ಏನ ಚಂದ ಬೀಳತಾವ ಡಿಂಪಲ್ಲ | Ena Chanda Belathava Dimpalla | New Javari Song 2026 @MaluNipanalMusic
HB Music
0:00 / 0:00
ಏನ ಚಂದ ಬೀಳತಾವ ಡಿಂಪಲ್ಲ | Ena Chanda Belathava Dimpalla | New Javari Song 2026 @MaluNipanalMusic
191 722 просмотра · 7 мес. назад
HB Music
604 подписчика
191 722 просмотра · 7 мес. назад
ಹಾಡಿನ ಶೀರ್ಷಿಕೆ: ಏನ ಚಂದ ಬೀಳತಾವ ಡಿಂಪಲ್ಲ
ಗಾಯನ: ರಾಕ್ ಸ್ಟಾರ್ ಬಾಬು ಮತ್ತು ಪರ್ವೀನ್ ಬೇಗಂ
ಸಾಹಿತ್ಯ: ರಾಕ್ ಸ್ಟಾರ್ ಬಾಬು
ಶೈಲಿ: ಉತ್ತರ ಕರ್ನಾಟಕದ ಜವಾರಿ ಗೀತೆ
ನಮಸ್ಕಾರ ಸ್ನೇಹಿತರೇ,
ನಮ್ಮ ಹೊಸ ಉತ್ತರ ಕರ್ನಾಟಕದ ಜವಾರಿ ಗೀತೆ "ಏನ ಚಂದ #ಬೀಳತಾವ ಡಿಂಪಲ್ಲ" ಈಗ ನಿಮ್ಮ ಮುಂದೆ. ಈ ಹಾಡು ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ.
• Muttu Hallyal Janapada Song @MuttuHalyalSi...
#JavariSong #NorthKarnataka #NewKannadaSong #FolkSong #DimpleSong #RockStarBabu
#song #folksongs #folkjanapada #indianfolksongs #muttuhalyalanewjanapadasongs #music #kannadajanapadasongs #musicmailarijanapadasong #parusukolurujanapadasong #malunipanalajanapdasong #bombat_basanna_new_janapada_song_2023 #balu_belagundi_new_songs #musicbabujamapurajanapadasong #en #chanda #bilathava #dimpalla #newtredingjanapdasong #janapdadjsong #janapdakaraoke @MaluNipanalMusic @parasu_kolur_singer @musicmailari5835 @Muttu_Halyal_Singer @MusicBabuJamapura
ಗೀತೆ - ಎನ್ ಚಂದ ಬೀಳುತವ ಡಿಂಪಲ್ಲ
ಸಾಹಿತ್ಯ - ರಾಕ್ ಸ್ಟಾರ್ ಬಾಬು ಜಮಾಪುರ
ಗಾಯನ - ರಾಕ್ ಸ್ಟಾರ್ ಬಾಬು ಜಮಾಪುರ ಮತ್ತು ಪರ್ವಿನ್ ಬೇಗಂ
ಪಲ್ಲವಿ :-
ಗಂ - ಎನ್ ಚಂದ ಬೀಳುತವ ಡಿಂಪಲ್ಲ ನೋಡಕ್ ಹುಡುಗಿ ನೀ ಸಿಂಪಲ್ ×2
ಗಂ - ಏನ ಚಂದ ನಿನ್ನ ನಡಿಗಿ ನೆದರ ಬಿಳದಂಗ ಹಚ್ಕೊರ ಕಾಡಿಗಿ
ಹೇ - ಏ ಮಾವ ಯಾಕನೋಡ್ತಿ ಡಿಂಪಲ್ಲಾ ಯಾವಾಗಲೂ ಇರತೇನ ಸಿಂಪಲ್ಲಾ×2
ಹೇ - ಮೊದಲ ನಾನ ಜವಾರಿ ಹುಡುಗಿ
ಏನರ ಅಂದರ ಹೇಳ್ತೀನಿ ಮಮ್ಮಿಗಿ
ಚರಣ - 01
ಗಂ - ಏನ ಚಂದ ಕುಣಸತಿ ನಿನ ಸೊಂಟ ಶಾಕ್ ಹೊಡದಂಗ ಹುಡುಗಿ ಕರೆಂಟ್
ಹೇ - ಯಾಕನೋಡ್ತಿ ಹುಡುಗ ನೀ ನನ್ನ ಸೊಂಟ
ಗಟ್ಟಿಯತಿಲ್ಲ ನೋಡ್ಕೋರ ನಿನ ಪ್ಯಾಂಟಾ
ಗಂ - ನಿನ್ನ ಮಾರಿಯಾ ಬಣ್ಣ ನೋಡಿ ಹಾಗಿನಿ ಸಣ್ಣ
ಹೇ - ಹಿಂದ ಬಂದರ ನೀನ ತಿನ್ನತಿಯ ಮಣ್ಣ
ಗಂ - ಏನರ ಆಗಲಿ ನೋಡೋಣ ಒಂದ ಕೈ
ಪ್ರೀತಿ ಮಾಡೋರಿಗೆ ಅನ್ನೋಣ ಜೈ ಜೈ
ಹೇ - ನಮ್ಮವಗ ಗೊತ್ತಾದ್ರ ಮುರಿತಳ ಕೈ
ಆಮ್ಯಾಲ ಹೆಂಗನತಿ ಜೈ ಜೈ
ಹೇ - ಮೊದಲ ನಾನ ಜವಾರಿ ಹುಡುಗಿ
ಗಂ - ಬಂದ ನೋಡ ಬಣಿವಿ ಮರಿಗಿ
ಚರಣ - 02
ಗಂ - ನಿಂತಲ್ಲಿ ಅಡಸತಿ ಕೈ ಕಾಲ
ನಿನ್ನ ನೋಡಿ ಹಗ್ಯಾರ ಕಂಗಾಲ
ಹೇ - ನನ್ನ ನೋಡಿ ಕಿಸಿಬ್ಯಾಡ ನೀ ಹಲ್ಲ
ಒರಿಸಿಗೋರ ನೀ ಬಾಯಗಿನ ಜೊಲ್ಲ
ಗಂ - ಏನ ನಿನ್ನ ಬೂಟಿ ಹತ್ತಿ ಬಂದರ ಸ್ಕೂಟಿ
ಹೇ - ಯಾಕ ಅಡ್ಡ ನಿಂತಿ ಗುದ್ದಿರ ವಯ್ಕೊಂತೋತಿ
ಗಂ - ಗುದ್ದಾರ ಗುದ್ದ ಹುಡುಗಿ ನಿನ ಒಂದ ಸರತಿ ಯಾವಾಗಲೂ ಇರ್ತೀಏನ ಜೀವನ ಪೂರ್ತಿ
ಹೇ - ನನ್ನ ಸಾಕಾಕ ನಿಂತಕ ಏನ ಐತಿ
ನನ್ನಿಂದ ಬಂದರ ನೀ ದೇವ್ರ ಗತಿ
ಹೇ - ಮೊದಲ ನಾನ ಜವಾರಿ ಹುಡುಗಿ
ಗಂ - ಹುಂ ಅಂದ ನೋಡ ಬರ್ತೀನಿ ಮನಿಗಿ
ಗಂ - ಎನ್ ಚಂದ ಬೀಳುತವ ಡಿಂಪಲ್ಲ ನೋಡಕ್ ಹುಡುಗಿ ನೀ ಸಿಂಪಲ್
ಹೇ - ಏ ಮಾವ ಯಾಕನೋಡ್ತಿ ಡಿಂಪಲ್ಲಾ ಯಾವಾಗಲೂ ಇರತೀನಿ ಸಿಂಪಲ್ಲಾ
ಗಂ - ಏನ ಚಂದ ನಿನ್ನ ನಡಿಗಿ
ಹೇ - ಮೊದಲ ನಾನ ಜವಾರಿ ಹುಡುಗಿ
............................