ ಮತ್ತು ರಾಗ ಸಂಯೋಜನೆ ಸತ್ವಿಜಯ ಭಟ್

41 просмотр · 13 дн. назад
Hari Vijaya Vittala
88 подписчиков
41 просмотр · 13 дн. назад
ಶ್ರೀ ವೆಂಕಟೇಶ ಪರ ರಾಗ: ಭೀಮ್ ಪಲಾಸಿ ತಾಳ: ದಾದ್ರಾ ಪುಟ್ಟಿಸಿದ ಸ್ವಾಮಿ ನೀನು ಗಟ್ಟಿಯಾಗಿ ಹಿಡಿಯೊ ಎನ್ನ ಬಿಟ್ಟು ಹೋಗಬೇಡವೊ ಬೆಟ್ಟದೊಡೆಯ ತಿಮ್ಮಪ್ಪ || ಕಟ್ಟಿಕೊಂಡು ಬಂದ ಪಾಪ ಬೆಟ್ಟದಷ್ಟು ಇರುವುದಯ್ಯ ಸುಟ್ಟು ಬಿಡಲು ನಿನ್ನ ನಾಮ ನಿತ್ಯ ಸ್ಮರಿಸುವೆ ಹೊಟ್ಟೆ ಬಟ್ಟೆಗಾಗಿ ನಿಯತ ಕರ್ಮಗಳನು ಮಾಡುವೆನೊ ಕೆಟ್ಟ ಹಾದಿ ಹಿಡಿಯದಂತೆ ಒಟ್ಟು ನೀನಿರೊ ಎನ್ನ ಒಟ್ಟು ನೀನಿರೊ || ೧ || ಒಟ್ಟು ನೀನು ಇರಲು ದುಷ್ಟ ಶಕ್ತಿಗಳು ಮುಟ್ಟದಂತೆ ಗಟ್ಟಿ ರಕ್ಷೆ ಸುತ್ತಲಿಹುದು ಪರಮಪಾವನಾ ಮುಟ್ಟಿ ಭಜಿಸಲರಿಯೆನೊ ದೃಷ್ಟಿ ನೆಟ್ಟು ಚರಣದಲ್ಲಿ ನಿಷ್ಟೆಯಿಂದ ಪಾಡುವೆನೊ ವೆಂಕಟರಮಣ ಶ್ರೀ ವೆಂಕಟರಮಣ|| ೨ || ನಿಷ್ಟೆಯಿಂದ ಭಜಿಸಿದವರ ಇಷ್ಟಾರ್ಥಗಳನು ಈವ ಶಿಷ್ಟ ಜನಪಾಲನೆಂಬ ಬಿರುದುಳ್ಳವ ನೀನು ಸೃಷ್ಟೀಶ ಶ್ರೀ ಹರಿ ವಿಜಯ ವಿಠ್ಠಲಾ - ನೀ ಇಟ್ಟಂತೆ ಇರುವೆ ನಿನ್ನಡಿಗಳನು ಸಾರುತ || ೩ ||