Перейти к содержимому

ಮಹಾಭಾರತ - ಜರಾಸಂಧನ ಕುಚೇಷ್ಟೆಯ ಮಾತುಗಳಿಗೆ ಕೃಷ್ಣನ ಸವಾಲ್ - ಬಾ ಯುದ್ಧ ಮಾಡು

Namitha's vlog

0:00 / 0:00

ಮಹಾಭಾರತ - ಜರಾಸಂಧನ ಕುಚೇಷ್ಟೆಯ ಮಾತುಗಳಿಗೆ ಕೃಷ್ಣನ ಸವಾಲ್ - ಬಾ ಯುದ್ಧ ಮಾಡು

611 просмотров · 2 месяца назад
Namitha's vlog
564 подписчика
611 просмотров · 2 месяца назад
ಮಹಾಭಾರತದ ಕಥೆಯನ್ನು ನಾನು ಈಗಾಗಲೇ ಮಹಾಭಾರತ ಯುದ್ಧದ ಮೊದಲನೇ ದಿನದಿಂದ 18ನೇ ದಿನದ ವರೆಗಿನ ಯುದ್ಧದ ವಿವರಗಳ ವಿಡಿಯೋಗಳನ್ನು ನನ್ನ ಯೌಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದು ಈಗಾಗಲೇ ನಿಮ್ಮ ಗಮನಕ್ಕೆ ಬಂದಿದೆ. ಈತನ್ಮಧ್ಯೆ, ಮಹಾಭಾರತ ಕಥೆಯಲ್ಲಿ ಅನೇಕ ವಿಷಯಗಳು ನಾನು ಮಾಡಿರುವ ವಿಡಿಯೋಗಳಲ್ಲಿ ಬಿಟ್ಟುಹೋಗಿದೆ. ಅದನ್ನು ಹಂತ ಹಂತವಾಗಿ ನೀಡುತ್ತಾ ಬಂದಿದ್ದು ನಿನ್ನೆಯ ವಿಡಿಯೋ ದೊಂದಿಗೆ ಕೃಷ್ಣ ಸಂಧಾನ ಮತ್ತು ಕುಂತಿಕರ್ಣ ರ ಭೇಟಿಯಲ್ಲಿ ಮುಕ್ತಾಯವಾಗಿದೆ. ನಾನು ಇಂದಿನಿಂದ ಇನ್ನೂ ಉಳಿದಿರುವ ಮಹಾಭಾರತ ಯುದ್ಧದ ಪೂರ್ವ ಕಥೆಗಳ ವಿಡಿಯೋಗಳನ್ನು ನೀಡಲಿದ್ದೇನೆ. ಅಂತೆಯೇ ಈ ಮಾಲಿಕೆಯಲ್ಲಿ ಪಾಂಡವರು ಮತ್ತು ಕೌರವರ ವಿದ್ಯಾಭ್ಯಾಸ ಮುಗಿದ ನಂತರದ ಕಥೆಯನ್ನು ನೀಡುತ್ತೇನೆ. ನಿನ್ನೆಯ ವಿಡಿಯೋದಲ್ಲಿ ದುರ್ಯೋಧನನು ಪಾಂಡವರನ್ನು ವಾರಣಾವತದಲ್ಲಿ ಕೊಲ್ಲುವ ಯೋಜನೆ ಹಾಕುತ್ತಾನೆ. ಆದರೆ ವಿದುರನ ಚಾಣಾಕ್ಷತನದಿಂದ ಪಾಂಡವರು ತಪ್ಪಿಸಿಕೊಳ್ಳುತ್ತಾರೆ. ಪಾಂಡವರು ರಾತ್ರಿ ಇಡೀ ಪ್ರಯಾಣ ಮಾಡಿ ಒಂದು ಅರಣ್ಯವನ್ನು ಪ್ರವೇಶಿಸುತ್ತಾರೆ. ಅಲ್ಲಿ ಹಿಡಿಂಬ ಎಂಬ ನರಭಕ್ಷಕ ವಾಸವಾಗಿದ್ದ. ಹಿಡಿಂಬ ಅವರನ್ನು ಕೊಲ್ಲಲು ಅವನ ತಂಗಿಯನ್ನು ಕಳುಹಿಸುತ್ತಾನೆ. ಆದರೆ ಅವನ ತಂಗಿ ಹಿಡಿಂಬೆ ಭೀಮನನ್ನು ಕಂಡು ಮೋಹ ಪರವಶಳಾಗುತ್ತಾಳೆ. ಆಗ ಅಲ್ಲಿಗೆ ಬಂದ ಹಿಡಿಂಬ ಮತ್ತು ಭೀಮರ ಮಧ್ಯೆ ಯುದ್ಧ ನಡೆದು ಹಿಡಿಂಬ ಹತನಾಗುತ್ತಾನೆ. ಅನಂತರ ಕುಂತಿ ಭೀಮನಿಗೆ ಹಿಡಿಂಬೆಯೊಂದಿಗೆ ವಿವಾಹ ಮಾಡುತ್ತಾಳೆ. ಹಿಡಿಂಬೆಗೆ ಘಟೋತ್ಕಚ ಎಂಬ ಮಗ ಹುಟ್ಟುತ್ತಾನೆ. ಅನಂತರ ಅಲ್ಲಿಂದ ಹಿಡಿಂಬೆಗೆ ವಿದಾಯ ಹೇಳಿ ಪಾಂಡವರು ಏಕಚಕ್ರ ನಗರವನ್ನು ಪ್ರವೇಶಿಸುತ್ತಾರೆ. ಅಲ್ಲಿ ಬಕಾಸುರನ ಕಾಟವನ್ನು ಅರಿತ ಭೀಮನು ಬಕಾಸುರನ ಸಂಹಾರ ಮಾಡುತ್ತಾನೆ. ಮುಂದೆ ಅಲ್ಲಿಗೆ ಬಂದ ಒಬ್ಬ ಪ್ರವಾಸಿಗನು ಪಾಂಚಾಲದಲ್ಲಿ ದ್ರೌಪದಿಗೆ ಸ್ವಯಂವರವನ್ನು ಏರ್ಪಡಿಸಿದ ವಿಷಯವನ್ನು ಪಾಂಡವರಿಗೆ ತಿಳಿಸುತ್ತಾನೆ. ಇದನ್ನು ಕೇಳಿದ ಕುಂತಿಯು ಪಾಂಡವರನ್ನು ಕರೆದುಕೊಂಡು ಪಾಂಚಾಲಕ್ಕೆ ಬರುತ್ತಾಳೆ. ಅಲ್ಲಿ ಸ್ವಯಂವರದ ಸಿದ್ಧತೆ ಕಂಡು ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಸ್ವಯಂವರ ಪ್ರಾರಂಭವಾಗಿ ಎಲ್ಲಾ ರಾಜರುಗಳು ಸ್ಪರ್ಧೆಯಲ್ಲಿ ಭಾಗವಹಿಸಿದರೂ ಯಾರೂ ಗೆಲ್ಲುವುದಿಲ್ಲ. ಕೊನೆಗೆ ಬ್ರಾಹ್ಮಣನ ವೇಷದಲ್ಲಿದ್ದ ಅರ್ಜುನ ಸ್ಪರ್ಧೆಯನ್ನು ಗೆಲ್ಲುತ್ತಾನೆ. ಸ್ವಯಂವರ ಮುಗಿದು ದೌಪದಿಯೊಡನೆ ಪಾಂಡವರು ಮನೆಗೆ ಬರುತ್ತಾರೆ. ಇತ್ತ ದ್ರುಪದ ಮಹಾರಾಜನು ದ್ರೌಪದಿಯ ಮದುವೆಗೆ ಏರ್ಪಾಡು ಮಾಡಿ ಪಾಂಡವರಿಗೆ ಆಹ್ವಾನ ನೀಡುತ್ತಾನೆ. ದ್ರೌಪದಿಯೊಂದಿಗೆ ಪಂಚಪಾಂಡವರ ವಿವಾಹ ನೆರವೇರುತ್ತದೆ. ಇತ್ತ ಕೌರವರಿಗೆ ಪಾಂಡವರು ಬದುಕಿರುವ ಸುದ್ದಿ ಕೇಳಿ ಆಘಾತವಾಗುತ್ತದೆ. ಪಾಂಡವರು ಹಸ್ತಿನಾಪುರಕ್ಕೆ ಬರದಂತೆ ತಡೆಯಲು ದುರ್ಯೋಧನ ಯೋಜನೆ ಮಾಡುತ್ತಾನೆ. ಆದರೆ ಧೃತರಾಷ್ಟ್ರ ವಿದುರನನ್ನು ಪಾಂಡವರನ್ನು ಕರೆತರಲು . ಹಾಗೆ ಬಂದ ಪಾಂಡವರಿಗೆ ಹಸ್ತಿನಾಪುರದಲ್ಲಿ ಸ್ವಾಗತ ದೊರೆಯುತ್ತದೆ. ಆದರೆ ಯುಧಿಷ್ಠಿರನಿಗೆ ರಾಜ್ಯಾಭಿಷೇಕ ಮಾಡಿ ಖಾಂಡವಪ್ರಸ್ಥ ಎಂಬ ವ್ಯರ್ಥ ಭೂಮಿಯನ್ನು ನೀಡಿದ ಧೃತರಾಷ್ಟ್ರ. ಆದರೆ ಕೃಷ್ಣನು ಇಂದ್ರನಿಗೆ ಹೇಳಿ ಪಾಂಡವರಿಗೆ ಇಂದ್ರಪ್ರಸ್ಥ ನಗರವನ್ನು ನಿರ್ಮಾಣ ಮಾಡಿಸುತ್ತಾನೆ. ಅಲ್ಲಿಗೆ ಬಂದ ನಾರದರು ಪಾಂಡವರಿಗೆ ರಾಜಸೂಯ ಯಾಗವನ್ನು ಮಾಡಲು ಸಲಹೆ ನೀಡುತ್ತಾರೆ. ಪಾಂಡವರು ಕೃಷ್ಣನ ಅಭಿಪ್ರಾಯವನ್ನು ಕೇಳಿದಾಗ ಕೃಷ್ಣನು ಜರಾಸಂಧನ ಕಥೆಯನ್ನು ಹೇಳತೊಡಗುತ್ತಾನೆ. #mahabharata #abhimanyu #hindumythology #arjuna #kurukshetrawar #bhagavadgita #duryodhana #karna